ವಿಜಯ್ ದಳಪತಿ ಹಾಗೂ ವಿಜಯ್ ಸೇತುಪತಿಗೆ ಜೋಡಿಯಾಗಿ 'ಮಾಸ್ಟರ್‌' ಚಿತ್ರದಲ್ಲಿ ಕಾಣಿಸಿಕೊಂಡಿರುವ  ಮಾಡಲ್‌, ನಿರೂಪಕಿ ಕಮ್ ನಟಿ ರಮ್ಯಾ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಟ್ರೆಂಡ್‌ ಶುರು ಮಾಡುತ್ತಿದ್ದಾರೆ.  ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ನಟ-ನಟಿಯರು ಯೋಗ, ಕುಕ್ಕಿಂಗ್, ಲೈವ್‌ ಚಾಟ್‌ ಮಾಡುತ್ತಾ ಸಮಯವನ್ನು ವಿಭಿನ್ನವಾಗಿ ಕಳೆಯುತ್ತಿದ್ದಾರೆ. ಆದರೆ ನಟಿ ರಮ್ಯಾ ಕೊಂಚ ಡಿಫರೆಂಟ್‌ ಎಂದು ಈ ವಿಡಿಯೋ ಮೂಲಕ ಸಾಬೀತು ಮಾಡಿದ್ದಾರೆ . 

ಬಾಡಿ ಬಿಲ್ಡರ್‌ ರಮ್ಯಾ:

ಮನೆಯಲ್ಲಿ ಟೈಂ ಪಾಸ್‌ ಮಾಡಲು ವ್ಯಾಯಾಮ ಮಾಡುತ್ತಿದ್ದ ರಮ್ಯಾ ಒಂದು ದಿನ ದಿಢೀರನೆ ಬಾಡಿ ಬಿಲ್ಡರ್‌ ಆಗಲು ನಿರ್ಧರಿಸಿದ್ದಾರೆ, ಈ ಬಗ್ಗೆ ಟ್ಟಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮನೆಯಿಂದಲ್ಲೇ ಆನ್‌ಲೈನ್‌ ಬಾಡಿ ಬಿಲ್ಡಿಂಗ್‌ ಕ್ಲಾಸ್‌ಗೆ ಸೇರಿಕೊಂಡು ಸರ್ಟಿಫಿಕೇಟ್‌ ಪಡೆದುಕೊಂಡಿದ್ದಾರೆ. ರಮ್ಯಾ ಬಹಿರಂಗವಾಗಿ ಸರ್ಟಿಫಿಕೇಟ್‌ ರಿವೀಲ್‌ ಮಾಡಿದ್ದೇ ಮಾಡಿದ್ದು ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'Something good happened this lockdown after all' ( ಲಾಕ್ ಡೌನ್ ನಲ್ಲಿ ಒಂದೊಳ್ಳೆ ಕಾರ್ಯವಾಗಿದೆ ) ಎಂದು ಬರೆದುಕೊಂಡಿದ್ದಾರೆ.

ನಾಯಿ ಸತ್ತಾಗ ರಮ್ಯಾ ಡಿಪ್ರೆಶನ್‌ಗೆ ಹೋಗಿದ್ದರು:

ರಮ್ಯಾ ಸಾಕು ನಾಯಿ ಜರ್ಮನ್‌ ಶಪರ್ಡ್‌ ಮಿಲೋವನ್ನು ಕಳೆದುಕೊಂಡಾಗ ಆದ ನೋವಿನ ಬಗ್ಗೆ ಬರೆದುಕೊಂಡಿದ್ದರು. ರಾಷ್ಟ್ರವೇ ತಡೆಯಲಾಗದ ವೈರಸ್‌ ವಿರುದ್ಧ ಹೋರಾಡುತ್ತಿದ್ದರೆ ಮಿಲೋ ಕಾಯಿಲೆಗಳಿಂದ ಬಳಲುತ್ತಿದ್ದ. ಬ್ಯಾಕ್‌ ಟು  ಬ್ಯಾಕ್‌ ಸರ್ಜರಿ ಮಾಡಿಸಿಕೊಂಡರೂ ಅವನನ್ನು ಉಳಿಸಿಕೊಳ್ಳಲು ಆಗಲಿಲ್ಲ.  ಮಿಲೋವನ್ನ ಕಳೆದುಕೊಂಡ ನೋವಿನಲ್ಲಿ ರಮ್ಯಾ ಡಿಪ್ರೆಶನ್‌ಗೆ ಹೋಗಿದ್ದರಂತೆ.

ರಮ್ಯಾ 'ಮಾಸ್ಟರ್' ಕಥೆ:

ತಮಿಳು ವಾಹಿನಿಗಳಲ್ಲಿ ನಿರೂಪಕಿಯಾಗಿ ಗಮನ ಸೆಳೆದು ಹಲವು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡ ರಮ್ಯಾ ಈಗ ದಳಪತಿ ಹಾಗೂ ಸೇತುಪತಿ ಜೊತೆ 'ಮಾಸ್ಟರ್'ನಲ್ಲಿ ಮುಖ್ಯಪಾತ್ರದಲ್ಲಿ   ಕಾಣಿಸಿಕೊಂಡಿದ್ದಾರೆ .