ಚಿತ್ರರಂಗದವರೇ ಮಾಡಿದ ಕೃತ್ಯ, ಯಾರು ಅಂತ ಗೊತ್ತಿದೆ; ಬೆದರಿಕೆ ಪತ್ರದ ಬಗ್ಗೆ ಸುದೀಪ್ ಶಾಕಿಂಗ್ ಹೇಳಿಕೆ

ಬೆದರಿಕೆ ಪತ್ರ ಬಂದಿರುವ ಬಗ್ಗೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದ ಚಿತ್ರರಂಗದವರೇ ಮಾಡಿದ ಕೃತ್ಯವಿದು, ಯಾರು ಅಂತನೂ ಗೊತ್ತಿದೆ ಎಂದು ಹೇಳಿದ್ದಾರೆ. 

kichcha sudeep about threat letter before oining politics sgk

ರಾಜಕೀಯ ಎಂಟ್ರಿ ಸುದ್ದಿ ವೈರಲ್ ಆದ ಬೆನ್ನಲ್ಲೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಸುದೀಪ್ ಅವಾಚ್ಯ ಶಬ್ದಗಳನ್ನು ಬಳಸಿ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿ ಸುದೀಪ್ ಅವರಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು ಯಾರು ಈ ಕೃತ್ಯ ಮಾಡಿದ್ದಾರೆ ಎನ್ನುವುದು ಗೊತ್ತಿದೆ ಅವರಿಗೆ ಸರಿಯಾದ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ. ಜೆಪಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮದ ಜೊತೆ ಮಾತನಾಡಿದ ಕಿಚ್ಚ ಸುದೀಪ್ ಚುನಾಣೆಗೆ ಸ್ಪರ್ಧಿಸುವ ಬಗ್ಗೆ ಸ್ಪಷ್ಟನೆ ನೀಡುವ ಜೊತೆಗೆ ಬೆದರಿಕೆ ಪತ್ರದ ಬಗ್ಗೆಯೂ ಮಾತನಾಡಿ ಅಚ್ಚರಿ ಹೇಳಿಕೆ ನೀಡಿದರು. 

ರಾಜಕೀಯ ಎಂಟ್ರಿ ಸುದ್ದಿ ವೈರಲ್ ಆದ ಬೆನ್ನಲ್ಲೇ ಬೆದರಿಕೆ ಪತ್ರ ಬಂದಿರುವ ಬಗ್ಗೆ ಮಾತನಾಡಿದ ಸುದೀಪ್ ಇದು ರಾಜಕೀಯಕ್ಕೆ ಸಂಬಂಧಿಸಿದಲ್ಲ,  ಚಿತ್ರರಂಗದವೇ ಈ ಕೃತ್ಯ ಮಾಡಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ. ಕಿಚ್ಚನ ಈ ಹೇಳಿಕೆ ಈಗ ಸ್ಯಾಂಡಲ್ ವುಡ್‌ನಲ್ಲಿ ಸಂಚಲನ ಮೂಡಿಸಿದೆ. ಸುದೀಪ್ ಅವರನ್ನು ಎದುರು ಹಾಕಿಕೊಂಡ ಸ್ಟಾರ್ ಯಾರು? ಕಿಚ್ಚನಿಗೆ ಬೆದರಿಕೆ ಹಾಕಿ ಪತ್ರ ಬರೆದಿದ್ದು ಯಾರು ಎಂದು ತಲೆಕೆಡಿಸಿಕೊಂಡಿದ್ದಾರೆ. ಮತ್ತೆ ಚಿತ್ರರಂಗದ ಮೇಲೆ ಅಭಿನಯ ಚಕ್ರವರ್ತಿ ಮುಗಿಬಿದ್ದಿದ್ದು ಅಚ್ಚರಿ ಮೂಡಿಸಿದೆ. 

ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ: ಕಿಚ್ಚ ಸುದೀಪ್ ಸ್ಪಷ್ಟನೆ

ನಮ್ಮ ಮನೆ ಅಡ್ರೆಸ್ ಗೊತ್ತಿದೆ. ಪತ್ರ ಬರೆದು ಹಾಕಿದ್ದಾರೆ. ಇದು ರಾಜಕೀಯದಲ್ಲಿ ಇರುವವರ ಕೈವಾಡ ಅಲ್ಲವೇ ಅಲ್ಲ. ಸಿನಿಮಾರಂಗದಲ್ಲಿ ಇರುವವರೇ ಈ ರೀತಿಯ ಕೃತ್ಯ ಮಾಡಿದ್ದಾರೆ. ಅವರು ಯಾರು ಎನ್ನುವುದು ನನಗೆ ಗೊತ್ತಿದೆ. ಅವರಿಗೆ ಯಾವ ರೀತಿಯ ಉತ್ತರ ಕೊಡಬೇಕೋ ಹಾಗೆ ಕೊಡುತ್ತೇನೆ. ಅದು ಯಾರು ಅಂತ ಗೊತ್ತು ನನಗೆ. ಇವತ್ತು ನಾನು ಮಾತನಾಡಲ್ಲ. ಇದಕ್ಕೆ ಹೇಗೆ ಉತ್ತರ ಕೊಡಬೇಕೋ ಹಾಗೆ ಕೊಡುತ್ತೇನೆ' ಎಂದು ಹೇಳಿದ್ದಾರೆ. 'ಮೊದಲು ಇಮೇಲ್ ಬರ್ತಿತ್ತು, ಇದೀಗ ಪತ್ರ ಬರೆದಿದ್ದಾರೆ' ಎಂದು ಹೇಳಿದ್ದಾರೆ. 

ಸುದೀಪ್ ಬಿಜೆಪಿಗೆ; ಸುಳ್ಳು ಸುದ್ದಿ, ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದ ಪ್ರಕಾಶ್ ರಾಜ್

ಸುದೀಪ್ ಅವರಿಗೆ ಬೆದರಿಕೆ ಪತ್ರ ಬಂದಿರುವ ಬೆನ್ನಲ್ಲೇ ಸುದೀಪ್ ಮ್ಯಾನೇಜರ್ ಜಾಕ್ ಮಂಜು ಪಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಫ್ ಐ ಆರ್ ದಾಖಲಾಗಿದೆ. ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಗೊಳಿಸಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ನೀಡಿದ್ದಾರೆ. ಪ್ರಕರಣದ ತನಿಖೆ ಜವಾಬ್ದಾರಿ ಈಗ ಸಿಸಿಬಿ ಹೆಗಲಿಗೆ ಬಿದ್ದಿದೆ. 
 

Latest Videos
Follow Us:
Download App:
  • android
  • ios