ಪತ್ನಿ ಆಗಲಿಕೆ ಬಳಿಕ ಮಗನ 'ಮ್ಯಾಕ್ಸ್' ಸಿನಿಮಾ ನೋಡಿದ ಕಿಚ್ಚ ಸುದೀಪ್ ಅಪ್ಪ ಸಂಜೀವ್
ನಟ ಕಿಚ್ಚ ಸುದೀಪ್ ಅಪ್ಪ ಸಂಜೀವ್ ಸರೋವರ್ ಅವರು ಮಗನ ಸಿನಿಮಾ 'ಮ್ಯಾಕ್ಸ್' ಅನ್ನು ನಿನ್ನೆ ಅಂದರೆ 26 ಡಿಸೆಂಬರ್ 2024ರಂದು ನೋಡಿದ್ದಾರೆ. ಪತ್ನಿ ಅಗಲಿಕೆ ಬಳಿಕ ಒಬ್ಬಂಟಿಯಾಗಿ ನೋವು ಅನುಭವಿಸುತ್ತಿರುವ ಸುದೀಪ್ ತಂದೆ ಸಂಜೀವ್ ಅವರು ನಿನ್ನೆ ಮಗನ ಸಿನಿಮಾ ನೋಡಿ..
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅಪ್ಪ ಸಂಜೀವ್ ಸರೋವರ್ (Sanjeev Sarovar) ಅವರು ಮಗನ ಸಿನಿಮಾ 'ಮ್ಯಾಕ್ಸ್' ಅನ್ನು ನಿನ್ನೆ ಅಂದರೆ 26 ಡಿಸೆಂಬರ್ 2024ರಂದು ನೋಡಿದ್ದಾರೆ. ಪತ್ನಿ ಅಗಲಿಕೆ ಬಳಿಕ ಒಬ್ಬಂಟಿಯಾಗಿ ನೋವು ಅನುಭವಿಸುತ್ತಿರುವ ಸುದೀಪ್ ತಂದೆ ಸಂಜೀವ್ ಅವರು ನಿನ್ನೆ ಮಗನ ಸಿನಿಮಾ ನೋಡಿ ಖುಷಿ ಅನುಭವಿಸಿದ್ದಾರೆ. ಸ್ವತಃ ಕಿಚ್ಚ ಸುದೀಪ್ ಅವರು ತಮ್ಮ ಸಂಗಡಿಗರೊಂದಿಗೆ ತಂದೆಯನ್ನು ಚಿತ್ರಮಂದಿರಕ್ಕೆ ಕರೆತಂದು ಸಿನಿಮಾ ತೋರಿಸಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ಎರಡೂವರೆ ವರ್ಷಗಳ ಬಳಿಕ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ತಮ್ಮ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಸುದೀಪ್ ಸಿನಿಮಾಗಳು ಒಂದರ ಹಿಂದೆ ಮತ್ತೊಂದು ಸೆಟ್ಟೇರಿದ್ದರೂ ಕೂಡ, ಯಾವುದೇ ಸಿನಿಮಾ ಬಿಡುಗಡೆ ಆಗದೇ ಬರೋಬ್ಬರಿ ಎರಡೂವರೆ ವರ್ಷಗಳೇ ಕಳೆದುಹೋಗಿದ್ದವು. ಆದರೆ ಈಗ ಲೇಟ್ ಆದರೂ ಲೇಟೇಸ್ಟ್ ಎಂಬಂತೆ 'ಮ್ಯಾಕ್ಸ್' ಸಿನಿಮಾ ಮೂಲಕ ಮತ್ತೆ ಕನ್ನಡ ಸಿನಿರಸಿಕರಿಗೆ ದರ್ಶನ ನೀಡಿದ್ದಾರೆ.
ಸುಷ್ಮಿತಾ ಜೊತೆ ನ್ಯೂ ಇಯರ್ ಟೈಮಲ್ಲಿ'ಕಾಟನ್ ಕ್ಯಾಂಡಿ' ತಂದ ಚಂದನ್ ಶೆಟ್ಟಿ!
ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಅವೇಟೆಡ್ ಮೂವಿ ಮ್ಯಾಕ್ಸ್ ಇವತ್ತು ವರ್ಲ್ಡ್ ವೈಡ್ ತೆರೆಗೆ ಬಂದಿದೆ. ಭರ್ತಿ ಎರಡೂವರೇ ವರ್ಷಗಳ ಗ್ಯಾಪ್ ನಂತರ ಬಂದಿರೋ ಕಿಚ್ಚನ ಸಿನಿಮಾ ಇದು. ಸೋ ಸಹಜವಾಗೇ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಹಾಗಾದ್ರೆ ಬಹುನಿರೀಕ್ಷೆಯ ಮ್ಯಾಕ್ಸ್ ಮೂವಿ ಹೇಗಿದೆ..? ಕಿಚ್ಚನ ಮಿಡ್ ನೈಟ್ ಹಂಗಾಮ ಹೇಗೆ ಮೂಡಿಬಂದಿದೆ..? ಇಲ್ಲಿದೆ ನೋಡಿ ಮ್ಯಾಕ್ಸ್ ರಿವ್ಯೂ ರಿಪೋರ್ಟ್.
ಮ್ಯಾಕ್ಸ್ ಸ್ಟೋರಿಲೈನ್ :
ಅಮಾನತ್ತಿನಲ್ಲಿದ್ದ ಪೊಲೀಸ್ ಆಫೀಸರ್ ಅರ್ಜುನ್ ಮಹಾಕ್ಷಯ್ ನಾಳೆ ಡ್ಯೂಟಿಗೆ ಹಾಜರಾಗಬೇಕು. ಆದ್ರೆ ಹಿಂದಿನ ರಾತ್ರಿಯೇ ಒಂದು ದೊಡ್ಡ ಅಚಾತುರ್ಯ ಸಂಭವಿಸುತ್ತೆ. ರಸ್ತೆಯಲ್ಲಿ ಕುಡಿತ ಮತ್ತಿನಲ್ಲಿ ಕಾರ್ ಚಲಾಯಿಸಿ ಮಹಿಳಾ ಪೇದೆಯ ಮೇಲೆ ಕೈ ಹಾಕೋ ಮಂತ್ರಿಗಳ ಮಕ್ಕಳನ್ನ ಮಹಾಕ್ಷಯ್ ಸ್ಟೇಷನ್ಗೆ ತಂದು ಕೂಡಿಹಾಕ್ತಾನೆ. ಅವರನ್ನ ಬಿಡಿಸಿಕೊಳ್ಳೋದಕ್ಕೆ ದೊಡ್ಡ ರೌಡಿ ಪಡೆ.. ಮಂತ್ರಿಗಳ ಸಹಚರರು.. ಪೊಲೀಸ್ ಠಾಣೆಯಲ್ಲೇ ಇರೋ ಖಾಕಿ ವೇಷದ ದೂರ್ತರು ಎಲ್ಲರೂ ಹೊಂಚು ಹಾಕ್ತಾರೆ. ಆದ್ರೆ ಮ್ಯಾಕ್ಸ್ ಮಹಾಕೋಟೆಯಿಂದ ಅವರನ್ನ ಬಿಡಿಸಿಕೊಂಡು ಹೋಗೋದಕ್ಕೆ ಆಗುತ್ತಾ..? ಅಷ್ಟಕ್ಕೂ ಅರೆಸ್ಟ್ ಆದ ಆ ಹುಡುಗರು ಏನಾಗಿದ್ದಾರೆ.. ಎಲ್ಲಿದ್ದಾರೆ.. ಅನ್ನೋದರ ಸುತ್ತ ಸುತ್ತೋ ಥ್ರಿಲ್ಲಿಂಗ್ ಕಹಾನಿ ಇದು.
ಸಿಎಂ ಆಫರ್ ಬಂದ್ರೂ 'ಬೇಡ' ಅಂದಿದ್ದೇಕೆ ಸೋನು ಸೂದ್? ಕೊನೆಗೂ ಹೊರಬಿತ್ತು ಸೀಕ್ರೆಟ್!
ಮ್ಯಾಕ್ಸ್ ಕಲಾವಿದರ ಪರ್ಫಾರ್ಮೆನ್ಸ್ :
ಮ್ಯಾಕ್ಸ್ ಸಿನಿಮಾದಲ್ಲಿ ಕಿಚ್ಚ ಸುದೀಪ್ದು ಒನ್ ಮ್ಯಾನ್ ಶೋ ಅಂದ್ರೆ ತಪ್ಪಾಗಲ್ಲ. ಒಂದೇ ರಾತ್ರಿ ನಡೆಯೋ ಈ ಥ್ರಿಲ್ಲಿಂಗ್ ಌಕ್ಷನ್ ಕಹಾನಿಯಲ್ಲಿ ಸುದೀಪ್ ಅಕ್ಷರಶಃ ಅಬ್ಬರಿಸಿದ್ದಾರೆ. ಌಕ್ಷನ್ ದೃಶ್ಯಗಳಲ್ಲಂತೂ ಕಿಚ್ಚ ಮಾಸ್ ಮಹಾರಾಜನಂತೆ ಮಿಂಚಿದ್ದಾರೆ.
ವರಲಕ್ಷ್ಮೀ ಶರತ್ಕುಮಾರ್ ನೆಗೆಟಿವ್ ಕ್ಯಾರೆಕ್ಟರ್ನಲ್ಲಿ ಭರ್ಜರಿ ಸ್ಕೋರ್ ಮಾಡಿದ್ದಾರೆ. ಸುನೀಲ್ ಪುಷ್ಪ ನಂತರ ಮತ್ತೊಮ್ಮೆ ವಿಲನ್ ರೋಲ್ನಲ್ಲಿ ಇಷ್ಟವಾಗ್ತಾರೆ. ಇಳವರಸು ಪಾತ್ರದಲ್ಲಿ ತೂಕವಿದೆ. ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗಳೆ, ಗೋವಿಂದೇ ಗೌಡ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಮ್ಯಾಕ್ಸ್ ಪ್ಲಸ್ ಪಾಯಿಂಟ್ಸ್ :
ಮ್ಯಾಕ್ಸ್ ಸಿನಿಮಾದ ಮೊದಲ ಪ್ಲಸ್ ಪಾಯಿಂಟ್ ಅಂದ್ರೆ ಹೆಜ್ಜೆ ಹೆಜ್ಜೆಗೂ ತಿರುವು ತೆಗೆದುಕೊಳ್ಳೊ ರೋಚಕ ಸ್ಕ್ರೀನ್ ಪ್ಲೇ. ನಿರ್ದೇಶಕ ವಿಜಯ್ ಕಾರ್ತಿಕೇಯನ್ ಪಕ್ಕಾ ಥ್ರಿಲ್ಲಿಂಗ್ ಸ್ಕ್ರೀನ್ ಪ್ಲೇನ ಹೆಣೆದು ಅಷ್ಟೇ ರೋಚಕವಾಗಿ ತೆರೆಗೆ ತಂದಿದ್ದಾರೆ.
ಕಿಚ್ಚನ ಸುದೀಪ್ ಸ್ಟೈಲಿಶ್ ಲುಕ್, ಹೈವೋಲ್ಟೇಜ್ ಌಕ್ಷನ್ ಸೀಕ್ವೆನ್ಸ್, ಪಾತ್ರಕ್ಕೆ ತಕ್ಕ ಕಲಾವಿದರ ಆಯ್ಕೆ, ಶೇಖರ್ ಚಂದ್ರ ಸಿನಿಮಾಟೋಗ್ರಫಿ, ಅಜನೀಶ್ ಹಿನ್ನೆಲೆ ಸಂಗೀತ ಎಲ್ಲವೂ ಸಿನಿಮಾದ ಪ್ಲಸ್ ಪಾಯಿಂಟ್ಸ್ ಎನ್ನಬಹುದು.
ಮ್ಯಾಕ್ಸ್ ಮೈನಸ್ ಪಾಯಿಂಟ್ಸ್ :
ಚಿತ್ರದ ಆರಂಭಿಕ ಸನ್ನಿವೇಶಗಳು ಕೊಂಚ ನೀರಸವಾಗಿವೆ. ಮೊದಲ ಹಾಡು ಕೂಡ ಕಿಕ್ಕೇರಿಸಲ್ಲ. ಇವುಗಳನ್ನ ರಿಪೇರಿ ಮಾಡಿದ್ರೆ ಸಿನಿಮಾ ಮತ್ತಷ್ಟು ಥ್ರಿಲ್ಲಿಂಗ್ ಆಗಿರೋದು.
ದರ್ಶನ್-ಸುದೀಪ್ ಒಂದಾಗುವ ಸುದಿನ ಹತ್ತಿರ ಬಂದಿದೆ; ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!
ಮ್ಯಾಕ್ಸ್ ಫೈನಲ್ ಸ್ಟೇಟ್ಮೆಂಟ್ :
ಬರೊಬ್ಬರಿ ಎರಡೂವರೇ ವರ್ಷಗಳ ನಂತರ ಬಂದಿರೋ ಕಿಚ್ಚ ಸುದೀಪ್ ನಟನೆಯ ಸಿನಿಮಾ ಇದು. ಅಭಿಮಾನಿಗಳು ನಿರೀಕ್ಷೆ ಮಾಡ್ತಾ ಇದ್ದಂಥಾ ಪಕ್ಕಾ ಮಾಸ್ ಸಿನಿಮಾ ಮೂಲಕವೇ ಕಿಚ್ಚ ಕಂಬ್ಯಾಕ್ ಮಾಡಿದ್ದಾರೆ. ಮ್ಯಾಕ್ಸ್ ಸಿನಿಮಾದಲ್ಲಿರೋದು ಒಂದೇ ರಾತ್ರಿಯಲ್ಲಿ ನಡೆಯೋ ಥ್ರಿಲ್ಲರ್ ಸ್ಟೋರಿ. ಈ ಥ್ರಿಲ್ಲಿಂಗ್ ಸಬ್ಜೆಕ್ಟ್ನ ಅಷ್ಟೇ ರೋಚಕವಾಗಿ ತೆರೆ ಮೇಲೆ ತಂದಿದ್ದಾರೆ. ಅದ್ಭುತ ತಂತ್ರಜ್ಞರು-ಕಲಾವಿದರುಗಳಿರೋ ಈ ಸಿನಿಮಾ ಖಂಡಿತ ಸಿನಿಪ್ರಿಯರಿಗೆ ನಿರಾಸೆ ಮಾಡಲ್ಲ. ಅದ್ರಲ್ಲೂ ಥ್ರಿಲ್ಲರ್ ಜಾನರ್ ಸಬ್ಜೆಕ್ಟ್ನ ಇಷ್ಟಪಡೋ ಪ್ರೇಕ್ಷಕರಿಗಂತೂ ಇದು 100 ಪರ್ಸೆಂಟ್ ಪೈಸಾ ವಸೂಲ್ ಮೂವಿ.
ಚಿತ್ರ : ಮ್ಯಾಕ್ಸ್
ನಿರ್ದೇಶನ : ವಿಜಯ್ ಕಾರ್ತಿಕೇಯ
ನಿರ್ಮಾಣ : ಕಲೈಪುಲಿ ಧನು, ಸುದೀಪ್
ಸಂಗೀತ : ಅಜನೀಶ್ ಲೋಕನಾಥ್
ಸಿನಿಮಾಟೋಗ್ರಫಿ : ಶೇಖರ್ ಚಂದ್ರ
ತಾರಾಗಣ : ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸುನೀಲ್, ಶರತ್ ಲೋಹಿತಾಶ್ವ, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗಳೆ, ಇಳವರಸು ಮತ್ತು ಇತತರು.