ತೆಲುಗು ಸೀರಿಯಲ್ ಲೋಕವನ್ನು ಆಳುತ್ತಿರುವ ಕನ್ನಡಿಗರು: ಇವರ ನಟನೆಗೆ ಆಂಧ್ರದ ಜನತೆ ಕ್ಲೀನ್ ಬೋಲ್ಡ್
ಬೆಂಗಳೂರು (ಸೆ.09): ಕನ್ನಡದ ಕಿರುತೆರೆಯಲ್ಲಿ ಚಾನ್ಸ್ ಸಿಗದೇ ಹಾಗೂ ಕನ್ನಡದಲ್ಲಿ ಸಖತ್ ಆಗಿ ಮಿಂಚುತ್ತಿದ್ದರೂ ತೆಲುಗು ಧಾರವಾಹಿಗಳಿಗೆ ಹೋಗಿ ಭರ್ಜರಿಯಾಗಿ ಮಿಂಚುತ್ತಿರುವ ನಟ- ನಟಿಯರ ಪಟ್ಟಿ ಇಲ್ಲಿದೆ ನೋಡಿ. ಇವರು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮನೆ ಮಕ್ಕಳಂತಾಗಿದ್ದಾರೆ. ಇನ್ನು ಕೆಲವರು ಕನ್ನಡ ಮತ್ತು ತೆಲುಗು ಕಿರುತೆರೆ ಕ್ಷೇತ್ರಗಳೆರಡರಲ್ಲೂ ಮಿಂಚುತ್ತಿದ್ದಾರೆ.
ತೆಲುಗು ಕಿರುತೆರೆ ಲೋಕದ ಯಶಸ್ವಿ ಧಾರಾವಾಹಿಗಳಲ್ಲಿ ಒಂದಾಗಿರುವ ತ್ರಿನಯನಿ (Trinayani) ಧಾರವಾಹಿಯ ನಟಿ 'ಆಶಿಕಾ ಪಡುಕೋಣೆ' (Ashika Pdukone) ಮಂಗಳೂರಿನವರು. ತೆಲುಗಿನ ಕಥಲೋ ರಾಜಕುಮಾರಿ ಮತ್ತು ತ್ರಿನಯನಿ ಧಾರವಾಹಿಗಳಲ್ಲಿ ಮಿಂಚುತ್ತಿದ್ದಾರೆ.
ಕನ್ನಡದ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ನಟಿಸಿದ್ದ ಚಂದುಗೌಡ (Chandu Gowda) ಕರ್ನಾಟಕದ ಮನೆ ಮಗನಾಗಿದ್ದರು. ಆದರೆ, ಈ ಸೀರಿಯಲ್ ಮುಗಿದ ಬಳಿಕ ಕನ್ನಡದಲ್ಲಿ ಚಾನ್ಸ್ ಸಿಗದೇ ತೆಲುಗಿ ಕಿರಿತೆರೆಗೆ ಹೋಗಿದ್ದು, ತ್ರಿನಯನಿ ತೆಲುಗು ಧಾರವಾಹಿಯಲ್ಲಿ ಮಿಂಚುತ್ತಿದ್ದಾರೆ.
ತೆಲುಗಿನ ಗುಪ್ಪೇದಂತ ಮನಸು ಧಾರಾವಾಹಿಯ ನಟಿ ರಕ್ಷಾಗೌಡ (Raksha Gowda) ಕೂಡ ಮಿಂಚುತ್ತಾ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಕನ್ನಡಕ್ಕಿಂತ ತೆಲುಗಿನಲ್ಲಿಯೇ ಭರ್ಜರಿ ಯಶಸ್ಸು ಕಂಡಿದ್ದಾರೆ.
ಇನ್ನು ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಕವಿತಾಗೌಡ ಜಾಗಕ್ಕೆ ಆಗಮಿಸಿದ್ದ ಚಿನ್ನು 'ರಶ್ಮಿ ಪ್ರಭಾಕರ್' (Rashmi Prabhakar) ಕೂಡ ತೆಲುಗು ಧಾರವಾಹಿಯ ಬೇಡಿಕೆ ನಟಿಯಾಗಿದ್ದಾರೆ. ತೆಲುಗಿನ 'ಪೌರ್ಣಮಿ' ಧಾರವಾಹಿಯಲ್ಲಿ ನಟಿಸಿದ್ದು, ಈಗ ಕಾವ್ಯಾಂಜಲಿ ಧಾರವಾಹಿಯಲ್ಲಿ ಬಿಜಿಯಾಗಿದ್ದಾರೆ.
ಮೂಲತಃ ಕನ್ನಡ ನಟಿಯಾಗಿರುವ ಐಶ್ವರ್ಯಾ (Ishwarya) ಅವರು, ತೆಲುಗು ಕಿರುತೆರೆ ಕ್ಷೇತ್ರದ ಪ್ರಸಿದ್ಧ ಧಾರವಾಹಿ 'ಕೃಷ್ಣ ತುಳಸಿ'ಯ ಪಾತ್ರದಿಂದ ಎಲ್ಲರಿಗೂ ಪರಿಚಿತರಾಗಿದ್ದಾರೆ. ಈಗ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳನ್ನು ನಟಿಸುತ್ತಿದ್ದಾರೆ.
ಕನ್ನಡದಲ್ಲಿ ಸಿನಿಮಾ ಹಾಗೂ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿದ್ದ 'ಸುನೀಲ್ ಪುರಾಣಿಕ್' (Suneel Ouranik) ಈಗ ತೆಲುಗಿನ ಕಿರುತೆರೆ ಲೋಕದ 'ನಾಗಪಂಚಮಿ' ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಈಗ ತೆಲುಗು ಕಿರುತೆರೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಕೊಂಡಿದ್ದಾರೆ.
ಮೂಲ ತೆಲುಗಿನವರಾದರೂ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ನಿರೂಪಕನಾಗಿಯೇ ಕಾಣಿಸಿಕೊಳ್ಳುತ್ತಿರುವ ನಟ 'ಅಕುಲ್ ಬಾಲಾಜಿ' (Akul Balaji) ತೆಲುಗಿನ ಧಾರವಾಹಿಯಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ತೆಲುಗಿನ 'ಊಹಲು ಗುಸಾಗುಸಲಾದೆ' ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.
ಕನ್ನಡದ ಸತ್ಯ ಧಾರವಾಹಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ವಿಲನ್ ರೋಲ್ ಮಾಡಿರುವ 'ಪ್ರಿಯಾಂಕಾ ಶಿವಣ್ಣ' (Priyanka Shivanna) ಈಗ ತೆಲುಗು ಧಾರವಾಹಿಯಲ್ಲೂ ಮಿಂಚುತ್ತಿದ್ದಾರೆ. ತೆಲುಗಿನ ಕಥಲೋ ರಾಜಕುಮಾರಿ, ಕೃಷ್ಣ-ತುಳಸಿ, ನಾಗಪಂಚಮಿ ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಟಾಪ್ ಸೀರಿಯಲ್‌ಗಳಲ್ಲಿ ಒಂದಾಗಿರುವ ಸೀತಾ ರಾಮ ಧಾರವಾಹಿಯ ರಾಮ ಪಾತ್ರಧಾರಿ 'ಗಗನ್ ಚಿನ್ನಪ್ಪ' (Gagan Chinnappa) ತೆಲುಗು ಕಿರುತೆರೆಯ 'ಕೃಷ್ಣ ಮುಕುಂದ ಮುರಾರಿ' ಸೀರಿಯಲ್‌ನಲ್ಲಿ ಮೊದಲಿಂದಲೂ ಮಿಂಚುತ್ತಿದ್ದಾರೆ. ತೆಲುಗಿನಲ್ಲಿ ಖಡಕ್ ಪೊಲೀಸ್ ಆಗಿದ್ದು, ಕನ್ನಡದಲ್ಲಿ ಲವರ್ ಬಾಯ್ ಆಗಿದ್ದಾನೆ.
ಕನ್ನಡದ ಪಾರು ಸೀರಿಯಲ್‌ನ ಪಾರು ತಂಗಿಯಾಗಿ ನಟಿಸುತ್ತಿರುವ 'ಪವಿತ್ರಾ ಬಿ ನಾಯ್ಕ' (Pavitra B Naik) ತೆಲುಗಿನ 'ನುವ್ವು ನೇನು ಪ್ರೇಮ' ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ.
ಕನ್ನಡದ ನಟ ಮುಖೇಶ್‌ಗೌಡ (Mukhesh Gowda) ಕನ್ನಡದಲ್ಲಿ ಹೆಚ್ಚಿನ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ ತೆಲುಗಿಗೆ ಹೋಗಿದ್ದಾರೆ. ತೆಲುಗಿನ ಹಿಟ್ ಧಾರವಾಹಿ ಗುಪ್ಪೆದಂತ ಮನಸು ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.