ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಸುದೀಪ್ ಮತ್ತು ಎಮ್‌ಎನ್‌ ಕುಮಾರ್ ಹಣಕಾಸಿನ ಮಾತುಕಥೆ. ಇಷ್ಟು ದಿನ ಮೌನವಾಗಿದ್ದ ಫ್ಯಾನ್ಸ್‌ಗಳಿಂದ ಪ್ರತಿಭಟನೆ...  

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಮತ್ತು ನಿರ್ಮಾಪಕ ಎಮ್‌ಎನ್‌ ಕುಮಾರ್‌ 5 ವರ್ಷಗಳ ಹಿಂದೆ ಸಿನಿಮಾ ಮಾಡಬೇಕಿತ್ತು. ನಾನಾ ಕಾರಣಗಳಿಂದ ಸಿನಿಮಾ ಕೈ ಹಿಡಿಯಲಿಲ್ಲ ಆನಂತರ ಮಾಡಬೇಕು ಎಂದು ಮುಂದಾದರೂ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಈ 5 ವರ್ಷದಲ್ಲಿ ಸುದೀಪ್ ಬೇರೆ ಬೇರೆ ಕಥೆಗಳನ್ನು ಕೇಳಿ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು. ನಿರ್ಮಾಪಕ ಎಮ್‌ಎನ್‌ ಕುಮಾರ್ ಸುದೀಪ್ ವಿರುದ್ಧ ಆರೋಪ ಮಾಡಿದ್ದರು. ಕಳೆದ ನಾಲ್ಕೈದು ದಿನಗಳಿಂದ ಇದೇ ಚರ್ಚೆ ಆಗುತ್ತಿದೆ. ಈಗ ಅಭಿಮಾನಿಗಳು ಎಂಟ್ರಿ ಕೊಟ್ಟಿದ್ದಾರೆ. 

ಹೌದು! ನಿನ್ನೆ ಕನ್ನಡ ಫಿಲ್ಮ್‌ ಚೇಂಬರ್‌ಗೆ ಸುದೀಪ್ ಪತ್ರ ಬರೆದು ನಮ್ಮ ಸಿನಿಮಾ ಜರ್ನಿಯಲ್ಲಿ ಒಂದೂ ಕಪ್ಪು ಚುಕ್ಕಿ ಇಲ್ಲ ಎಂದು ತಮ್ಮ ಮನಸ್ಸಿನ ಮಾತುಗಳನ್ನು ಬರೆದು ಹಲವು ವಿಚಾರಗಳಿಗೆ ಕ್ಲಾರಿಟಿ ಕೊಟ್ಟಿರು. ಇದರ ಬೆನ್ನಲ್ಲಿ ಅಭಿಮಾನಿಗಳು ಇಂದು ಪ್ರತಿಭಟನೆ ಮಾಡುತ್ತಿದ್ದಾರೆ. 

ನಟ ಅಜಿತ್ ಸಾಚ ಅಲ್ಲ, ಕಿಚ್ಚ ಸುದೀಪ್ ಬೆನ್ನಲ್ಲೇ ಥಲಾ ಮೇಲೆ ನಿರ್ಮಾಪಕನ ಗಂಭೀರ ಆರೋಪ!

'ಎಮ್‌ಎನ್‌ ಕುಮಾರ್ ಮತ್ತು ಸುರೇಶ್‌,ರೆಹಮಾನ್ ಹಾಗೂ ಎ ಗಣೇಶ್‌ ಅವರುಗಳ ಆರೋಪಗಳು ಆಧಾರ ರಹಿತವಾಗಿದೆ ಇಲ್ಲ ಸಲ್ಲದ ಆರೋಪಗಳು ಮಾಡುತ್ತಿದ್ದರೆ ಅಭಿಮಾನಿಗಳು ಸೇರಿ ಆರೋಪ ಮಾಡುತ್ತಿರುವವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೀವಿ. ಆಧಾರವಿಲ್ಲದೆ ಆರಫ ಮಾಡುತ್ತಿರುವುದು ಸರಿ ಅಲ್ಲ ಹಾಗೂ ಅವರೆಲ್ಲ ಬಹಿರಂಗವಾಗಿ ಕ್ಷಮೆ ಕೇಳಲೇ ಬೇಕು ಇಲ್ಲವಾದರೆ ನಾವು ಹೋರಾಟ ಮಾಡುವುದು ಖಚಿತ. ಫಿಲ್ಮಂ ಚೇಂಬರ್ ನವರು ಆಧಾರವಿಲ್ಲದೆ ಮಾತನಾಡುವವರಿಗೆ ಅವಕಾಶ ಕೊಡಬಾರದು. ಇನ್ನು ಎರಡು ದಿನಗಳಲ್ಲಿ ಅಭಿಮಾನಿಗಳು ಕರೆ ಕೊಡಲಿದ್ದೇವೆ ಹೊರಾಟ ಆಗುವುದು ಗ್ಯಾರಂಟಿ. ಇಷ್ಟು ದಿನ ನಾವು ಮೌನವಾಗಿದದ್ದು ನಿಜ ಆದರೆ ಸುಮ್ಮನೆ ಕುಳಿತಿಲ್ಲ ಕ್ಷಮೆ ಕೇಳದೆ ಇದ್ದರೆ ನಾವು ಉಗ್ರ ಹೋರಾಟಕ್ಕೆ ಸಿದ್ಧ' ಎಂದು ಫಿಲ್ಮಂ ಚೇಂಬರ್‌ಗೆ ಮನವಿ ಕೊಡಲು ಅಭಿಮಾನಿಗಳು ಬಂದಿದ್ದಾರೆ. 

ನಿರ್ಮಾಪಕ ಎಮ್‌ಎನ್‌ ಕುಮಾರ್ ಮಾಡಿರುವ ಆರೋಪಗಳಿಗೆ ಕಿಚ್ಚ ಸುದೀಪ್ ಆಪ್ತ ಜಾಕ್ ಮಂಜು ಸುದ್ದಿಗೋಷ್ಠಿ ಮಾಡಿ ಕ್ಲಾರಿಟಿ ಕೊಟ್ಟರು. 'ರನ್ನ ಸಿನಿಮಾ ಸಮಯದಲ್ಲಿ ಇಬ್ರು ಭೇಟಿಯಾಗಿದ್ದು ನಿಜ. ಕುಮಾರ್ ಕಷ್ಟದಲ್ಲಿದ್ದಾರೆ ಗೊತ್ತು. ಎಮ್ ಎನ್ ಕುಮಾರ್ ಪ್ರಿಯಾ ಅವರನ್ನು ಮೊದಲು ಭೇಟಿಯಾಗಿ ಮಾತನಾಡಿದ್ರು. ಬಳಿಕ ಪ್ರಿಯಾ, ಸುದೀಪ್ ಅವರ ಬಳಿ ಮಾತನಾಡಿದ್ರು. ನಂತರ ಕುಮಾರ್, ಸುದೀಪ್ ಜೊತೆ ಮಾತುಕತೆ ಮಾಡಿದ್ರು. ಎಮ್ ಎನ್ ಕುಮಾರ್ ಅವರಿಗೆ 5 ಕೋಟಿ ರೂಪಾಯಿ ಸಹಾಯ ಮಾಡುವುದಾಗಿ ಹೇಳಿದರು. ಇದನ್ನು ಎನ್ ಎನ್ ಕುಮಾರ್ ಭಿಕ್ಷೆ ಎಂದು ಹೇಳಿದರು. ಭಿಕ್ಷೆ ಕೊಡೊಕೆ ಬಂದಿದ್ಯಾ ಅಂತ ಎಮ್ ಎನ್ ಕುಮಾರ್ ಹೇಳಿದ್ದು ಸುದೀಪ್ ಅವರಿಗೆ ಬೇಸರ ಆಗಿದೆ. ಕಷ್ಟದಲ್ಲಿದ್ದಾರೆ ಸಹಾಯ ಮಾಡೋಣ ಅಂದುಕೊಂಡಿದ್ದೇ ಈಗ ದೊಡ್ಡ ಸಮಸ್ಯೆ ಆಗಿದೆ. ಎಮ್ ಎನ್ ಕುಮಾರ್ ಹಣ ವಾಪಾಸ್ ಬೇಡ ಸಿನಿಮಾನೇ ಮಾಡಿ ಎಂದು ಪಟ್ಟು ಹಿಡಿದರು. ಅದರಂತೆ ಅನೇಕ ನಿರ್ದೇಶಕರ ಜೊತೆ ಮಾತುಕತೆ ಕೂಡ ನಡೆಯಿತು. ಆದರೆ ಕಥೆ ಅಷ್ಟು ಆಗಿಲ್ಲ. 5 ವರ್ಷಗಳಾಗಿದೆ. ನೂರಾರು ಮೀಟಿಂಗ್ ಗಳನ್ನು ಮಾಡಿದ್ದೇವೆ. ಆದರೀಗ ಫಿಲ್ಮ್ ಚೇಂಬರ್‌ಗೆ ಹೋಗಿದ್ದಾರೆ. ಅರೋಪಗಳನ್ನು ಮಾಡುತ್ತಿದ್ದಾರೆ. ಸುದೀಪ್ ಯಾವುದೇ ಹಣ ತೆಗೆದುಕೊಂಡಿಲ್ಲ. ದಾಖಳೆಗಳಿಲ್ಲದೆ ಮಾತನಾಡುತ್ತಿದ್ದಾರೆ. ಅದಕ್ಕಾಗಿ ನಾವು ಕಾನೂನು ಹೋರಾಟಕ್ಕೆ ಹೋಗಿದ್ದೀವಿ' ಎಂದು ಜಾಕ್ ಮಂಜು ಹೇಳಿದರು. 

ಫಿಲಂ ಚೇಂಬರ್‌ಗೆ ನೋವಿನಿಂದ ಪತ್ರ ಬರೆದ ಕಿಚ್ಚ ಸುದೀಪ್: ಸಿನಿಮಾ ಜೀವನದ ಏರಿಳಿತಗಳ ಉಲ್ಲೇಖ

ಇದಾಗ ಮೇಲೆ ಸುದೀಪ್ ಫಿಲ್ಮಂ ಚೇಂಬರ್‌ಗೆ ಪತ್ರ ಸಲ್ಲಿಸಿ 'ದೈಹಿಕವಾಗಿ, ಮಾನಸಿಕವಾಗಿ, ಕುಮಾರ್ ಗಾಗಲಿ, ಯಾರಿಗೇ ಆಗಲಿ, ಹಲವಾರು ಸಮಸ್ಯೆಗಳು ಬರಬಹುದು, ಹಾಗೇನಾದರು ಅವರಿಗೆ ತೊಂದರೆ ಆದರೆ ಅದು ನನ್ನಿಂದ ಎಂಬ ಮಹಾಪರಾಧದ ಹೇಳಿಕೆ ನನಗೆ ತೀವು ನೋವು ತಂದಿದೆ. ನಾನು ಬದುಕಿನುದ್ದಕ್ಕೂ ಈ ನೋವನ್ನು ಅನುಭವಿಸಲೇ? ಇಂತಹ ಘಟನೆಗೆ ನಾನು ಸಾಕ್ಷಿ ಪುಜೆ ಆಗಲಾರ, ಹಾಗಾಗಿ ನ್ಯಾಯಾಲಯದ ಹೋರಾಟಕ್ಕೆ ಸುರೇಶವರನ್ನು ಭಾಗಿ ಮಾಡಿದ. ಅವರಿಗೂ ನೋಟೀಸ್ ಕಳಸಿದ ವಿನಃ ಕೋಪ ತಾಪ ಆಕ್ರೋಶದಿಂದಲ್ಲ, ನೋವಿನಿಂದ ಸುರೇಶ್ ಅವರ ವಿಚಾರದಲ್ಲಿ ಇನ್ನೂ ವಿವರಿಸುವುದಾದರೆ ನನ್ನ ತನಕ ಅಪರಿಚಿತರೋ, ಪರಿಚಿತರೋ, ಸಿನಿಮಾ ರಂಗದವರೋ ಅಲ್ಲವೋ, ಸಹಕಲಾವಿದರೋ, ತಂತ್ರಜ್ಞರೋ ಯಾರೇ ಬಂದು ಸಹಾಯ ಕೇಳಿದಾಗಲೂ ದೇವರು ಕೊಟ್ಟಿರುವ ಶಕ್ತಿಯಲ್ಲಿ ನನ್ನ ಕೈಲಾದಷ್ಟೂ ಸಹಾಯ ಮಾಡಿದ್ದೇನೆ.ಯಾರದೇ ಆಗಲಿ ಜೀವನ-ಜೀವ ಉಳಿಸಲು ಪ್ರಯತ್ನಿಸಿದ್ದೇನೇ ಹೊರತು ಯಾರ ಜೀವ ಹೋಗಲೂ ನಾನು ಬದುಕಿನುದ್ದಕ್ಕೂ ಸಾಕ್ಷಿಯಾಗಲಾರೆ. ಎಲ್ಲ ನಿರ್ಮಾಪಕರ ಬಗ್ಗೆ ಗೌರವವಿಲ್ಲದೆ, ನಂಬಿಕೆ ಇಲ್ಲದೆ, ಇಷ್ಟರ ವರೆಗೆ ನಾನು ಚಿತ್ರರಂಗದಲ್ಲಿ ನೆಲೆನಿಂತೇನೆ? ನನ್ನ ಮನೆಯಲ್ಲೂ ವೃದ್ಧ ಪೋಷಕರಿದ್ದಾರೆ. ನಂಗೂ ಕಣ್ಣೀರಿದೆ, ದುಃಖ ದುಮ್ಮಾನಗಳಿವೆ. ನಮ್ಮಲ್ಲಿ ಯಾರಿಗೇ ತೊಂದರೆಯಾದರೂ, ಮಂಡಳಿಯೇ ಅಥವಾ ಯಾವುದೇ ನಿರ್ದಿಷ್ಟ ವ್ಯಕ್ತಿ ಹೂಣೆಗಾರ ಎನ್ನಲಾದೀತೆ? ಎಂದಾದರೂ ಹಾಗೆ ನಡೆದುಕೊಂಡಿದ್ದೇನೆಯೇ?' ಎಂದು ಸುದೀಪ ಪತ್ರದಲ್ಲಿ ಬರೆದಿರುವ ಸಾಲುಗಳು ಅಭಿಮಾನಿಗಳು ತುಂಬಾ ಬೇಸರವಾಗಿದೆ.