ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ is back to ಬಿಗ್ ಬಾಸ್‌ ಸೀಸನ್‌ 8 ರಿಯಾಲಿಟಿ ಶೋ. ಎರಡು ವಾರಗಳಿಂದ ಕಾಯುತ್ತಿದ್ದ ಸ್ಪರ್ಧಿಗಳಿಗೆ ಸಂತಸದ ವಿಚಾರ....

ಅನಾರೋಗ್ಯದ ಕಾರಣ ವಿಶ್ರಾಂತಿಯಲ್ಲಿದ್ದ ಸುದೀಪ್‌ ಚೇತರಿಸಿಕೊಂಡಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಕಿಚ್ಚ, ತಾನು ಗುಣಮುಖನಾಗಿದ್ದು, ಈ ವಾರದ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ಎರಡು ವಾರಗಳಿಂದ ಬಿಗ್‌ಬಾಸ್‌ ವಾರ ಪಂಚಾಯತಿಯಿಂದ ದೂರವೇ ಉಳಿದಿದ್ದ ಸುದೀಪ್‌ ಈ ವಾರ ಬಿಗ್‌ಬಾಸ್‌ನಲ್ಲಿ ಭಾಗವಹಿಸುವುದು ಖಚಿತವಾಗಿದೆ. ಆದರೆ ಜನತಾ ಕಫä್ರ್ಯ ಇರುವ ಹಿನ್ನೆಲೆಯಲ್ಲಿ ವಾರದ ಪಂಚಾಯ್ತಿ ಈ ಸಲ ವರ್ಚುವಲ್‌ ಆಗಿ ನಡೆಯಲಿದೆ. ಸುದೀಪ್‌ ಮನೆಯಿಂದಲೇ ಆನ್‌ಲೈನ್‌ ಮೂಲಕ ಭಾಗವಹಿಸಲಿದ್ದಾರೆ. ಈ ಕುರಿತು ಕಲರ್ಸ್‌ ಕನ್ನಡದ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌, ‘ಸುದೀಪ್‌ ಮನೆಯಿಂದಲೇ ಸ್ಕೈಪ್‌ ಮೂಲಕ ಬಿಗ್‌ಬಾಸ್‌ನ ವೀಕೆಂಡ್‌ ಪಂಚಾಯ್ತಿಯನ್ನು ನಡೆಸುವ ಯೋಚನೆ ಇದೆ’ ಎಂದು ತಿಳಿಸಿದ್ದಾರೆ.

ಬಿಗ್ ಬಾಸ್‌ಗೆ ಕಿಚ್ಚ ಸುದೀಪ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? 

ಇದೇ ಸಂದರ್ಭದಲ್ಲಿ ಸುದೀಪ್‌ ತಮ್ಮ ಚೇತರಿಕೆಗಾಗಿ ಪ್ರಾರ್ಥಿಸಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ‘ನನ್ನ ಚೇತರಿಕೆಗೆ ನೀವೆಲ್ಲ ಹಾರೈಸಿದ್ದು, ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದು ನನ್ನ ಗಮನಕ್ಕೆ ಬಂದಿದೆ. ಎಲ್ಲರಿಗೂ ಪ್ರೀತಿಯಷ್ಟೇ ನೀಡಬಲ್ಲೆ’ ಎಂದಿದ್ದಾರೆ.

Scroll to load tweet…