ಕಳೆದ ವಾರ ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಂಡ ಸೂರರೈ ಪೋಟ್ರು ಸಿನಿಮಾ ವೀಕ್ಷಕರ ಪ್ರೀತಿ ಹಾಗೂ ಮೆಚ್ಚುಗೆ ಪಡೆದುಕೊಂಡಿದೆ. ಕ್ಯಾಪ್ಟನ್ ಗೋಪಿನಾಥ್ ಜೀವನಧಾರಿತ ಕಥೆ ಇದಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಹಾಗೂ ಸೂರ್ಯ ಅಭಿನಯದ ಬಗ್ಗೆ ಮಾತನಾಡಿದ್ದಾರೆ. 

ಗೋಪಿನಾಥ್‌ ಬಯೋಪಿಕ್ 'ಸೂರರೈ ಪೋಟ್ರು' ಚಿತ್ರದ ಬೊಮ್ಮಿ ಯಾರು ಗೊತ್ತಾ? 

ಸೂರರೈ ಪೋಟ್ರು ಸಿನಿಮಾ ವೀಕ್ಷಿಸಿದ ಕಿಚ್ಚ ಸುದೀಪ್ ಟ್ಟಿಟರ್‌ನಲ್ಲಿ ಸೂರ್ಯನನ್ನು ಹೊಗಳಿದ್ದಾರೆ. ' ಕಂಗ್ರಾಜುಲೇಷನ್ ಸೂರ್ಯ, ನಿಮ್ಮ ಅಭಿನಯಕ್ಕೆ ನಾನು ಮನಸೋತೆ. ಎದ್ದು ನಿಂತು ಗೌರವ ಸೂಚಿಸಬೇಕು.  ಚೀಯರ್ಸ್‌ ಫ್ರೆಂಡ್ಸ್‌' ಎಂದು ಬರೆದಿದ್ದಾರೆ. 

‘ಸೂರರೈ ಪೊಟ್ರು’ಕನ್ನಡ ದನಿಯಾದ ಸುಮಂತ್‌;'ಕೆಲಸ ಹೋದ ನೋವಿನಲ್ಲೇ ಡಬ್ಬಿಂಗ್‌ ಮಾಡಿದ್ದೆ'! 
 

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕೂಡ ಚಿತ್ರದ ಟ್ಟೀಟ್ ಮಾಡಿದ್ದಾರೆ. 'ಸೂರರೈ ಪೋಟ್ರು ಸ್ಫೂರ್ತಿ ನೀಡುವ ಚಿತ್ರ. ಅದ್ಭುತ ನಿರ್ದೇಶನ ಹಾಗೂ ಅಭಿನಯ. ಸೂರ್ಯ ನೀವು ಚಿತ್ರದಲ್ಲಿ ಶೈನ್ ಆಗುತ್ತಿದ್ದೀರಾ. ಇಡೀ ತಂಡಕ್ಕೆ ಶುಭವಾಗಲಿ'ಎಂದಿದ್ದಾರೆ.  ಇದಕ್ಕೆ ಸೂರ್ಯ ಪ್ರತಿಕ್ರಿಯಿಸಿದ್ದಾರೆ. 'ಬರ್ಡರ್ ಮಹೇಶ್ ಬಾಬು ನೀವು ತುಂಬಾ ಕೈಂಡ್. ಥ್ಯಾಂಕ್ಸ್. ನಿಮ್ಮ ಮುಂದಿನ ಸಿನಿಮಾ ಸರ್ಕಾರಿವಾರಿಪಾಠ ಕಾಯುತ್ತಿರುವೆ' ಎಂದು ಹೇಳಿದ್ದಾರೆ.