ಡಬಲ್ ಮೀನಿಂಗ್ ಕಮ್ಮಿ ಇದೆ ಎಮೋಷನ್ ಜಾಸ್ತಿ ಇದೆ: ಸಿದ್ಲಿಂಗು- 2 ಸೀಕ್ರೆಟ್ ರಿವೀಲ್ ಮಾಡಿ ಯೋಗಿ
ಈ ವರ್ಷ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ ಸಿದ್ಲಿಂಗು- 2 ಸಿನಿಮಾ. ಡಬಲ್ ಮೀನಿಂಗ್ ಡೈಲಾಗ್‌ಗೆ ಕಾಯುತ್ತಿದ್ದ ವೀಕ್ಷಕರಿಗೆ ಯೋಗಿ ಕೊಟ್ರು ಸಿಹಿ ಸುದ್ದಿ..
2012ರಲ್ಲಿ ಲೂಸ್ ಮಾದಾ ಯೋಗಿ ಮತ್ತು ರಮ್ಯಾ ನಟನೆಯ ಸಿದ್ಲಿಂಗು ಸಿನಿಮಾ ಸೂಪರ್ ಹಿಟ್ ಪ್ರದರ್ಶನ ಕಂಡಿತ್ತು. ಚಿತ್ರದ ಪ್ರತಿಯೊಂದು ಹಾಡು ಸೂಪರ್ ಹಿಟ್ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಕಲೆಕ್ಷನ್ ಮಾಡಿತ್ತು. ಹೀಗಾಗಿ ಸಿದ್ಲಿಂಗು -2 ಮಾಡಲು ಚಿತ್ರತಂಡ ಸಜ್ಜಾಗಿದೆ. ಚಿತ್ರದ ಬಗ್ಗೆ ಯೋಗಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.
'ಸಿದ್ಲಿಂಗು ಸಿನಿಮಾ ಮಾಡುವವರೆಗೂ ನಾನು ಡ್ಯಾನ್ಸ್, ಆಕ್ಷನ್ ಮತ್ತು ಮಾಸ್ ಮಸಾಲ ಸಿನಿಮಾಗಳನ್ನು ಮಾಡಿದ್ದೆ ಆದರೆ ನನ್ನಲ್ಲಿರುವ ಹಾಸ್ಯವನ್ನು ಜನರಿಗೆ ತೋರಿಸಿದ್ದು ಸಿದ್ಲಿಂಗು. ಚಿತ್ರದಲ್ಲಿ ಇರುವ ಡಬಲ್ ಮೀನಿಂಗ್ ಡೈಲಾಗ್‌ಗಳನ್ನು ತುಂಬಾ ಕ್ಲೆವರ್ ಆಗಿ ಬರೆಯಲಾಗಿದೆ. ಫ್ಯಾಮಿಲಿ ಜೊತೆ ಬರುವ ವೀಕ್ಷಕರು ತುಂಬಾ ಕ್ಲೀನ್ ಕಂಟೆಂಟ್ ಇರುವ ಸಿನಿಮಾಗಳನ್ನು ನೋಡಲು ಇಷ್ಟ ಪಡುತ್ತಾರೆ. ಸಿದ್ಲಿಂಗು 2ರಲ್ಲಿ ನಾವು ಡಬಲ್ ಮೀನಿಂಗ್ ಟೈಲಾಗ್‌ಗಳನ್ನು ಕಡಿಮೆ ಮಾಡಿ ಎಮೋಷನ್‌ಗಳನ್ನು ತುಂಬುತ್ತಿದ್ದೀವಿ. ಸೆಂಟಿಮೆಂಟ್ ವೀಕ್ಷಕರನ್ನು ಸೆಳೆಯುತ್ತದೆ ಖಂಡಿತಾ ಫ್ಯಾಮಿಲಿಗಳು ಇಷ್ಟ ಪಡುತ್ತಾರೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಯೋಗಿ ಮಾತನಾಡಿದ್ದಾರೆ.
ವೀಲ್‌ಚೇರ್‌ನಲ್ಲಿ ಕುಳಿತು ಬಂದ ತಮ್ಮ ನನ್ನನ್ನು ಗುರುತಿಸುತ್ತಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಮೋಕ್ಷಿತಾ
'16ನೇ ವಯಸ್ಸಿಗೆ ದುನಿಯಾ ಚಿತ್ರದಲ್ಲಿ ನಟಿಸಿದ್ದಕ್ಕೆ ನನ್ನ ಜೊತೆಗೆ ಇದ್ದವರು ತುಂಬಾ ಮೆಚ್ಚಿದ್ದರು. ಆ ವಯಸ್ಸಿನಲ್ಲಿ ರಿಯಾಲಿಟಿಗೆ ಹತ್ತಿರವಾಗಿರುವ ಪಾತ್ರಗಳನ್ನು ಮಾಡುವುದು ತುಂಬಾ ಕಷ್ಟ. ಈಗ ನಾನು ತುಂಬಾ ಒಳ್ಳೆ ಸ್ಥಾನದಲ್ಲಿ ನಿಂತಿದ್ದೀನಿ. ನನ್ನ ಪತ್ನಿ ನನ್ನ ಬಿಗ್ ಮೋಟಿವೇಟರ್. ನನ್ನ ಯಶಸ್ಸನ್ನು ನೋಡಬೇಕು ಎಂದು ಪದೇ ಪದೇ ನೆನಪಿಸುತ್ತಾಳೆ ಅಕೆಯ ಆಸೆಗಳನ್ನು ನೋಡಿದರೆ ಮತ್ತಷ್ಟು ಕೆಲಸ ಮಾಡಬೇಕು ಅನಿಸುತ್ತದೆ. ನನ್ನ ಕೈಯಲ್ಲಿ ಇನ್ನೂ ಎರಡು ಸಿನಿಮಾಗಳಿದೆ 2025ರಲ್ಲಿ ರಿಲೀಸ್ ಆಗಲಿದೆ. ಚಿತ್ರಕ್ಕೆ ಒಳ್ಳೆ ಕಥೆ ಇದ್ದರೆ ಖಂಡಿತಾ ಜನರು ಬಂದು ನೋಡುತ್ತಾರೆ ಎಂದು ಸುದೀಪ್ ಸರ್ ಮ್ಯಾಕ್ಸ್ ಸಿನಿಮಾ ಸಾಭೀತು ಮಾಡಿದೆ. ಕೈಯಲ್ಲಿ ಮೊಬೈಲ್ ಮನೆಯಲ್ಲಿ ಟಿವಿ ಇದ್ದರೂ ಜನರ ಮ್ಯಾಕ್ಸ್ ಸಿನಿಮಾ ನೋಡುತ್ತಿದ್ದಾರೆ ಒಳ್ಳೆ ವಿಮರ್ಶೆ ಕೊಡುತ್ತಿದ್ದಾರೆ' ಎಂದು ಯೋಗಿ ಹೇಳಿದ್ದಾರೆ.
ಹೊಸ ವರ್ಷ ಆಚರಿಸಿದ ರಾಕಿಂಗ್ ಫ್ಯಾಮಿಲಿ; ರಾಧಿಕಾ ಪಂಡಿತ್ ಫೋಟೋ ವೈರಲ್