ರಿಯಲ್ ಸ್ಟಾರ್ ಉಪೇಂದ್ರ, ರಚಿತಾ ರಾಮ್ ಅಭಿನಯದ  ’ಐ ಲವ್ ಯೂ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ನಿಂದಲೇ ಗಮನ ಸೆಳೆದ ಚಿತ್ರ. ಈ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ. 

ಕಿಚ್ಚ ಸುದೀಪ್ ಸಾಕಷ್ಟು ಹೊಸ ಸಿನಿಮಾಗಳ ಟ್ರೇಲರ್, ಟೀಸರ್ ರಿಲೀಸ್ ಮಾಡಿ ವಿಶ್ ಮಾಡುತ್ತಿರುತ್ತಾರೆ. ಅದೇ ರೀತಿ ಉಪೇಂದ್ರ ಅವರ ’ಐ ಲವ್ ಯೂ’  ಚಿತ್ರದ ಟ್ರೇಲರ್ ರಿಲೀಸ್ ಮಾಡುತ್ತಾರೆ. 

ಇಷ್ಟು ದಿನ ಪ್ರಜಾಕೀಯ ಕೆಲಸದಿಂದ ಉಪೇಂದ್ರ ಬ್ಯುಸಿ ಇದ್ದಿದ್ದರಿಂದ ಟ್ರೇಲರ್ ರಿಲೀಸ್ ಸ್ವಲ್ಪ ತಡವಾಗಿದೆ. ಇದೀಗ ಸ್ವಲ್ಪ ಬಿಡುವಾಗಿದ್ದರಿಂದ ಟ್ರೇಲರ್ ರಿಲೀಸ್ ಮಾಡಲಿದ್ದಾರೆ.  ಆರ್ ಚಂದ್ರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮುಂದಿನ ತಿಂಗಳು ಈ ಚಿತ್ರ ತೆರೆಗೆ ಬರಲಿದೆ. 

ಈ ಚಿತ್ರ ಕನ್ನಡದ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗಲಿದೆ. ಉಪೇಂದ್ರ, ರಚಿತಾ ರಾಮ್ ರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.