ಬೆಂಗಳೂರು(ಜ.  21) ಗುಮ್ಮ ಬಂದ ..ಗುಮ್ಮ..ಬಂದ..  ಗುಮ್ಮ.. ಕಿಚ್ಚ ಸುದೀಪ್‌ ಅಭಿನಯದ ಬಹುನಿರೀಕ್ಷಿತ 'ಫ್ಯಾಂಟಮ್‌' ಸಿನಿಮಾದ ಟೈಟಲ್ ಬದಲಾಗಿದೆ  'ಫ್ಯಾಂಟಮ್' ಬದಲು 'ವಿಕ್ರಾಂತ್ ರೋಣ' ಅಭಿಮಾನಿಗಳ ಮುಂದೆ ಬರಲಿದೆ.

ಸೋಶಿಯಲ್ ಮೀಡಿಯಾದಲ್ಲಿ ತಂಡ ಈ ಬಗ್ಗೆ ತಿಳಿಸಿದರು ದೊಡ್ಡ ಮಟ್ಟದಲ್ಲಿ ಟೈಟಲ್ ಅನಾವರಣ ಆಗಲಿದೆ.   ಜನವರಿ 31ರಂದು ದುಬೈನ ಬುರ್ಜ್‌ ಖಲೀಫಾದಲ್ಲಿ 'ವಿಕ್ರಾಂತ್ ರೋಣ' ಲುಕ್ ಕಾಣಲಿದೆ.

ಜಗತ್ತಿನ ಅತೀ ಎತ್ತರ ಕಟ್ಟಡದಲ್ಲಿ ಟೈಟಲ್ ಲಾಂಚ್ ಮಾಡಿಕೊಳ್ಳಲಿರುವ ಕನ್ನಡದ ಮೊದಲ ಸಿನಿಮಾ 'ವಿಕ್ರಾಂತ್ ರೋಣ' ಎಂಬ ಕೀರ್ತಿಯೂ ದಕ್ಕಲಿದೆ.  ಟೈಟಲ್ ಲಾಂಚ್ ಜೊತೆಗೆ ಅಂದೇ ಚಿತ್ರದ 3 ನಿಮಿಷ ಒಂದು ಸ್ನೀಕ್ ಪೀಕ್ ವಿಡಿಯೋ ಸಹ ಲಾಂಚ್ ಆಗಲಿದೆ.

'ವಿಕ್ರಾಂತ್ ರೋಣ'  ಚಿತ್ರತಂಡ ತನ್ನ ಸಾಹಸಗಳನ್ನು ಅಭಿಮಾನಿಗಳ ಮುಂದೆ  ಇಡುವ ಸಾಧ್ಯತೆ ಇದೆ. ಸುದೀಪ್ ಅಭಿಮಾನಿಗಳಿಗೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 25 ವರ್ಷ ತುಂಬಿದ್ದು ಸಂಭ್ರಮವನ್ನು ಇಮ್ಮಡಿ ಮಾಡಿದೆ.