ಬೆಂಗಳೂರು(ಜು28)  ಹುಚ್ಚ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಒಂದು ಇತಿಹಾಸ ಸೃಷ್ಟಿಸಿದ ಚಿತ್ರ. 2001 ರಲ್ಲಿ ತೆರೆಕಂಡ ಚಿತ್ರ ಕಿಚ್ಚ ಸುದೀಪ್ ಗೆ ಹೊಸ ಇಮೇಜ್ ತಂದುಕೊಟ್ಟಿತ್ತು. ಅಂದು ಸುದೀಪ್ ವೇದಿಕೆ ಮೇಲೆ ಹಾಡಿದ್ದ ಗಾಯನ ಇಂದು ವೈರಲ್ ಆಗುತ್ತಿದೆ.

ಸುದೀಪ್ ಅಭಿಮಾನಿಗಳ ಪೇಜ್ ವಿಡಿಯೋ ಹಂಚಿಕೊಂಡಿದ್ದು ಎಲ್ಲರೂ ಹಳೆಯ ದಿನ ಮೆಲುಕು ಹಾಕುತ್ತಿದ್ದಾರೆ.  ವಿಭಿನ್ನ ಕತೆಯುಳ್ಳ ಹುಚ್ಚ ಸಿನಿಮಾ ಸೆಕೆಂಡ್ ಹಾಫ್ ನಲ್ಲಿ ಸುದೀಪ್ ನೀಡಿದ್ದ ಅಭಿನಯ ಎಂದೆಂದಿಗೂ ಮರೆಯುವ ಹಾಗೇ ಇಲ್ಲ.

ನಿರಂತರವಾಗಿ ಸಾಗಿದೆ ಕಿಚ್ಚನ ಸಮಾಜಮುಖಿ ಕೆಲಸಗಳು

ಕಿಚ್ಚ ಸುದೀಪ್ದ ವೇದಿಕೆ ಮೇಲೆ ಹಾಡುತ್ತಿದ್ದರೆ ಹುಚ್ಚ ಕ್ಯಾರೆಕ್ಟರ್ ಮೈಮೇಲೆ ತರಿಸಿಕೊಂಡ ಅಭಿಮಾನಿಯೊಬ್ಬರು ಹಾಗೆ ನಡೆದುಕೊಂಡು ಬರುತ್ತಾರೆ. ಚಿತ್ರ ಬಂದು ಸುಮಾರು ಇಪ್ಪತ್ತು ವರ್ಷಗಳೆ ಕಳೆದಿವೆ. ಆದರೆ ಅದು ನಿರ್ಮಾಣ ಮಾಡಿದ್ದ ದಾಖಲೆಗಳು ಹಾಗೆ ಇವೆ.

ಹುಚ್ಚ, ಕಿಚ್ಚನಾಗಿ ಕೋಟಿಗೊಬ್ಬದವರೆಗೆ ಸುದೀಪ್ ಸಿನಿಪಯಣ ಸಾಗುತ್ತಲೇ ಇದೆ.  ಬಿಗ್ ಬಾಸ್ ಸುದೀಪ್  ನಂತರದ ದಿನದಲ್ಲಿ ಅನೇಕ ಹಾಡುಗಳನ್ನು ಹಾಡಿದರು. ನೀವು ಒಮ್ಮೆ ವಿಡಿಯೋ ನೋಡಿಕೊಂಡು ಆ ಜಮಾನಕ್ಕೆ ಹೋಗಿ ಬನ್ನಿ...;