ಸಂಗೀತ ಕಲಾವಿದರಿಗೆ ನೆರವಾಗಿ ನಿಂತ ಲಹರಿ ವೇಲು.  ನಟ ಯಶ್ ಸ್ಫೂರ್ತಿ..

ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿ ಇರುವ ಸಂಗೀತ ಕಲಾವಿದರಿಗೆ ನೆರವಾಗಲು ಲಹರಿ ಆಡಿಯೋ ಸಂಸ್ಥೆಯ ಲಹರಿ ವೇಲು 10 ಲಕ್ಷ ರುಪಾಯಿಗಳನ್ನು ನೀಡಿದ್ದಾರೆ. ಕರ್ನಾಟಕ ಫಿಲಮ್ ಮ್ಯೂಸಿಶಿಯನ್‌ಸ್ ಅಸೋಸಿಯೇಷನ್‌ನ ಪರಿಹಾರ ನಿಧಿಗೆ ಹತ್ತು ಲಕ್ಷ ರುಪಾಯಿಗಳನ್ನು ನೀಡಿದ್ದಾರೆ.

ಲಹರಿ ಆಡಿಯೋಗೆ ಕೋಟಿ ಚಂದಾದಾರರು, ಸಂಗೀತ ಕ್ಷೇತ್ರ ನಮ್ಮನ್ನು ತಾಯಿಯಂತೆ ಸಾಕುತ್ತಿದೆ: ಲಹರಿ ವೇಲು 

ನಟ ಯಶ್ ಸಿನಿಮಾ ಕಾರ್ಮಿಕರಿಗೆ ದೊಡ್ಡ ಮಟ್ಟದಲ್ಲಿ ನೆರವು ನೀಡಿದ್ದಾರೆ. ಇದೇ ಸ್ಫೂರ್ತಿಯಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಮುಂದಾಗಿರುವುದಾಗಿ ಲಹರಿ ವೇಲು ಹೇಳಿಕೊಂಡಿದ್ದಾರೆ.

"

ಲಹರಿ ವೇಲು ಅವರ ನೆರವಿಗೆ ಸಂಗೀತ ಕಲಾವಿದರ ಸಂಘ ಕೃತಜ್ಞತೆ ಸಲ್ಲಿಸಿದೆ. ‘ನೀವು ನೀಡಿರುವ ಈ ನೆರವಿಗೆ ನಾವು ಚಿರಋಣಿಯಾಗಿರುತ್ತೇವೆ. ಈ ಹಣವನ್ನು ನಾವು ಸಂಕಷ್ಟದಲ್ಲಿರುವ ಸಂಗೀತ ಕಲಾವಿದರಿಗೆ ನೀಡುತ್ತೇವೆ’ ಎಂದು ಸಂಗೀತ ಕಲಾವಿದರ ಸಂಘದ ಅಧ್ಯಕ್ಷ ಸಾಧು ಕೋಕಿಲಾ ಹಾಗೂ ಪ್ರಧಾನ ಕಾರ್ಯದರ್ಶಿ ಧರ್ಮ ವಿಶ್ ತಿಳಿಸಿದ್ದಾರೆ.