ಕೆಜಿಎಫ್‌ ಚಾಪ್ಟರ್‌ 2 ಇದೀಗ ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದೆ. ಈ ವರ್ಷ ಅತೀ ಹೆಚ್ಚು ಟ್ವೀಟ್‌ ಆದ ಹತ್ತು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಲೀಸ್ಟ್‌ನಲ್ಲಿ ಕೆಜಿಎಫ್‌ 2 ಸೇರಿಕೊಂಡಿದೆ.

ಈ ದಾಖಲೆಯಲ್ಲಿ ಕೆಜಿಎಫ್‌ 2 ರಜನೀಕಾಂತ್‌ ಅಭಿನಯದ ದರ್ಬಾರ್‌ಅನ್ನೂ ಹಿಂದಿಕ್ಕಿರುವುದು ಯಶ್‌ ಅಭಿಮಾನಿಗಳಲ್ಲಿ ಮಿಂಚು ಹರಿಸಿದೆ. ಕೆಜಿಎಫ್‌ 2 ಆರಂಭದಿಂದಲೇ ಹಲವು ಕಾರಣಗಳಿಗೆ ಸುದ್ದಿಯಲ್ಲಿತ್ತು.

'ಪುರಸೋತ್ ರಾಮ' ಚಿತ್ರಕ್ಕೆ ಪೈರೆಸಿ ಕಾಟ!

ಈ ಪಾನ್‌ ಇಂಡಿಯಾ ಸಿನಿಮಾಕ್ಕೆ ಇಡೀ ದೇಶದಲ್ಲಿ ಅಭಿಮಾನಿಗಳಿದ್ದು, ಹಲವರು ಯಶ್‌ನಂತೆ ದಾಡಿ ಬಿಟ್ಟು, ಹೇರ್‌ಸ್ಟೈಲ್‌ ಮಾಡಿಕೊಳ್ಳುವ ಮೂಲಕ ಆರಂಭದಲ್ಲೇ ಸುದ್ದಿಯಲ್ಲಿದ್ದರು. ಇದೀಗ ಯಶ್‌ ಜೊತೆಗೆ ಸಂಜಯ್‌ ದತ್‌್ತ ಅಧೀರ ಪಾತ್ರಕ್ಕೂ ಜನ ಕಾತರದಿಂದ ಕಾಯುತ್ತಿದ್ದಾರೆ. ಈ ಮೂಲಕ ಯಶ್‌, ಪ್ರಶಾಂತ್‌ ನೀಲ್‌ ಮತ್ತೊಂದು ಲೆವೆಲ್‌ಗೆ ಏರಿದಂತಾಗಿದೆ.

ಉಳಿದಂತೆ ಐದು ತೆಲುಗು ಚಿತ್ರಗಳು ಹಾಗೂ 4 ತಮಿಳು ಚಿತ್ರಗಳು ಈ ಲೀಸ್ಟ್‌ನಲ್ಲಿವೆ. ಕನ್ನಡದಿಂದ ಕೇವಲ ಕೆಜಿಎಫ್‌ 2 ಮಾತ್ರ ಈ ಪಟ್ಟಿಸೇರಿಕೊಂಡಿದೆ. ತಮಿಳು ನಟ ವಿಜಯ್‌ ಅಭಿನಯದ ಮಾಸ್ಟರ್‌ ಸಿನಿಮಾ ಮೊದಲ ಸ್ಥಾನದಲ್ಲಿದೆ.

ಕನ್ನಡದಲ್ಲಿ ‘ದ ಬ್ರಿಡ್ಜ್ ಮ್ಯಾನ್’;ಸೇತುಬಂಧು ಗಿರೀಶ್ ಭಾರದ್ವಾಜ್ ಬದುಕಿನ ಕಥೆ!

ಪವನ್‌ ಕಲ್ಯಾಣ್‌ ಅಭಿನಯದ ‘ವಕೀಲ್‌ ಸಾಬ್‌’, ಅಜಿತ್‌ ಹೀರೋ ಆಗಿರುವ ‘ವಾಲಿ ಮೈ’, ಮಹೇಶ್‌ ಬಾಬು ನಟನೆಯ ‘ಸರಕಾರಿ ವಾರು ಪಾಠ’, ಸೂರ್ಯ ಅಭಿನಯದ ‘ಸೂರರೈ ಪೋಟ್ರು’ ಉಳಿದ ಸ್ಥಾನಗಳಲ್ಲಿವೆ. ಆರ್‌ಆರ್‌ಆರ್‌, ಪುಷ್ಪಾ, ಸರಲೇರು ನೀಕೆವ್ವೇರು, ದರ್ಬಾರ್‌ ಈ ಪಟ್ಟಿಯಲ್ಲಿವೆ.

ಕೆಜಿಎಫ್ ಚಾಪ್ಟರ್ 2 ಸಿನಿಮಾ ಕೊನೆಯ ಹಂತದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಯಶ್ ಏರ್ಪೋರ್ಟ್‌ನಲ್ಲಿ ಕಾಣಿಸ್ಕೊಂಡ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.