ಬೆಂಗಳೂರು, (ಜೂನ್.07): ಇಂದು (ಭಾನುವಾರ) ವಿಧಿವಶರಾಗಿರುವ ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಅವರಿಗೆ ಕೊರೋನಾ ಸೋಂಕು ಇಲ್ಲ ಎಂದು ಲ್ಯಾಬ್ ವರದಿ ಸ್ಪಷ್ಟಪಡಿಸಿದೆ.

ಉಸಿರಾಟದ ಸಮಸ್ಯೆ ಇತ್ತು ಎನ್ನುವ ಕಾರಣಕ್ಕೆ ಆರೋಗ್ಯ ಇಲಾಖೆ ಮೃತದೇಹದ ಗಂಟಲು ದ್ರವದ ಮಾದರಿಯನ್ನು ಕೊವಿಡ್​-19 ಟೆಸ್ಟ್​ಗೆ ಒಳಪಡಿಸಿಲು ಸೂಚಿಸಿತ್ತು. ಅದರಂತೆ ಚಿರು ಸರ್ಜಾ ಮೃತದೇಹದ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಟೆಸ್ಟ್‌ಗೆ ಕುಳುಹಿಸಲಾಗಿತ್ತು.

ಅಂದು ಮತ್ತು ಇಂದು... ನಾವು ಹಾಗೇ ಇದ್ದೇವೆ.. ಕೊನೆ ಪಯಣದ ಹಿಂದಿನ ಪೋಸ್ಟ್

ಇದೀಗ ಆ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದ್ದು, ಅವರಿಗೆ ಕೊರೋನಾ ಸೋಂಕು ಇಲ್ಲ ಎನ್ನುವುದು ಖಚಿತವಾಗಿದೆ. ಉಸಿರಾಟದ ಸಮಸ್ಯೆ ಹಾಗೂ ಹೃದಯಾಘಾತದಿಂದ ಬೆಂಗಳೂರಿನ ಜಯನಗರದಲ್ಲಿರುವ ಸಾಗರ್​ ಅಪೋಲೋ ಆಸ್ಪತ್ರೆಯಲ್ಲಿ ಚಿರು ಸರ್ಜಾ ಕೊನೆಯುಸಿರೆಳೆದಿದ್ದಾರೆ.

ನಾಳೆ (ಸೋಮವಾರ) ಬೆಳಗ್ಗೆ 11ಕ್ಕೆ ತುಮಕೂರಿನ ಮಧುಗರಿಯ ಜಕ್ಕೇನಹಳ್ಳಿಯಲ್ಲಿ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು 150 ಜನರಿಗೆ  ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ.