ಕಿಚ್ಚ ಸುದೀಪ್‌ ಮುಂದಿನ ಸಿನಿಮಾ ಯಾವುದು?

-ಹೀಗೊಂದು ಪ್ರಶ್ನೆ ಸುದೀಪ್‌ ಅವರ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಸದ್ಯ ಕಿಚ್ಚನ ಮುಂದಿರುವ ಐದು ಸಿನಿಮಾ. ಅಷ್ಟೂಚಿತ್ರಗಳೂ ಪರಭಾಷೆಯವು. ಕನ್ನಡದಲ್ಲೂ ಇವರ ಎರಡು ಚಿತ್ರಗಳು ಸದ್ದು ಮಾಡುತ್ತಿವೆ. ಮಲಯಾಳಂ ಚಿತ್ರದಲ್ಲಿ ನಟಿಸುವಂತೆ ಸುದೀಪ್‌ ಅವರಿಗೆ ಬಂದಿರುವ ಅಹ್ವಾನ. ಗೋಕುಲ್‌ರಾಜ್‌ ಭಾಸ್ಕರ್‌ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿ ರಾಜ್‌ ನಾಯಕ. ಅಂದಹಾಗೆ ಇದು ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಹಿಂದಿ ಸೇರಿ ಪಂಚಭಾಷೆಗಳಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಇಂಥ ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ನಟಿಸುವ ಅಫರ್‌ ಕಿಚ್ಚನ ಮುಂದೆ ಬಂದು ನಿಂತಿದೆ.

ತಾಂತ್ರಿಕವಾಗಿಯೂ ಹೊಸ ರೀತಿಯ ಸಿನಿಮಾ ಇದು. ಹಾಲಿವುಡ್‌ನ ‘ಅವತಾರ್‌’ ಶೈಲಿಯ ಚಿತ್ರ. ಅವತಾರ್‌ ವಚ್ರ್ಯುವಲ್‌ ತಂತ್ರಜ್ಞಾನದಲ್ಲಿ ಮೇಕಿಂಗ್‌ ಮಾಡಿದ ಚಿತ್ರ. ಈ ಚಿತ್ರದ ನಂತರ ಮತ್ತೆ ಅಂಥಾ ತಂತ್ರಜ್ಞಾನ ಭಾರತೀಯ ಚಿತ್ರರಂಗದಲ್ಲಿ ಕಂಡುಬಂದಿಲ್ಲ. ಈಗ ಆ ಮೇಕಿಂಗ್‌ ಶೈಲಿಯನ್ನು ಬಳಸಿ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಲು ಹೊರಟಿರುವ ಮಲಯಾಳಂನ ಗೋಕುಲ್‌ ರಾಜ್‌ ಭಾಸ್ಕರ್‌ ಅವರು ಸುದೀಪ್‌ ಅವರನ್ನು ಅಹ್ವಾನಿಸಿದ್ದಾರೆ. ಹೀಗೆ ಒಂದು ಬಿಗ್‌ ಬಜೆಟ್‌ ಚಿತ್ರದ ಜತೆ ಸುದೀಪ್‌ ಹೆಸರು ಕೇಳಿ ಬಂದಿದ್ದು ಅವರ ಹುಟ್ಟು ಹಬ್ಬದ ದಿನ. ಸದ್ಯಕ್ಕೆ ಈ ಚಿತ್ರಕ್ಕೆ ಇನ್ನೂ ಸುದೀಪ್‌ ಅವರು ಓಕೆ ಅಂದಿಲ್ಲ.

ನಿರ್ದೇಶಕನಾಗುವ ನನ್ನ ಕನಸಿಗೆ ಉಪ್ಪಿ ಸ್ಫೂರ್ತಿ: ಶಿವರಾಜ್‌ಕುಮಾರ್‌ 

ಹಾಗೆ ನೋಡಿದರೆ ಮಲಯಾಳಂನಲ್ಲಿ ಪೃಥ್ವಿರಾಜ್‌ ಜತೆಗಿನ ಚಿತ್ರವೂ ಸೇರಿದಂತೆ ಎರಡು, ಹಿಂದಿ ಭಾಷೆಯ ಒಂದು, ತೆಲುಗು ಎರಡು ಚಿತ್ರಗಳಿಗೆ ಅಫರ್‌ ಬಂದಿದೆ. ಈ ಐದು ಚಿತ್ರಗಳಲ್ಲಿ ಸದ್ಯಕ್ಕೆ ಯಾವುದನ್ನೂ ಒಪ್ಪಿಲ್ಲ ಎನ್ನುವುದು ಸುದೀಪ್‌ ವಲಯದ ಸುದ್ದಿ. ಜತೆಗೆ ಕನ್ನಡದಲ್ಲಿ ಎನ್‌ ಕುಮಾರ್‌ ನಿರ್ಮಾಣದ ಸಿನಿಮಾ ಸೆಟ್ಟೇರಬೇಕಿದೆ. ಈ ಚಿತ್ರಕ್ಕೆ ಯಾವಾಗ ಪೂಜೆ ಆಗುತ್ತದೆಂಬುದು ಇನ್ನೂ ಗೊತ್ತಿಲ್ಲ. ಒಂದಿಷ್ಟುಕತೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಹುಟ್ಟು ಹಬ್ಬದ ಅಂಗವಾಗಿ ನಿರ್ದೇಶಕ ಜೋಗಿ ಪ್ರೇಮ್‌ ಅವರು ಮತ್ತೆ ಕಿಚ್ಚನ ಜತೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ‘ಸುದೀಪ್‌ ಅವರ ಜತೆ ಮತ್ತೆ ಸಿನಿಮಾ ಯಾವಾಗ ಎಂದು ಕೇಳುತ್ತಿದ್ದಾರೆ. ಅದಕ್ಕೆ ಉತ್ತರಿಸುವ ಸಮಯ ಬಂದಿದೆ. ನಾನು ಮತ್ತು ಸುದೀಪ್‌ ಅವರು ಜತೆಯಾಗಿ ಮತ್ತೊಂದು ಸಿನಿಮಾ ಮಾಡುತ್ತಿದ್ದೇವೆ. ಹಿಂದೆಂದೂ ನೋಡಿರದ ಅವತಾರದಲ್ಲಿ ಸುದೀಪ್‌ ಅವರನ್ನು ತೋರಿಸುವ ಸಿನಿಮಾ ಇದಾಗಲಿದೆ’ ಎಂದು ಜೋಗಿ ಪ್ರೇಮ್‌ ಟ್ವೀಟ್‌ ಮಾಡುವ ಮೂಲಕ ಕಿಚ್ಚನ ಅಭಿಮಾನಿಗಳಿಗೆ ಸಪ್ರೈಸ್‌ ಕೊಟ್ಟಿದ್ದಾರೆ.

ದರ್ಶನ್- ಸುದೀಪ್‌ ಸಂಬಂಧೀಕರು? ಒಳ್ಳೆ ಹುಡುಗ ಪ್ರಥಮ್‌ ಬಿಡಿಸಿಟ್ಟ ಸಂಬಂಧ!

ಸದ್ಯ ಅನೂಪ್‌ ಭಂಡಾರಿ ಜತೆಗಿನ ‘ಫ್ಯಾಂಟಮ್‌’ ಸಿನಿಮಾ ಶೂಟಿಂಗ್‌ನಲ್ಲಿರುವ ಸುದೀಪ್‌ ಈ ಚಿತ್ರದ ನಂತರ ಯಾವ ಸಿನಿಮಾದಲ್ಲಿ ನಟಿಸುತ್ತಾರೆಂಬ ಕುತೂಹಲ ಅಭಿಮಾನಿಗಳಲ್ಲಿದೆ. ಈ ನಡುವೆ ಸೂರಪ್ಪ ಬಾಬು ನಿರ್ಮಿಸಿ, ಶಿವಕಾರ್ತಿಕ್‌ ನಿರ್ದೇಶನದ ‘ಕೋಟಿಗೊಬ್ಬ 3’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಆನಂದ್‌ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಮೂರು ಟೀಸರ್‌ ಬಿಡುಗಡೆ ಮಾಡಿದ್ದು, ನೋಡುಗರಿಂದ ಅದ್ಭುತ ಪ್ರತಿಕ್ರಿಯೆ ಬರುತ್ತಿದೆ.