ಹಂಸಲೇಖಾ-ರವಿಚಂದ್ರನ್ ಕಿತ್ತಾಟಕ್ಕೆ ಮೂಲ ಕಾರಣ ಬಿಚ್ಚಿಟ್ಟ ಲಹರಿ ವೇಲು: ಹೀಗೂ ಉಂಟೇ ಗುರೂ...!

1994-95 ನಲ್ಲಿ ಆಯ್ತು.. ನಾವು ಚೆನ್ನಾಗೇ ಇದೀವಿ, ಆದ್ರೆ ಕಾಂಬಿನೇಶನ್ ಕಟ್ ಆಯ್ತು ಅಷ್ಟೇ. ಆ ಕಾಂಬಿನೇಶನ್ ಕಟ್ ಆಗೋದ್ಮೇಲೆ ಅಂಥ ಸೂಪರ್ ಹಿಟ್ ಬರೋದು ತುಂಬಾ ಕಮ್ಮಿ ಆಗೋದ್ವು... ಆಮೇಲೂ ಕೂಡ ಬಹಳಷ್ಟು ಸಿನಿಮಾ ಮಾಡಿದ್ವಿ, ಆದ್ರೆ ಅದಕ್ಕೂ ಮೊದಲು ನಮ್ಮ ಹೊಂದಾಣಿಕೆ ತುಂಬಾ ಚೆನ್ನಾಗಿತ್ತು..

Lahari Velu talks about sandalwood super hit music fair Ravichandran and hamsalekha srb

ಸ್ಯಾಂಡಲ್‌ವುಡ್‌ನಲ್ಲಿ ರವಿಚಂದ್ರನ್ (V Ravichandran) ಹಾಗೂ ಹಂಸಲೇಖಾ (Hamsalekha) ಅವರದು ಸೂಪರ್ ಹಿಟ್ ಜೋಡಿ. 1980 ಹಾಗೂ 1990 ಕಾಲದಲ್ಲಿ ಈ ಜೋಡಿ ಅದೆಷ್ಟು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿದೆ ಎಂದರೆ, ಅಮದು ಕನ್ನಡ ಸಿನಿರಂಗವನ್ನು ಹಂಸಲೇಖಾ-ರವಿಚಂದ್ರನ್ ಜೋಡಿಯೇ ಆಳಿತ್ತು ಎನ್ನಬಹುದು. ಅಷ್ಟರಮಟ್ಟಿಗೆ ಅವರಿಬ್ಬರ ಕಾಂಬಿನೇಶನ್ ಸಖತ್ ಜಾದೂ ಸೃಷ್ಟಿಸಿತ್ತು. ಹಂಸಲೇಖಾ-ರವಿಚಂದ್ರನ್ ಜೊತೆ ಅಂದು ಕೈ ಜೋಡಿಸಿದ್ದು ಸಂಗೀತದ ಸಂಸ್ಥೆ ಲಹರಿ. 

ಹೌದು, ಸಂಗೀತ ಸೇವೆಗಾಗಿಯೇ ತಮ್ಮನ್ನು ಮುಡಿಪಾಗಿಟ್ಟಿದ್ದ ಲಹರಿ ಸಂಸ್ಥೆಯು, ವೇಲು ಅವರ ಒಡೆತನದಲ್ಲಿ ಕನ್ನಡ ಸಿನಿಮಾ ಉದ್ಯಮಕ್ಕೆ ಅಪಾರ ಕೊಡುಗೆ ಕೊಟ್ಟಿದೆ. ಲಹರಿ ವೇಲು ಅವರು ಕನ್ನಡ ಸಂಗೀತಕ್ಕೆ ನೀಡಿರುವ ಕೊಡುಗೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ ಲಹರಿ ವೇಲು ಬಹಳಷ್ಟು ವರ್ಷಗಳ ಕಾಲ, ಈಗಲೂ ಕೂಡ ಕನ್ನಡ ಸಿನಿಮಾ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. 

ರವಿಚಂದ್ರನ್ 'ರಾಮಾಚಾರಿ'ಗೆ ಡೇಟ್ಸ್ ಕೊಡದೇ ಸತಾಯಿಸಿದ್ದರೇ ಮಾಲಾಶ್ರೀ?

ಅಂಥ ವೇಲು ಅವರು ರವಿಚಂದ್ರನ್-ಹಂಸಲೇಖಾ ಜೋಡಿ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅವರಿಬ್ಬರ ಕಾಂಬಿನೇಶನ್‌ ಪೀಕ್‌ನಲ್ಲಿ ಇದ್ದಾಗ ಎಂತೆಂಥ ಹಾಡುಗಳು, ಸಾಹಿತ್ಯಗಳು ಕನ್ನಡ ಸಿನಿರಂಗಕ್ಕೆ ಸಿಕ್ಕವು, ಹಾಗೂ ಅವರಬ್ಬರ ಬ್ರೇಕಪ್ ಬಳಿಕ ಆದ ನಷ್ಟವೇನು ಎಂಬ ಬಗ್ಗೆ ಲಹರಿ ವೇಲು ಅವರು ತಮ್ಮದೇ ಆದ ರೀತಿಯಲ್ಲಿ, ಅನುಭವವನ್ನು ಹಂಚಿಕೊಂಡಿದ್ದಾರೆ. ಅದು ಇಲ್ಲಿದೆ, ನೋಡಿ..

'ರವಿ ಸರ್, ಹಂಸಲೇಖಾ ಮತ್ತು ಲಹರಿ ಸಂಸ್ಥೆ ಕಾಂಬಿನೇಶನ್ ಇತ್ತಲ್ಲಾ ಅದು ಅದ್ಭುತವಾದ ಕಾಂಬಿನೇಶನ್. ಅದು ಯಾರ ಕೆಟ್ಟ ಕಣ್ಣು ಬಿತ್ತೋ ಏನೋ! ಸತತವಾಗಿ ತುಂಬಾ ವರ್ಷ ಮಾಡಿಕೊಂಡು ಬಂದ್ವಲ್ಲಾ, ಯಾತ್ ಕೆಟ್ಟ ಕಣ್ಣು ಬಿತ್ತೋ, ಆ ಕಾಂಬಿನೇಶನ್ ಕಟ್ ಆಯ್ತು. ಆಗುತ್ತೆ ಏನೂ ಮಾಡ್ಲಿಕ್ಕೆ ಆಗಲ್ಲ. ಯಾಕಂದ್ರೆ ಯಾವುದೂ ಶಾಶ್ವತ ಅಲ್ವಲ್ಲಾ.. 

1994-95 ನಲ್ಲಿ ಆಯ್ತು.. ನಾವು ಚೆನ್ನಾಗೇ ಇದೀವಿ, ಆದ್ರೆ ಕಾಂಬಿನೇಶನ್ ಕಟ್ ಆಯ್ತು ಅಷ್ಟೇ. ಆ ಕಾಂಬಿನೇಶನ್ ಕಟ್ ಆಗೋದ್ಮೇಲೆ ಅಂಥ ಸೂಪರ್ ಹಿಟ್ ಬರೋದು ತುಂಬಾ ಕಮ್ಮಿ ಆಗೋದ್ವು.. ಅದು ಒಂದು ಘಳಿಗೆ, ಎಲ್ಲಾ ಸೇರಿರ್ತೀವಿ. ಒಟ್ಟಿಗೇ ಕೆಲಸ ಮಾಡ್ತಾ ಇರ್ತೀವಲ್ಲ, ಯಾರದೋ ಒಂದು ಲಕ್, ಯಾರದೋ ಶ್ರಮ, ಯಾರದೋ ಇನ್ನೇನೋ ಸೇರಿಕೊಂಡು ಚೆನ್ನಾಗಿ ವ್ಯವಹಾರ ಹೋಗ್ತಾ ಇರುತ್ತೆ.. ಆದ್ರೆ, ಎಲ್ಲಾನೂ ನಮ್ ಕೈನಲ್ಲಿ ಇಲ್ವಲ್ಲಾ.. ಋಣ ಅಷ್ಟೇ ಅಂದ್ಕೋಬೇಕು ನಾವು. 

ಡೇರ್ ಆಗಿ 'ಡೆವಿಲ್' ಹೀರೋ ದರ್ಶನ್ ಬಗ್ಗೆ ನಟಿ ತನಿಷಾ ಏನಂದ್ರು? ಯಾವ್ದು ಸ್ವಲ್ಪ ಓವರ್ ಆಯ್ತಂತೆ?

ಆಮೇಲೂ ಕೂಡ ಬಹಳಷ್ಟು ಸಿನಿಮಾ ಮಾಡಿದ್ವಿ, ಆದ್ರೆ ಅದಕ್ಕೂ ಮೊದಲು ನಮ್ಮ ಹೊಂದಾಣಿಕೆ ತುಂಬಾ ಚೆನ್ನಾಗಿತ್ತು.. ಎಲ್ಲವೂ ಒಂದು ದಿನ ಕೊನೆಗೊಳ್ಳಲೇ ಬೇಕು ಎಂಬ ತತ್ವವೇ ಇಲ್ಲೂ ಕೆಲಸ ಮಾಡಿದೆ ಎನ್ನಬಹುದು. ಒಟ್ಟಿನಲ್ಲಿ, ಅವರಿಬ್ಬರ ಕಾಂಬಿನೇಷನ್ ಮುರಿದುಬಿದ್ದ ಬಳಿಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಷ್ಟವಾಗಿದ್ದಂತೂ ಸುಳ್ಳಲ್ಲ ಎಂಬುದನ್ನು ಯಾರೂ ಒಪ್ಪದೇ ಇರಲಿ ಸಾಧ್ಯವಿಲ್ಲ. 

Latest Videos
Follow Us:
Download App:
  • android
  • ios