Asianet Suvarna News Asianet Suvarna News

ಕಡಲ ಕಿನಾರೆಯಲ್ಲಿ ಮಕ್ಕಳೊಂದಿಗೆ ಎಂಜಾಯ್‌ ಮಾಡ್ತಿರೋ ರಾಕಿಂಗ್‌ ಸ್ಟಾರ್‌ ಯಶ್‌ ದಂಪತಿ

ರಾಕಿಂಗ್ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಅವರ ಮುದ್ದು ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಅವರೊಂದಿಗೆ ಬೀಚ್‌ನಲ್ಲಿ ಎಂಜಾಯ್‌ ಮಾಡುತ್ತಾ ಸಮಯ ಕಳೆದಿದ್ದಾರೆ.
 

KGF Hero Rocking star Yash couple enjoying with children at the beach sat
Author
First Published Sep 10, 2023, 5:14 PM IST

ಬೆಂಗಳೂರು (ಸೆ.10): ರಾಕಿಂಗ್ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಅವರ ಮುದ್ದು ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಅವರೊಂದಿಗೆ ಬೀಚ್‌ ಬಳಿ ಹೋಗಿ ಮಕ್ಕಳೊಂದಿಗೆ ಮಕ್ಕಳಾಗಿ ಸಮಯ ಕಳೆದಿದ್ದಾರೆ. ಈ ವೇಳೆ ಯಶ್‌ ತಮ್ಮ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಸಮುದ್ರವನ್ನು ತೋರಿಸಿದರೆ, ಇದೇ ವೇಳೆ ಮಗಳೊಂದಿಗೆ ರಾಧಿಕಾ ಪಂಡಿತ್‌ ಕ್ಯೂಟ್‌ ಫೋಟೋ ಪೋಸ್‌ ನೀಡಿದ್ದಾರೆ. ಈ ಬಗ್ಗೆ ವೀಡಿಯೋ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದಾರೆ.

ಇನ್ನು ಸದಾಕಾಲ ಸಿನಿಮಾದಲ್ಲಿಯೇ ಬಿಜಿಯಾಗಿರುವ ಯಶ್‌ ಸಮಯ ಸಿಕ್ಕಾಗಲೆಲ್ಲಾ ಪತ್ನಿ ಮಕ್ಕಳಿಗೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆ. ಸಿನಿಮಾದಲ್ಲಿ ನಾಯಕನಾಗುವ ಜೊತೆಗೆ, ಕುಟುಂಬಕ್ಕೆ ಸಮಯ ಮೀಸಲಿಟ್ಟು ತಮ್ಮ ಮಕ್ಕಳಿಗೆ ಮೊದಲ ಹೀರೋ ಎಂದೆನಿಸಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾದಿಂದ ಸ್ವಲ್ಪ ಬಿಡುವು ಪಡೆದಿರುವ ಯಶ್‌ ತಮ್ಮ ಪತ್ನಿ ಮಕ್ಕಳೊಂದಿಗೆ ಬೀಚ್‌ಗೆ ಹೋಗಿ ಸಮಯ ಕಳೆದಿದ್ದಾರೆ. ಆದರೆ, ಇದು ಯಾವ ಬೀಚ್‌ ಎಂ ಬಗ್ಗೆ ಸುಳಿವು ನೀಡಿಲ್ಲ. ಇನ್ನು ಬೀಚ್‌ನ ಬಳಿಯ ಗುಡಿಸಲಿನಲ್ಲಿ ಕುಟುಂಬ ಸಮೇತ ಕುಳಿತು ಬಿಸಿಲಿನಿ ಝಳದಿಂದ ವಿಶ್ರಾಂತಿ ಪಡೆದಿದ್ದಾರೆ. ಈ ವೇಳೆ ಪತ್ನಿ ರಾಧಿಕಾ ಪಂಡಿತ್‌ ಹಾಗೂ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಫೋಟೋಗೆ ಸ್ಮೈಲ್‌ ಕೊಡುತ್ತಾ ಪೋಸ್‌ ನೀಡಿದ್ದಾರೆ.

ಮಂಗಳೂರು ಬೆಡಗಿ ಆಶಿಕಾ ಪಡುಕೋಣೆ ಹಾಟ್‌ ಲುಕ್‌ ನೋಡಿ: ಇವಳೇನಾ ಸೀರೆಯುಡುವ 'ತ್ರಿನಯನಿ'

ಪಿಂಕ್‌ ಥೀಮ್‌ನಲ್ಲಿ ರಕ್ಷಾಬಂಧನ ಆಚರಿಸಿದ್ದ ಮಕ್ಕಳು: ಇನ್ನು ಯಶ್‌ ದಂಪತಿ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಈ ವರ್ಷ ರಕ್ಷಾಬಂಧನವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಿದ್ದರು. ಇಬ್ಬರೂ ಕೂಡ ಪಿಂಕ್, ಹಳದಿ ಕೆಂಪು ಬಣ್ಣ ಮಿಶ್ರಿತ ಧಿರಿಸಿನಲ್ಲಿ ಮಿಂಚಿದ್ದಾರೆ. ಅಕ್ಕ  ಆಯ್ರಾ, ತನ್ನ ತಮ್ಮ ಯಥರ್ವ್‌ಗೆ ಆರತಿ ಮಾಡಿ, ತಿಲಕವಿಟ್ಟು ರಾಖಿ ಕಟ್ಟಿ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಈ ಬಗ್ಗೆ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದು, ಕೆಲವೊಮ್ಮೆ ಸಹಯೋಗಿಗಳು, ಕೆಲವೊಮ್ಮೆ ಪ್ರತಿಸ್ಪರ್ಧಿಗಳು, ಕೆಲವೊಮ್ಮೆ ರಕ್ಷಕರು, ಆದರೆ ಯಾವಾಗಲೂ ಒಬ್ಬರಿಗೊಬ್ಬರು ಇರುತ್ತಾರೆ.  ಎಲ್ಲಾ ಒಡಹುಟ್ಟಿದವರಿಗೆ ರಕ್ಷಾಬಂಧನದ ಶುಭಾಶಯಗಳು ಎಂದು ಬರೆದುಕೊಂಡಿದ್ದರು.

ತೆಲುಗು ಸೀರಿಯಲ್‌ ಲೋಕವನ್ನು ಆಳುತ್ತಿರುವ ಕನ್ನಡಿಗರು: ಇವರ ನಟನೆಗೆ ಆಂಧ್ರದ ಜನತೆ ಕ್ಲೀನ್‌ ಬೋಲ್ಡ್‌

ರಾಧಿಕಾ ಪಂಡಿತ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌: ಯಶ್​-ರಾಧಿಕಾ ಅಭಿಮಾನಿಗಳು ಈ ಫೋಟೋಗಳಲ್ಲಿ ಸಖತ್​ ಮೆಚ್ಚುಗೆ ಸೂಚಿಸಿದ್ದಾರೆ. ನಟನೆಯಿಂದ ಬ್ರೇಕ್​ ಪಡೆದುಕೊಂಡಿರುವ ರಾಧಿಕಾ ಪಂಡಿತ್​ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮಕ್ಕಳ ಬಗ್ಗೆ ಆಗಾಗ ಅಪ್​ಡೇಟ್​ ನೀಡುತ್ತಿರುತ್ತಾರೆ. ಎಲ್ಲ ವಿಶೇಷ ಸಂದರ್ಭದಲ್ಲೂ ಅವರು ಫೋಟೋ ಮತ್ತು ವಿಡಿಯೋ ಶೇರ್​ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ಇತ್ತೀಚೆಗೆ ವರಮಹಾಲಕ್ಷ್ಮಿ ಹಬ್ಬದ ಆಚರಣೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಿದ್ದು, ಕುಟುಂಬ ಸಮೇತರಾಗಿ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋ ಹಂಚಿಕೊಂಡಿದ್ದ ರಾಧಿಕಾ ಪಂಡಿತ್‌ ವರಮಹಾಲಕ್ಷ್ಮಿ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಹಾರೈಸಿದ್ದರು.

 

 
 
 
 
 
 
 
 
 
 
 
 
 
 
 

A post shared by Yash (@thenameisyash)

Follow Us:
Download App:
  • android
  • ios