ನಿರ್ದೇಶಕ ಸೂರಿ ಹಾಗೂ ಅಭಿಷೇಕ್‌ ಅಂಬರೀಶ್‌ ಕಾಂಬಿನೇಷನ್‌ನ ‘ಬ್ಯಾಡ್‌ಮ್ಯಾನರ್ಸ್‌’ ಚಿತ್ರಕ್ಕೆ ಇಬ್ಬರು ನಾಯಕಿಯರು ಆಯ್ಕೆ ಆಗಿದ್ದಾರೆ. ರಚಿತಾ ರಾಮ್‌ ಹಾಗೂ ಪ್ರಿಯಾಂಕ. ಒಬ್ಬರು ಹಳಬರು, ಮತ್ತೊಬ್ಬರು ಹೊಸಬರು.

"

ಪ್ರಿಯಾಂಕ ಅವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಅವರು ತಮಿಳು ಧಾರಾವಾಹಿಯಲ್ಲಿ ನಟಿಸಿ, ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡವರು. ಮೈಸೂರು ಮೂಲದ ಈಕೆಗೆ ‘ಬ್ಯಾಡ್‌ಮ್ಯಾನರ್ಸ್‌’ ಮೊದಲ ಸಿನಿಮಾ. ಅವರ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

ಇನ್ನೂ ನಟಿ ರಚಿತಾ ರಾಮ್‌ ‘ಅಮರ್‌’ ಚಿತ್ರದ ಒಂದು ಹಾಡಿನಲ್ಲಿ ಹೆಜ್ಜೆ ಹಾಕಿದವರು. ಈಗ ಅಭಿಷೇಕ್‌ಗೆ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗುತ್ತಿದ್ದಾರೆ. ಇಬ್ಬರು ನಾಯಕಿಯರು ಚಿತ್ರತಂಡಕ್ಕೆ ಜತೆಯಾದ ಮೇಲೆ ಚಿತ್ರೀಕರಣಕ್ಕೆ ಮತ್ತಷ್ಟುಜೋಶ್‌ ಬಂದಿದೆಯಂತೆ. ನಟಿ ತಾರಾ, ಶರತ್‌ ಲೋಹಿತಾಶ್ವ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಚರಣ್‌ ರಾಜ್‌ ಸಂಗೀತ ನೀಡುತ್ತಿದ್ದು, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಶೇಖರ್‌ ಛಾಯಾಗ್ರಾಹಣ ಮಾಡುತ್ತಿದ್ದಾರೆ. ಈಗಾಗಲೇ ಮಂಡ್ಯದಲ್ಲಿ ಚಿತ್ರೀಕರಣ ಆರಂಭವಾಗಿದೆ. ಚಿತ್ರದ ಫಸ್ಟ್‌ ಲುಕ್‌ನಿಂದಲೇ ಗಮನ ಸೆಳೆದ ಚಿತ್ರ ಇದಾಗಿದೆ. ಸುಧೀರ್‌ ಕೆಎಂ ನಿರ್ಮಾಣದ ಈ ಚಿತ್ರವಿದು.