ದಯಾಳ್‌ ಪದ್ಮನಾಭನ್‌ ನಿರ್ದೇಶನ ಹಾಗೂ ಲೂಸ್‌ ಮಾದ ಯೋಗೇಶ್‌ ಅಭಿನಯದ ‘ಒಂಬತ್ತನೇ ದಿಕ್ಕು’ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ . 

ಅದರ ಒಂದೂವರೆ ನಿಮಿಷದ ಬಿಟ್‌ಸಾಂಗ್‌ನ ಫೋಟೋ ಝಲಕ್‌ಅನ್ನು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿಕ್ಕ ಸಮಯದಲ್ಲಿ ನಾಯಕ ಯೋಗಿ ಮತ್ತು ನಾಯಕಿ ಅದಿತಿ ಪ್ರಭುದೇವ್‌ ಮಧ್ಯೆ ಏನೇನೆಲ್ಲ ನಡೆದು ಹೋಗುತ್ತೆ.

ಮೊದಲು ಅವರಿಬ್ಬರು ಆಕಸ್ಮಿಕವಾಗಿ ಭೇಟಿ ಆಗುತ್ತಾರೆ. ಆ ಭೇಟಿ ಪ್ರೀತಿ ಅರಳಲು ಕಾರಣವಾಗುತ್ತದೆ. ಕೊನೆಗೆ ಆ ಪ್ರೀತಿ ಮದುವೆಗೆ ತಿರುಗುತ್ತದೆ. ಅವರು ಅಂದುಕೊಂಡಂತೆ ಮದುವೆಯೂ ನಡೆದು ಹೋಗುತ್ತದೆ. ಅವರಿಬ್ಬರು ತಂದೆ - ತಾಯಿಯಾಗಿ ಅವರಿಗೊಬ್ಬ ಮಗ ಹುಟ್ಟುತ್ತಾನೆ. ಆತನೂ ದೊಡ್ಡವನಾಗಿ ಮದುವೆಯಾಗುತ್ತಾನೆ. ಅಲ್ಲಿಂದ ನಾಯಕ- ನಾಯಕಿ ವಯಸ್ಸಾಗಿ, ಗೋಡೆ ಮೇಲೆ ಅವರಿಬ್ಬರ ಫೋಟೋ ನೇತು ಬೀಳುತ್ತದೆ. ಅಲ್ಲಿ ತನಕ ಸಾಗುತ್ತದೆ ಈ ಬಿಟ್‌ ಸಾಂಗ್‌ ಕತೆ.

ಲೂಸ್ ಮಾದ ಯೋಗಿಯ ಲಿಟಲ್ ಪ್ರಿನ್ಸಸ್ 'ಶ್ರೀನಿಕಾ' ಪೋಟೋಸ್!

‘ನನ್ನ ಮಟ್ಟಿಗೆ ಇದೊಂದು ವಿಶೇಷವಾದ ಹಾಡು. ಸಣ್ಣದೊಂದು ಬಿಟ್‌ನಲ್ಲಿ ಇಷ್ಟೆಲ್ಲ ಸನ್ನಿವೇಶ ತಂದಿರುವುದು ಅಪರೂಪ. ಈ ಹಾಡಿಗೆ ಸೂಕ್ತವಾದ ಸನ್ನಿವೇಶಗಳನ್ನು ಚಿತ್ರೀಕರಿಸುವ ಬದಲಿಗೆ ಫೋಟೋಗಳನ್ನೇ ಬಳಸಿಕೊಂಡರೆ ಹೇಗೆ ಅಂತ ಟ್ರೈ ಮಾಡಿದ್ದೇವೆ. ಅಷ್ಟುಬಿಟ್‌ ಸಾಂಗ್‌ ಫೋಟೋಗಳ ಮೂಲಕ ಚಿತ್ರೀಕರಣಗೊಂಡಿದೆ. ಯೋಗಿ ಮತ್ತು ಅದಿತಿ ಅವರ ವಿವಿಧ ಗೆಟಪ್‌ಗಳ ಫೋಟೋಶೂಟ್‌ ಮಾಡಿಸಿ, ಆನಂತರ ಚಿತ್ರೀಕರಣ ಮಾಡಿದೆವು. ಅದು ಚೆನ್ನಾಗಿ ಬಂದಿದೆ’ ಎನ್ನುತ್ತಾರೆ ನಿರ್ದೇಶಕ ದಯಾಳ್‌.

"