ನವರಸ ನಾಯಕ ಜಗ್ಗೇಶ್ ಬಹು ನಿರೀಕ್ಷಿತ ಚಿತ್ರ ’ಪ್ರೀಮಿಯರ್ ಪದ್ಮಿನಿ’ ತೆರೆ ಕಂಡಿದೆ. ಎಂಟರ್ ಟೇನ್ಮೆಂಟ್, ಎಮೋಶನ್ ಎಲ್ಲಾ ಇರುವ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಈ ಚಿತ್ರವನ್ನು ಕಿಚ್ಚ ಸುದೀಪ್ ನೋಡಿ ಮೆಚ್ಚಿಕೊಂಡಿದ್ದಾರೆ. 

 

ಪ್ರೀಮಿಯರ್ ಪದ್ಮಿನಿಯಲ್ಲಿ ಭಾವನೆಗಳನ್ನು ಚೆನ್ನಾಗಿ ಕಟ್ಟಿಕೊಂಡಿದ್ದಾರೆ. ಪ್ರತಿ ಪಾತ್ರಕ್ಕೂ ಜೀವ ತುಂಬಿದ್ದಾರೆ. ಚಿತ್ರದ ನೋಡುವಾಗ ಪ್ರತಿ ಕ್ಷಣದಲ್ಲೂ ನಿರ್ದೇಶಕರ ಕ್ರಿಯೆಟಿವಿಟಿ ಗೊತ್ತಾಗುತ್ತದೆ. ಚಿತ್ರ ತುಂಬಾ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ಸೂಪರ್ಬ್ ಎಂದು ಬರೆದುಕೊಂಡಿದ್ದಾರೆ. 

ಇದಕ್ಕೆ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ. ಹೈದರಾಬಾದಿನ ಚಿತ್ರೀಕರಣದ ನಡುವೆಯೂ ಬಿಡುವು ಮಾಡಿಕೊಂಡು  ನೋಡಿ ಚಿತ್ರತಂಡಕ್ಕೆ ಹಾರೈಸಿದ್ದು ಕಂಡು ಕನ್ನಡ ಚಿತ್ರರಂಗದ ಬಗ್ಗೆ ನಿಮಗಿರುವ ಬದ್ಧತೆ ಪ್ರೀತಿ ನಿರೂಪಿಸಿದ್ದೀರಿ. ಧನ್ಯವಾದಗಳು. ಸಣ್ಣಪದ. I Just say I love you.. ನಿಮ್ಮ ಸರ್ಜಕಾರ್ಯ ಜಯಪ್ರದವಾಗಲಿ ಎಂದು ಶುಭ ಹಾರೈಸಿದ್ದಾರೆ. 

’ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿ ಜಗ್ಗೇಶ್ ಜೊತೆ ಮಧುಬಾಲಾ, ಸುಧಾರಾಣಿ, ಪ್ರಮೋದ್, ವಿವೇಕ್ ಸಿಂಹ, ಹಿತಾ ಚಂದ್ರಶೇಖರ್ ಸೇರಿದಂತೆ ಹಲವರು ನಟಿಸಿದ್ದಾರೆ. ಶ್ರುತಿ ನಾಯ್ಡು ನಿರ್ಮಾಣ ಮಾಡಿ, ರಮೇಶ್ ಇಂದಿರಾ ನಿರ್ದೇಶನ ಮಾಡಿದ್ದಾರೆ.