ಕೇರಳದಲ್ಲಿ ದೇವಿಯ ಪೀಠದಲ್ಲಿ ನಟಿ ಖುಷ್ಬೂ: ಕಾಲು ತೊಳೆದು ನಾರಿ ಪೂಜೆ ಮಾಡಿದ ಅರ್ಚಕರು
ನಟಿ, ರಾಜಕಾರಣಿ ಖುಷ್ಟೂ ಅವರನ್ನು ಕೇರಳದಲ್ಲಿ ದೇವಿಯ ಸ್ಥಾನದಲ್ಲಿ ಕುಳ್ಳರಿಸಿ ಪಾದಪೂಜೆ ಮಾಡಿ ನಾರಿಪೂಜೆ ನೆರವೇರಿಸಲಾಗಿದೆ.
80-90ರ ದಶಕದಲ್ಲಿ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಖುಷ್ಬೂ ಸುಂದರ್. ಕನ್ನಡಿಗರು ಇವರನ್ನು ಬಹಳ ನೆನಪಿನಲ್ಲಿ ಇಟ್ಟುಕೊಳ್ಳುವುದು ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಜೊತೆ ನಟಿಸಿದ ಸಿನಿಮಾಗಳ ಮೂಲಕ. ಈ ಜೋಡಿಯ ರಣಧೀರ, ಅಂಜದ ಗಂಡು ಮತ್ತು ಯುಗ ಪುರುಷ ಚಿತ್ರಗಳಲ್ಲಿ ರವಿಚಂದ್ರನ್-ಖುಷ್ಬೂ ಜೋಡಿ ಕೆಲಸ ಮಾಡಿತ್ತು. ರವಿಚಂದ್ರನ್ ನಿರ್ದೇಶನದ ಶಾಂತಿ ಕ್ರಾಂತಿ ಚಿತ್ರ ಸಕತ್ ಹಿಟ್ ಆಗಿತ್ತು. ಈಗ ಪುನಃ ಈ ಜೋಡಿ ಥ್ರಿಲ್ಲರ್ ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ, ಈ ಸಿನಿಮಾವನ್ನು ಗುರುರಾಜ್ ಕುಲಕರ್ಣಿ ನಿರ್ದೇಶಕ ಮಾಡಲಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿಯೂ ಖುಷ್ಬೂ ಸುಂದರ್ ಸಾಕಷ್ಟು ಹೆಸರು ಮಾಡುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ದಿಗ್ಗಜರೊಂದಿಗೆ ನಟಿಸಿರೋ ನಟಿ, ಇದೀಗ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಖುಷ್ಬೂ ತುಂಬಾನೇ ಆಕ್ಟೀವ್ ಆಗಿದ್ದಾರೆ. ಇವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಹಿಂದೆ ತಮಿಳುನಾಡಿನಲ್ಲಿ ಇವರ ಫ್ಯಾನ್ಸ್ ಇವರ ಬೃಹದಾಕಾರದ ಪ್ರತಿಮೆಯನ್ನೂ ಸ್ಥಾಪಿಸಿದ್ದಾರೆ. ಇದೀಗ ಮತ್ತೊಂದು ವಿಷಯವಾಗಿ ನಟಿ ಖುಷ್ಬೂ ಸುದ್ದಿಯಾಗುತ್ತಿದ್ದಾರೆ. ಇವರಿಗೆ ಕೇರಳದಲ್ಲಿ ನಾರಿ ಪೂಜೆ ಮಾಡಲಾಗಿದ್ದು, ಇವರ ಕಾಲನ್ನು ತೊಳೆದು ಪೂಜೆ ಸಲ್ಲಿಸಲಾಗಿದೆ. ಅಷ್ಟಕ್ಕೂ ನಾರಿ ಪೂಜೆ ಕೇರಳದಲ್ಲಿ ಮಾಮೂಲು. ಇಲ್ಲಿಯ ಕೆಲವು ಕಡೆಗಳಲ್ಲಿ ಮಹಿಳೆಯರನ್ನು ದೇವಿಯೆಂದು ಪರಿಗಣಿಸಿ ಪೂಜೆ ಮಾಡಲಾಗುತ್ತದೆ. ಕೇರಳದ ತ್ರಿಶೂರ್‌ನಲ್ಲಿರುವ ವಿಷ್ಣುಮಯ ದೇವಸ್ಥಾನದಲ್ಲಿ ಕೂಡ ಈ ಪದ್ಧತಿ ನಡೆದುಕೊಂಡು ಬಂದಿದೆ. ಈ ಬಾರಿ ನಟಿ, ರಾಜಕಾರಣಿ ಖುಷ್ಬೂ ಅವರನ್ನು ದೇವಿಗೆ ಪೂಜೆ ಸಲ್ಲಿಸುವಂತೆ ಕಾಲು ತೊಳೆದು ಸಂಪ್ರದಾಯದಂತೆ ಪೂಜೆಯನ್ನು ಮಾಡಲಾಗಿದೆ. ಇದನ್ನು ನಾರಿ ಪೂಜೆ ಎಂದು ಹೇಳಲಾಗುತ್ತದೆ.
ಅಬ್ಬಬ್ಬಾ! ನಟಿ ಖುಷ್ಬೂ ಹೇರ್‌ಸ್ಟೈಲ್ ನೋಡಿ...ಆದ್ರೆ ಕಾಮೆಂಟ್ ಮಾತ್ರ ನೋಡ್ಬೇಡಿ
ಪೂಜೆಯ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಶೇರ್ ಮಾಡಿಕೊಂಡಿರುವ ನಟಿ, ದೇವರಿಂದ ಆಶೀರ್ವಾದ ಸಿಕ್ಕಿದೆ. ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನದಲ್ಲಿ ನಾರಿ ಪೂಜೆ ಮಾಡಲು ಕರೆದಿದ್ದು ನನ್ನ ಅದೃಷ್ಟ. ಕೆಲವರನ್ನು ಮಾತ್ರ ಆಯ್ಕೆ ಮಾಡಿ ಇಲ್ಲಿಗೆ ಕರೆಯಲಾಗುತ್ತೆ. ದೇವತೆಯೇ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ನಂಬುತ್ತಾರೆ. ದೇವಸ್ಥಾನ ಪ್ರತಿಯೊಬ್ಬರು ನನಗೆ ಆಶೀರ್ವಾದ ಮಾಡಿ ಗೌರವ ನೀಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ. ಈ ಆಚರಣೆಯಿಂದ ಇನ್ನೂ ಅನೇಕ ಒಳ್ಳೆಯ ವಿಷಯ ನಮ್ಮದಾಗುತ್ತದೆ. ನನ್ನ ಪ್ರೀತಿಪಾತ್ರರು ಮತ್ತು ಜಗತ್ತು ಸಂತೋಷ ಮತ್ತು ಶಾಂತಿಯುತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಟಿ ಖುಷ್ಬೂ ಬರೆದುಕೊಂಡಿದ್ದಾರೆ.
ಧರ್ಮ, ಜಾತಿ ಎಲ್ಲವನ್ನೂ ಮೀರಿ ಈ ಆಚರಣೆ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಈ ಆಚರಣೆಯನ್ನು ಪ್ರತಿ ವರ್ಷ ಧನು ಮಾಸದ ಮೊದಲ ಶುಕ್ರವಾರದಂದು ನಡೆಸಲಾಗುತ್ತದೆ. ದೇವಾಲಯದ ಪ್ರಧಾನ ಅರ್ಚಕರು ಸ್ವತಃ ಕುರ್ಚಿಯ ಮೇಲೆ ಕುಳಿತಿರುವ ಮಹಿಳೆಗೆ ಪೂಜೆಯನ್ನು ನಡೆಸುತ್ತಾರೆ ಮತ್ತು ಅವರ ಪಾದಗಳನ್ನು ತೊಳೆಯುತ್ತಾರೆ. ನಂತರ ಮಹಿಳೆಯರಿಗೆ ಮಾಲೆ ಹಾಕಿ ಪುಷ್ಪ ಅರ್ಪಿಸಲಾಗುತ್ತದೆ. ಪ್ರತಿ ವರ್ಷ ದೇವಾಲಯದ ಟ್ರಸ್ಟಿಗಳು ಗೌರವಾನ್ವಿತ ಅತಿಥಿಯನ್ನು ನಿರ್ಧರಿಸುತ್ತಾರೆ, ನಂತರ ಅವರನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಗಾಯಕಿ ಕೆಎಸ್ ಚಿತ್ರಾ ಮತ್ತು ಮಲಯಾಳಂ ನಟಿ ಮಂಜು ವಾರಿಯರ್ ಅವರಂತಹ ಅನೇಕ ಗಣ್ಯರನ್ನು ಈ ಹಿಂದೆ ಇದೇ ರೀತಿ ಪೂಜಿಸಲಾಗಿದೆ.
ಅಮ್ಮ ಏನ್ ಕಲಿಸಿದ್ದಾಳೆ ಅನ್ನೋ ಡೈಲಾಗ್ ಅತ್ತೆ ಮನೆ ಕಾಪಿರೈಟ್ ಅಂದ್ಕೊಂಡಿದ್ದಾರೆ, ಅದೇನ್ ಟ್ರೇನಿಂಗ್ ಸೆಂಟರಾ?