ಆಗಲೇ ಚಿತ್ರದ ಫೋಟೋ​ಶೂಟ್‌ ಹಾಗೂ ಟೀಸರ್‌ ಶೂಟ್‌ ಮಾಡಿದ್ದು, ಚಿತ್ರೀ​ಕ​ರಣ ಕೂಡ ಶುರು​ವಾ​ಗಿದೆ. ಸದ್ಯಕ್ಕೆ ಚಿತ್ರ​ತಂಡ ಹೈದ​ರಾ​ಬಾ​ದ್‌​ನಲ್ಲಿ ಬೀಡು ಬಿಟ್ಟಿದೆ. ಸದ್ಯ​ದಲ್ಲೇ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡು​ಗಡೆ ಮಾಡುವ ಪ್ಲಾನ್‌ ಚಿತ್ರ​ತಂಡದ್ದು. ಕೈಯಲ್ಲಿ ಪಿಸ್ತೂಲು ಹಿಡಿದು ನಿಂತ ಫೋಟೋ ಸಾಮಾಜಿ ಜಾಲ​ತಾ​ಣ​ಗ​ಳಲ್ಲಿ ಸಾಕಷ್ಟುವೈರಲ್‌ ಆಗಿದ್ದು, ಸುದೀಪ್‌ ಅಭಿ​ಮಾ​ನಿ​ಗ​ಳಲ್ಲಿ ಕ್ರೇಜ್‌ ಹುಟ್ಟಿ​ಸಿದೆ.

ಸುದೀಪ್ ಮೊದಲ ಸಿನಿಮಾ 'ಸ್ಪರ್ಶ' ಅಲ್ಲ; 'ಈಗ' ಹಿಂದಿದೆ ಈ ಕಥೆ! ಇದು ಸುದೀಪ್ ಮಾತುಕತೆ

ಚಿತ್ರದ ಮೊದಲ ಹಂತದ ಶೂಟಿಂಗ್‌ ಹೈದ​ರಾ​ಬಾ​ದ್‌​ನಲ್ಲಿ ನಡೆ​ಯ​ಲಿದೆ. ಹೀಗಾಗಿ ಚಿತ್ರ​ತಂಡ ಈಗಾ​ಗಲೇ ಟಾಲಿ​ವು​ಡ್‌ ಅಂಗ​ಳಕ್ಕೆ ಕಾಲಿ​ಟ್ಟಿದೆ. ಇಲ್ಲಿ ಮೊದಲ ಹಂತದ ಚಿತ್ರೀ​ಕ​ರಣ ಮುಗಿಸಿ ಮತ್ತೆ ಬೆಂಗ​ಳೂ​ರಿಗೆ ಬರ​ಲಿದೆ ಚಿತ್ರ​ತಂಡ. ಸಿಲಿ​ಕಾನ್‌ ಸಿಟಿ​ಯಲ್ಲಿ ಎರ​ಡನೇ ಹಂತದ ಚಿತ್ರೀ​ಕ​ರಣ ಶುರು​ವಾ​ಗ​ಲಿದೆ. ಅಂದು​ಕೊಂಡ​ದ್ದಿ​ಕ್ಕಿಂತ ವೇಗ​ವಾ​ಗಿಯೇ ಚಿತ್ರೀ​ಕ​ರಣ ಮಾಡುವ ಪ್ಲಾನ್‌ ನಿರ್ದೇ​ಶ​ಕ​ರದ್ದು.

ಸುದೀಪ್‌ ಪುತ್ರಿ Instagram ಖಾತೆ ಪಬ್ಲಿಕ್; ಫೋಟೋ ನೋಡಿ!

ಜಾಕ್‌ ಮಂಜು ನಿರ್ಮಾ​ಣಈ ಚಿತ್ರಕ್ಕೆ ನಾಯಕಿ ಯಾರು ಎಂಬುದು ಸದ್ಯ ಕೇಳಿ ಬರು​ತ್ತಿ​ರುವ ಪ್ರಶ್ನೆ​ಯಾ​ದರೂ ಈ ಸಿನಿಮಾ ಸುದ್ದಿ​ಯಾ​ದಾ​ಗಿ​ನಿಂದಲೂ ತೆಲು​ಗಿನ ನಟಿ ಸಮಂತಾ ಹೆಸರು ‘ಫ್ಯಾಂಟ​ಮ್‌’ ಚಿತ್ರದ ಜತೆಗೆ ಸದ್ದು ಮಾಡು​ತ್ತಿದೆ. ಹಾಗಾ​ದರೆ ಸಮಂತಾ ಈ ಚಿತ್ರಕ್ಕೆ ಜತೆ​ಯಾ​ಗ​ಲಿ​ದ್ದಾ​ರೆಯೇ ಎಂಬುದು ಇನ್ನಷ್ಟೆನೋಡ​ಬೇ​ಕಿದೆ.