ಕಾಂತಾರ ಸಿನಿಮಾ ಮೆಚ್ಚಿಕೊಂಡ ಕಿಚ್ಚ ಸುದೀಪ್. ಜನರ ಮೇಲೆ ಮಾಡಿರುವ ಇಂಪ್ಯಾಕ್ಟ್ ಬಗ್ಗೆ ಮಾತನಾಡಿದ ನಟ...
ಕನ್ನಡ ಚಿತ್ರರಂಗದಲ್ಲಿ ಹಿಸ್ಟರ್ ಕ್ರಿಯೇಟ್ ಮಾಡುತ್ತಿರುವ ಕಾಂತಾರ ಸಿನಿಮಾವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವೀಕ್ಷಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಪೋರ್ಟ್, ರಿಷಬ್ ನಟ ಮತ್ತು ನಿರ್ದೇಶನದ ಬಗ್ಗೆ ಪತ್ರದ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕಾಂತಾರ ಸಿನಿಮಾ ಗೆದ್ದಿದೆ. ವಿಶ್ವದೆಲ್ಲೆಡೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಸಿನಿಮಾ ಬಿಡುಗಡೆಯಾದ ಆರಂಭದ ಆರು ದಿನಗಳ ಎಲ್ಲೆಡೆಯೂ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿದೆ. ಬೇರೆ ರಾಜ್ಯ, ಬೇರೆ ದೇಶಗಳಲ್ಲಿ ಜನ ಕಿಮೀಗಟ್ಟಲೆ ಡ್ರೈವ್ ಮಾಡಿಕೊಂಡು ಬಂದು ಸಿನಿಮಾ ನೋಡುತ್ತಿದ್ದಾರೆ. ಬೇರೆ ಭಾಷೆಯ ಜನ ಸಬ್‌ಟೈಟಲ್ ಮೂಲಕ ಸಿನಿಮಾ ನೋಡಿ ಥ್ರಿಲ್ ಆಗಿ ಮೆಚ್ಚಿಕೊಳ್ಳುತ್ತಿದ್ದಾರೆ.
ಸುದೀಪ್ ಪತ್ರ:
'ಸಿನಿಮಾ ನೋಡಿ ಪತ್ರ ಬರೆಯುವಂತೆ ಮಾಡಿದ ತಂಡಕ್ಕೆ (ಹಾರ್ಟ್ ಸಿಂಬಲ್).
ಸಿನಿಮಾಗಳು ಚೆನ್ನಾಗಿರುತ್ತದೆ ಹಾಗೂ ನಮ್ಮನ್ನು ಫ್ಯಾಸಿನೇಟ್ ಮಾಡುತ್ತದೆ ಆದರೆ ಕೆಲವು ಸಿನಿಮಾಗಳು ನಮ್ಮನ್ನು ಮೌನಿಯಾಗಿಸಿ ಬಿಡುತ್ತದೆ. ಅದೇ ಕಾಂತಾರ ಸಿನಿಮಾ. ಕಾಂತಾರಾ ಸಿನಿಮಾ ದೊಡ್ಡ ಪರಿಣಾಮ ಬೀರಿದೆ. ತುಂಬಾ ಸಿಂಪಲ್ ಪ್ಲಾಟ್, ಅದ್ಭುತವಾಗಿ ಬರೆದಿರುವ ಕಥೆ ಮತ್ತು ಮನ ಮುಟ್ಟುವಂತೆ ಜನರನ್ನು ಮೆಚ್ಚಿಸಿದೆ. ಅಮೋಘವಾಗಿ ರಿಷಬ್ ಶೆಟ್ಟಿ ಅಭಿನಯಸಿದ್ದಾರೆ. ನಾವು ಕುಳಿತುಕೊಂಡು ಆಲೋಚಿಸ ಬೇಕು ಹೇಗೆ ಒಬ್ಬ ವ್ಯಕ್ತಿ ಈ ರೀತಿ ಯೋಚನೆ ಮಾಡುತ್ತಾರೆಂದು. ಸಿನಿಮಾದಲ್ಲಿ ತೋರಿಸುವಷ್ಟು ಅದ್ಭುತಾಗಿ ಸಿನಿಮಾ ಕಥೆ ಬರೆಯುವಾಗ ಇತ್ತೋ ಇಲ್ವೋ ಆದರೆ ತೆರೆ ಮೇಲೆ ವಂಡರ್ ಕ್ರಿಯೇಟ್ ಮಾಡುತ್ತದೆ. ಕ್ಲೈಮ್ಯಾಕ್ಸ್ ಪೇಪರ್ನಲ್ಲಿದ್ದರೆ ಅದೊಂದು ಸಾಮಾನ್ಯ ಎಂಡಿಂಗ್ ಆಗಿರುತ್ತಿತ್ತು ತೆರೆ ಮೇಲೆ ಸೂಪರ್ ಅಸಾಮಾನ್ಯವಾಗಿದೆ. ಇದು ನಿರ್ದೇಶಕರ ದೃಷ್ಟಿ, ಈ ರೀತಿ ದೃಶ್ಯಗಳನ್ನು ವೀಕ್ಷಕರಿಗೆ ತೋರಿಸಬೇಕು ಅವರಿಗೆ ಸುಲಭವಾಗಿ ಅರ್ಥ ಮಾಡಿಸಲು ಸಾಹಸ ಮಾಡಿರುವುದಕ್ಕೆ ನನ್ನ ಕಡೆಯಿಂದ ಚಪ್ಪಾಳೆ. ಈ ಕಥೆ ಮೇಲೆ ನಂಬಿಕೆ ಇಟ್ಟು ಟೀಂ ಜೊತೆಗೆ ನಿಂತಿದ್ದಕ್ಕೆ ಮೆಚ್ಚುಗೆಗೆ ಅರ್ಹವಾಗಿದೆ. ಕ್ರಿಯೇಟಿವ್ ಟೀಂ ಮತ್ತು ರಿಷಬ್ ಶೆಟ್ಟಿ ಇಷ್ಟೊಂದು intensity ಮತ್ತು ಡೀಪ್ ಅಗಿ ಸಿನಿಮಾ ಮಾಡಿರುವುಕ್ಕೆ ನನ್ನ ಅಪ್ಪುಗೆ. ಸಂಗೀತ ನಿರ್ದೇಶಕ ಅಜನೀಶ್ ನೀವು ನಿಜಕ್ಕೂ ಮಾಸ್ಟರ್. ಹೊಂಬಾಳೆ ಫಿಲ್ಮ್ಸ್‌ಗೆ ಶುಭವಾಗಲಿ. ಕಥೆ ಮತ್ತು ತಂಡದ ಪರಿಶ್ರಮವನ್ನು ನಂಬಿ ಜೊತೆ ನಿಂತದ್ದಕ್ಕೆ ನಿಮಗೆ ಧನ್ಯವಾದಗಳು. ನಾನು ಆರಾಮ್ ಆಗಿ ಕುಳಿತುಕೊಂಡು ಸಿನಿಮಾ ನೋಡಿದೆ. ಎಲ್ಲರ ವಿಮರ್ಶೆಯನ್ನು ಅನುಭವಿಸಲು ನಾನು ಆರಂಭಿಸಿರುವೆ. ಈ ಸಿನಿಮಾ ಅವೆಲ್ಲವನ್ನೂ ಮೀರಿಸಿತು' ಎಂದು ಸುದೀಪ್ ಬರೆದಿದ್ದಾರೆ.
ಸುದೀಪ್ ಪುತ್ರಿ ಸಾನ್ವಿ ಮಾತು:
'ಈಗಷ್ಟೆ ಕಾಂತಾರ ಸಿನಿಮಾ ವೀಕ್ಷಿಸಿದೆ. ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ರಿಷಬ್ ಶೆಟ್ಟಿ ಅವರಿಂದ ಅದ್ಭುತವಾದ ಮಾಸ್ಟರ್ ಪೀಸ್. ಇಡೀ ತಂಡಕ್ಕೆ ಹ್ಯಾಟ್ಸಾಫ್' ಎಂದು ಹೇಳಿದರು.
ರಿಷಬ್ ಮಾತು:
'ನನ್ನ ಬಳಿ 36 ಕತೆಗಳು ಇದ್ದವು. ಅದರಲ್ಲಿ ಯಾವ ಕತೆ ಮಾಡಬೇಕು ಎಂಬ ಆಲೋಚನೆಯಲ್ಲಿದ್ದೆ. ಒಂದು ದಿನ ಗೆಳೆಯ ದೀಪು ಬಂದು ಅವನ ತಂದೆ ಹಂದಿ ಕೊಲ್ಲುವುದಕ್ಕೆಂದು ಮನೆಯಲ್ಲಿ ಕೋವಿ ತಂದಿಟ್ಟುಕೊಂಡು, ಅದು ಅರಣ್ಯಾಧಿಕಾರಿಗೆ ಗೊತ್ತಾಗಿ ಅವರು ಬಂದು ಅರೆಸ್ಟ್ ಮಾಡಿಕೊಂಡು ಹೋದ ಕತೆ ಹೇಳಿದ. ಅದನ್ನು ಬೆಳೆಸುತ್ತಾ ಹೋದೆ. ಆರಂಭದಲ್ಲಿ ದೈವದ ಕತೆ ಇರಲಿಲ್ಲ. ಆಮೇಲಾಮೇಲೆ ಎಲ್ಲವೂ ಸೇರಿಕೊಳ್ಳುತ್ತಾ ಹೋಯಿತು. ಒಂದು ಹಂತದಲ್ಲಿ ಕತೆ ಕೈಮೀರಿ ಹೋಯಿತು. ಕಾಂತಾರ ಸಿನಿಮಾವನ್ನು ನಾನು ಮಾಡಬೇಕು ಅಂದುಕೊಂಡಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕಾಂತಾರ ಸಿನಿಮಾ ಮಾಡಿದ್ದಲ್ಲ, ಆಗಿದ್ದು.ದೈವದ ಸಿನಿಮಾ ಮಾಡಬೇಕು ಎಂದುಕೊಂಡಾಗ ಮೊದಲು ನಾನು ದೈವನರ್ತಕರಲ್ಲಿ ಕೇಳಿದೆ. ಅವರು ನೀನು ಧರ್ಮಸ್ಥಳ ಸನ್ನಿಧಾನಕ್ಕೆ ಹೋಗು ಎಂದರು. ಅಲ್ಲಿ ಹೋಗಿ ಆಶೀರ್ವಾದ ಪಡೆದೆ. ಪಂಜುರ್ಲಿ ಕೋಲದಲ್ಲಿ ಭಾಗಿಯಾಗಿ ದೈವದ ಮುಂದೆ ಅನುಗ್ರಹ ಬೇಕು ಕೇಳಿಕೊಂಡೆ. ದೈವಿಕ ಗಳಿಗೆಯಲ್ಲಿ ಪಂಜುರ್ಲಿ ದೈವ ತನ್ನ ಮುಖದ ಬಣ್ಣವನ್ನು ನನ್ನ ಮುಖಕ್ಕೆ ಹಚ್ಚಿತ್ತು. ಅದೊಂದು ಅವಿಸ್ಮರಣೀಯವಾದ, ಮಾತಲ್ಲಿ ಹೇಳಲಾಗದ ಅಮೂಲ್ಯ ಕ್ಷಣ.ಶಿವನ ಪಾತ್ರದ ಮೂಲಕ ಕೆಲವು ಯುವಜನತೆ ತಾವು ನಿಜವಾಗಿ ಮಾಡಬೇಕಾದ ಕೆಲಸ ಬಿಟ್ಟು ಚಟಗಳಿಗೆ ದಾಸರಾಗುವ ಕುರಿತು ಹೇಳುವ ಉದ್ದೇಶ ಇತ್ತು. ಅವನು ದೈವ ನರ್ತಕರ ಮಗ. ಅವನು ದೈವ ಕಟ್ಟಬೇಕು. ಆದರೆ ಅವನು ಅದನ್ನು ಬಿಟ್ಟು ನಶೆಗೆ ಮಾರುಹೋಗುವುದು, ಶಿಕಾರಿ ಮಾಡುವುದು ಇತ್ಯಾದಿ ಮಾಡುತ್ತಿರುತ್ತಾನೆ. ಅವನು ತಪ್ಪು ಮಾಡಿದಾಗಲೆಲ್ಲಾ ಎಚ್ಚರಿಸುವ ಕೆಲಸವನ್ನು ಪಂಜುರ್ಲಿ ದೈವ ಮಾಡುತ್ತಿರುತ್ತದೆ. ಒಂದು ಹಂತದಲ್ಲಿ ಅವನಲ್ಲಿ ಆಗುವ ಬದಲಾವಣೆಯೇ ಈ ಸಿನಿಮಾದ ಪ್ರಮುಖ ಘಟ್ಟ. ದಾರಿಯನ್ನು ಬಿಟ್ಟು ಹೊರಟವರಿಗೆ ಈ ಜ್ಞಾನೋದಯ ಆದರೆ ಆ ಪಾತ್ರ ಸಾರ್ಥಕ.'
