ಕೆ.ಜಿ ಎಫ್ ನಲ್ಲಿ ಆಂಡ್ರೂಸ್ ಪಾತ್ರ ಮಾಡಿದ್ದ ಅವಿನಾಶ್ ಕಾರು ಜಖಂ ಅಜಾಗರೂಕತೆಯಿಂದ ಬಂದು ಡಿಕ್ಕಿ ಹೊಡೆದ ಕ್ಯಾಂಟರ್ ಘಟನೆಯಲ್ಲಿ ನಟನ ಬೆಂಜ್ ಕಾರು ಸಂಪೂರ್ಣ ಜಖಂ
ಬೆಂಗಳೂರು(ಜೂ.29); ರಾಕಿಂಗ್ ಸ್ಟಾರ್ ಯಶ್ ಅಭಿಯನದ ಕೆಜಿಎಫ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಬಿಎಸ್ ಅವಿನಾಶ್ ಕಾರು ಅಪಘಾತವಾಗಿದೆ. ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕ್ಯಾಂಟರ್ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದೆ. ಆದರೆ ನಟ ಬಿಎಸ್ ಅವಿನಾಶ್ ಅಪಾಯದಿಂದ ಪಾರಾಗಿದ್ದಾರೆ.
ಇಂದು ಬೆಳಗ್ಗೆ ಎಂಜಿ ರಸ್ತೆ ಕಡೆ ಹೊರಟಿದ್ದ ಆ್ಯಂಡ್ರೂಸ್ ಖ್ಯಾತಿಯ ಬಿಎಸ್ ಅವಿನಾಶ್ ಅವರ ಮರ್ಸಡೀಸ್ ಬೆಂಝ್ ಕಾರು ಅಪಘಾತಕ್ಕೀಡಾಗಿದೆ. ಅಜಾಗರೂಕತೆಯಿಂದ ಕ್ಯಾಂಟರ್ ಚಾಲನೆ ಮಾಡಿ ಡಿಕ್ಕಿ ಹೊಡೆದ ಚಾಲಕ ಶಿವಗೌಡನನ್ನು ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಬಿಎಸ್ ಅವಿನಾಶ್ ಆ್ಯಂಡ್ರೂಸ್ ಪಾತ್ರ ನಿರ್ವಹಿಸಿದ್ದರು.
KGF2 ಯಶ್ ಅಭಿನಯದ ಕೆಜಿಎಪ್ 2 ಬಿಡುಗಡೆ ತಡೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್!
48 ವರ್ಷದ ಬಿಎಸ್ ಅವಿನಾಶ್ ಕೆಜಿಎಫ್ ಮೂಲಕ ದೇಶದಲ್ಲೇ ಜನಪ್ರಿಯರಾಗಿದ್ದಾರೆ. ತಂದೆ ವ್ಯವಾಹರವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅವಿನಾಶ್ ಕಾಲೇಜು ದಿನಗಳಲ್ಲೇ ನಾಟಕ ರಂಗದಲ್ಲಿ ಸಕ್ರಿಯರಾಗಿದ್ದರು. ನಟನಾಗಬೇಕೆಂಬ ಹಂಬಲದಿಂದ ಸದಾ ಜಿಮ್ ಹಾಗೂ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದ ಅವಿನಾಶ್ ಅವರನ್ನು ಖ್ಯಾತ ನಟ ಚಿರಂಜೀವಿ ಸರ್ಜಾ ಸಿನಿ ಕ್ಷೇತ್ರಕ್ಕೆ ಪರಿಚಯಿಸಿದರು. ಬಳಿಕ ಕೆಜಿಎಪ್ ಚಿತ್ರದಲ್ಲಿ ಆ್ಯಂಡ್ರೂಸ್ ಪಾತ್ರದ ಮೂಲಕ ಜನಮನ್ನಣೆ ಗಳಿಸಿದರು.
ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ ವಿಶ್ವಮಟ್ಟದಲ್ಲಿ 1300 ಕೋಟಿ ರೂಪಾಯಿಗೆ ಹೆಚ್ಚು ಸಂಪಾದನೆ ಮಾಡಿದೆ. ಈ ಸಾಧನೆ ಮಾಡಿರುವ ಮೂರನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೀರ್ ಖಾನ್ ನಟನೆಯ ‘ದಂಗಲ್’ ಚಿತ್ರ 2100 ಕೋಟಿ ರು. ಗಳಿಕೆ ಮಾಡಿದರೆ, ಬಾಹುಬಲಿ 2 ಸಿನಿಮಾ 1,810 ಕೋಟಿ ರು. ಗಳಿಕೆ ಮಾಡಿತ್ತು. ಭಾರತದಲ್ಲಿ ರು.1000 ಕೋಟಿ ಗಳಿಕೆ ದಾಖಲಿಸಿದ ಎರಡನೇ ಸಿನಿಮಾ ಎಂಬ ಕೀರ್ತಿ ಕೆಜಿಎಫ್ 2ಗೆ ಇದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2 ಇದೆ.
'ಕೆಜಿಎಫ್ 2'ಗಾಗಿ ಹೇಗಿತ್ತು ಗೊತ್ತಾ ಸ್ಟಾರ್‌ಗಳ ತಯಾರಿ: ಇಲ್ಲಿದೆ ತೆರೆ ಹಿಂದಿನ ಇಂಟ್ರೆಸ್ಟಿಂಗ್ ಸುದ್ದಿ!
ಅಮೆಜಾನ್ ಪ್ರೈಮ್‌ನಲ್ಲಿ ಕೆಜಿಎಫ್ 2
‘ಕೆಜಿಎಫ್ 2’ ಚಿತ್ರವನ್ನು ಅಮೆಜಾನ್ ಪ್ರೈಮ್‌ನಲ್ಲಿ ಪ್ರಸ್ತುತ ‘ಮೂವಿ ರೆಂಟಲ್ ಪ್ಲಾನ್’ ನಲ್ಲಿ 199 ರು. ಪಾವತಿಸಿ ನೋಡಬಹುದು. ಇಷ್ಟುಹಣ ಪಾವತಿ ಮಾಡಿದರೆ ‘ಕೆಜಿಎಫ್ 2’ ಚಿತ್ರ ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಸಿಗುತ್ತವೆ. ಒಂದು ತಿಂಗಳ ಅವಧಿ ಇರುತ್ತದೆ.
ಯಶ್ ನಟನೆಯ ‘ಕೆಜಿಎಫ್ 2’ ಚಿತ್ರವನ್ನು 26 ದಿನಗಳಲ್ಲಿ 5.5 ಕೋಟಿಗೂ ಅಧಿಕ ಜನ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದರು. ಈ ಮೂಲಕ ಹೊಸ ದಾಖಲೆ ನಿರ್ಮಾಣವಾಗಿತ್ತು. ರಾಷ್ಟ್ರಮಟ್ಟದಲ್ಲಿ ಇದು ದಾಖಲೆಯ ವೀಕ್ಷಣೆಯಾಗಿದೆ. ‘ಬಾಹುಬಲಿ 2’ ಚಿತ್ರವನ್ನು ರಾಷ್ಟ್ರಮಟ್ಟದಲ್ಲಿ ಸುಮಾರು 10.80 ಕೋಟಿ, ‘ಗದ್ದರ್’ ಚಿತ್ರವನ್ನು 8 ರಿಂದ 9 ಕೋಟಿ ಜನ ವೀಕ್ಷಿಸಿರಬಹುದು ಎಂದು ಅಂದಾಜಿಸಲಾಗಿದೆ. ಬಾಹುಬಲಿಯ ಮೊದಲ ಭಾಗವನ್ನು 4.90 ಕೋಟಿ ಜನ ನೋಡಿದ್ದರು. ಬಾಲಿವುಡ್ ಚಿತ್ರ ‘ದಂಗಲ್’ ಚಿತ್ರ ರಾಷ್ಟ್ರಮಟ್ಟದಲ್ಲಿ ಮೂರು ಕೋಟಿಗೂ ಅಧಿಕ ವೀಕ್ಷಣೆ ಕಂಡಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.
