* ದಿಗ್ಗಜ ವಿಶ್ವನಾಥನ್ ಆನಂದ್ ಜತೆ ಚೆಸ್ ಆಡಲಿದ್ದಾರೆ ದೇಶದ 10 ಸೆಲಿಬ್ರಿಟಿಗಳು* ಆನಂದ್ ಜತೆ ಸ್ಪರ್ಧೆಗಿಳಿಯಲಿದ್ದಾರೆ ಟೀಂ ಇಂಡಿಯಾ ಕ್ರಿಕೆಟಿಗ ಚಹಲ್* ಕೋವಿಡ್ ದೇಣಿಗೆ ಸಂಗ್ರಹಿಸಲು ಆನಂದ್‌, ನಟರಾದ ಅಮೀರ್ ಖಾನ್, ಸುದೀಪ್ ಜತೆಗೂ ಫೈಟ್

ನವದೆಹಲಿ(ಜೂ.12): 5 ಬಾರಿ ವಿಶ್ವ ಚಾಂಪಿಯನ್‌, ದಿಗ್ಗಜ ಚೆಸ್‌ ಪಟು ವಿಶ್ವನಾಥನ್‌ ಆನಂದ್‌ ಜೊತೆ ಭಾರತದ ತಂಡದ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಭಾನುವಾರ ಆನ್‌ಲೈನ್‌ನಲ್ಲಿ ಪ್ರದರ್ಶನ ಚೆಸ್‌ ಪಂದ್ಯವೊಂದನ್ನು ಆಡಲಿದ್ದಾರೆ. ಚಹಲ್‌ ಕ್ರಿಕೆಟಿಗನಾಗುವ ಮೊದಲು ಚೆಸ್‌ ಪಟುವಾಗಿದ್ದರು. ಕಿರಿಯರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಅಕ್ಷಯಪಾತ್ರಾ ಯೋಜನೆಯಡಿ ಕೋವಿಡ್‌ ತಡೆಗೆ ನಿಧಿ ಸಂಗ್ರಹಕ್ಕಾಗಿ ಈ ಪಂದ್ಯ ನಡೆಯಲಿದೆ. ಚಕ್‌ಮೇಟ್ ಕೋವಿಡ್ ಸೆಲಿಬ್ರಿಟಿ ಆವೃತ್ತಿಯಲ್ಲಿ ಆನಂದ್ ಎದುರು ಯುಜುವೇಂದ್ರ ಚಹಲ್ ಮುಖಾಮುಖಿಯಾಗಲಿದ್ದಾರೆ. ಜೂನ್‌ 13ರ ಸಂಜೆ 5 ಗಂಟೆಗೆ ಈ ಚೆಸ್ ಪಂದ್ಯ ಆರಂಭವಾಗಲಿದ್ದು, ಚೆಸ್.ಕಾಂ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಈ ಚೆಸ್ ಪಂದ್ಯ ನೇರ ಪ್ರಸಾರವಾಗಲಿದೆ. 5 ಬಾರಿಯ ವಿಶ್ವಚಾಂಪಿಯನ್‌ ವಿಶ್ವನಾಥನ್ ಆನಂದ್ ಭಾರತದ 10 ಸೆಲಿಬ್ರಿಟಿಗಳು ಹಾಗೂ ಉದ್ದಿಮೆದಾರರೊಂದಿಗೆ ಒಂದು ಗಂಟೆ ಅವಧಿಯಲ್ಲಿ ಚೆಸ್ ಆಡಲಿದ್ದಾರೆ. 

Scroll to load tweet…

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡಾ ದಿಗ್ಗಜ ಚೆಸ್‌ ಆಟಗಾರ ಆನಂದ್ ಜತೆ ಆನ್‌ಲೈನ್‌ನಲ್ಲಿ ಚೆಸ್‌ ಆಡಲಿದ್ದಾರೆ. 

Scroll to load tweet…
Scroll to load tweet…

ವಿಶ್ವನಾಥನ್‌ ಆನಂದ್‌ಗೆ ಅಮೀರ್‌ ಖಾನ್‌ ಚೆಸ್‌ ಸವಾಲು..!

ವಿಶ್ವನಾಥನ್ ಆನಂದ್ ಜತೆ ಚೆಸ್‌ ಆಡುವ ಸೆಲಿಬ್ರಿಟಿಗಳೆಂದರೆ: ನಟ ಅಮೀರ್ ಖಾನ್, ಸುದೀಪ್, ರಿತೇಶ್ ದೇಶ್‌ಮುಖ್, ಸಿಂಗರ್ ಅರ್ಜಿತ್ ಸಿಂಗ್, ಅನನ್ಯ ಬಿರ್ಲಾ, ಯುಜುವೇಂದ್ರ ಚಹಲ್, ನಿರ್ಮಾಪಕ ಸಜಿದ್ ನದಿದ್‌ವಾಲಾ, ಪ್ರಚಾರ ಪಡುಕನ್ನಯ್ಯ, ಉದ್ದಿಮೆದಾರರಾದ ಮನು ಕುಮಾರ್ ಜೈನ್, ನಿಖಿಲ್ ಕಾಮತ್.