ಜು.28ರಂದು ನಟ ಸುದೀಪ್‌ ಅಭಿನಯದ, ಅನೂಪ್‌ ಭಂಡಾರಿ ನಿರ್ದೇಶನದ ‘ವಿಕ್ರಾಂತ್‌ ರೋಣ’ ಬಿಡುಗಡೆ ಆಗಲಿದ್ದು, ಈ ಚಿತ್ರವನ್ನು ಮತ್ತಷ್ಟು ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಹೊಸ ಮಾರುಕಟ್ಟೆಯ ತಂತ್ರಗಳ ಮೊರೆ ಹೋಗುತ್ತಿದೆ ಚಿತ್ರತಂಡ. 

ಜು.28ರಂದು ನಟ ಸುದೀಪ್‌ ಅಭಿನಯದ, ಅನೂಪ್‌ ಭಂಡಾರಿ ನಿರ್ದೇಶನದ ‘ವಿಕ್ರಾಂತ್‌ ರೋಣ’ ಬಿಡುಗಡೆ ಆಗಲಿದ್ದು, ಈ ಚಿತ್ರವನ್ನು ಮತ್ತಷ್ಟು ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಹೊಸ ಮಾರುಕಟ್ಟೆಯ ತಂತ್ರಗಳ ಮೊರೆ ಹೋಗುತ್ತಿದೆ ಚಿತ್ರತಂಡ. ಈ ನಿಟ್ಟಿನಲ್ಲಿ ಎನ್‌ಎಫ್‌ಟಿ ಹೆಸರಿನ ಕಾರ್ಪೋರೇಟ್‌ ಕಂಪನಿ ಕಿಚ್ಚ ವರ್ಸ್‌ ಹೆಸರಿನ ಡಿಜಿಟಲ್‌ ಜಗತ್ತನ್ನು ಸೃಷ್ಟಿಸಿದೆ. ಇಲ್ಲಿ ನಟ ಸುದೀಪ್‌ ಅವರ ಜತೆಗೆ ಚಾಟ್‌ ಮಾಡಬಹುದು, ಮಾತನಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರತಂಡದ ಜತೆಗ ಕೂತು ‘ವಿಕ್ರಾಂತ್‌ ರೋಣ’ ಚಿತ್ರದ ಪ್ರೀಮಿಯರ್‌ ಶೋ ನೋಡಬಹುದು.

ಕಿಚ್ಚ ವರ್ಸ್‌ ಲಾಂಚ್‌ ಹಿನ್ನೆಲೆಯಲ್ಲಿ ನಟ ಸುದೀಪ್‌, ಪ್ರಿಯಾ ಸುದೀಪ್‌, ನಿರ್ಮಾಪಕ ಜಾಕ್‌ ಮಂಜು ಹಾಗೂ ಎನ್‌ಎಫ್‌ಟಿ ಪ್ರತಿನಿಧಿಗಳು ಮಾಧ್ಯಮಗಳ ಮುಂದೆ ಹಾಜರಾದರು. ಈಗಾಗಲೇ ಸ್ಕೆಚ್‌ ಸ್ಪರ್ಧೆ ಆರಂಭವಾಗಿದ್ದು, ‘ವಿಕ್ರಾಂತ್‌ ರೋಣ’ ಚಿತ್ರದ ಸ್ಕೆಚ್‌ ಮಾಡಿದವರಿಗೆ ಎನ್‌ಎಫ್‌ಟಿ ಕಾರ್ಡ್‌ ನೀಡಲಾಗುವುದು. ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ ವಿಕ್ರಾಂತ್‌ ರೋಣ ಚಿತ್ರದ ಸ್ಕೆಚ್‌ ಬಿಡಿಸಿ kichchcaverse.ioನಲ್ಲಿ ಅಪ್‌ಲೋಡ್‌ ಮಾಡಬೇಕು. ಜು.24ರಿಂದ ಈ ವೆಬ್‌ಸೈಟ್‌ ಚಾಲನೆಗೊಳ್ಳಲಿದೆ. 

ಕನ್ನಡ್ ಅಲ್ಲ ಕನ್ನಡ....ಹಿಂದಿವಾಲನನ್ನು ತಿದ್ದಿದ ಸುದೀಪ್; ವಿಡಿಯೋ ವೈರಲ್

ಇದೇ ಮೊದಲ ಬಾರಿಗೆ ಹೊರದೇಶಗಳಲ್ಲಿ ಕನ್ನಡ ಸಿನಿಮಾವನ್ನು ಪ್ರೀಮಿಯರ್‌ ಶೋ ನಡೆಸುತ್ತಿದ್ದು, ಎನ್‌ಎಫ್‌ಟಿ ಆಯೋಜಿಸುವ ‘ವಿಕ್ರಾಂತ್‌ ರೋಣ’ ಚಿತ್ರದ ಪ್ರೀಮಿಯರ್‌ ಶೋ ನೋಡಲು, ಜತೆಗೆ ಸುದೀಪ್‌ ಅವರೊಂದಿಗೆ ಮಾತನಾಡಲು, ಸಮಯ ಕಳೆಯಲು ಎನ್‌ಎಫ್‌ಟಿ ಸದಸ್ಯತ್ವದ ಕಾರ್ಡ್‌ ತೆಗೆದುಕೊಳ್ಳಬೇಕು. ಸದಸ್ಯತ್ವದ ಶುಲ್ಕ ಎಷ್ಟುಎಂಬುದನ್ನು kichchcaverse.io ವೆಬ್‌ಸೈಟ್‌ನಲ್ಲಿ ಜು.24ರಂದು ತಿಳಿಸಲಾಗುವುದು. ನಟ ಸುದೀಪ್‌ ಮಾತನಾಡಿ, ‘ಎನ್‌ಎಫ್‌ಟಿ ಸಂಸ್ಥೆ ಸೃಷ್ಟಿಸಿರುವ ಕಿಚ್ಚ ವರ್ಸ್‌ ಬಗ್ಗೆ ಮೊದಲ ಬಾರಿ ಕೇಳಿದಾಗ ಹೇಗಿರುತ್ತೋ ಎಂಬ ಕಾಲ್ಪನಿಕ ಲೋಕದಲ್ಲಿದ್ದೆ. ನನಗೂ ಇದು ಅರ್ಥವಾಗಿರಲಿಲ್ಲ. 

ಬಾಲಿವುಡ್‌ನಲ್ಲಿ ಸೌತ್ ಸಿನಿಮಾಗಳ ಅಬ್ಬರದ ಬಗ್ಗೆ ಸುದೀಪ್ ಪ್ರತಿಕ್ರಿಯೆ ಹೀಗಿತ್ತು

ಆದರೆ ಅದನ್ನು ಸ್ವತಃ ನಾನೇ ನೋಡಿದಾಗ. ಅನುಭವಿಸಿದಾಗ ತುಂಬಾನೇ ಖುಷಿ ಪಟ್ಟೆ. ತುಂಬಾ ಅದ್ಭುತ ಕೆಲಸವನ್ನು ಈ ತಂಡ ಮಾಡಿದೆ’ ಎಂದರು. ‘ಕಿಚ್ಚ ವರ್ಸ್‌ ಕಿಚ್ಚನ ಜಗತ್ತಾಗಿದ್ದು ಈ ಲೋಕದಲ್ಲಿ ನೀವು ಕಿಚ್ಚನ ಜತೆ ಮಾತನಾಡಬಹುದು, ಅವರ ಜತೆ ಸಮಯ ಕಳೆಯಬಹುದು. ಕಿಚ್ಚನ ಅಭಿಮಾನಿಗಳಿಗೆ ಇದು ತುಂಬಾ ಖುಷಿ ಕೊಡಲಿದೆ. ಕಿಚ್ಚ ವರ್ಸ್‌ ಲೋಕ ಪ್ರವೇಶಿಸಲು ಎನ್‌ಎಫ್‌ಟಿ ಸದಸ್ಯತ್ವ ಕಾರ್ಡ್‌ ಪ್ರತಿಯೊಬ್ಬರು ಹೊಂದಿರಬೇಕು’ ಎಂದು ಕಾಫಿ ಆ್ಯಂಡ್‌ ಇನೋವೇಷನ್ಸ್‌ ಸಂಸ್ಥಾಪಕಿ ಪ್ರಿಯಾ ಸುದೀಪ್‌ ಹೇಳಿದರು. ನಿರ್ಮಾಪಕ ಜಾಕ್‌ ಮಂಜು, ಕಾಫಿ ಆ್ಯಂಡ್‌ ಬನ್‌ ಇನೋವೇಷನ್ಸ್‌ ಸಂಸ್ಥೆಯ ಸಿಇಓ ಜಾಕೀರ್‌ ಹುಸೇನ್‌ ಕಿಚ್ಚ ವರ್ಸ್‌ ಬಗ್ಗೆ ಮಾತನಾಡಿದರು.