ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್, ಇಂಟರ್‌ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ.  ದೇಶ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.  ರಾಕಿಂಗ್ ಸ್ಟಾರ್ ನೋಡಲು ಫಿಲಿಪೈನ್ಸ್ ನಿಂದ ಬಂದ ಅಭಿಮಾನಿಯೊಬ್ಬರು ಭಾರತಕ್ಕೆ ಬಂದಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್, ಇಂಟರ್‌ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ದೇಶ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ರಾಕಿಂಗ್ ಸ್ಟಾರ್ ನೋಡಲು ಫಿಲಿಪೈನ್ಸ್ ನಿಂದ ಬಂದ ಅಭಿಮಾನಿಯೊಬ್ಬರು ಭಾರತಕ್ಕೆ ಬಂದಿದ್ದಾರೆ. 

ಯಶ್ ಭೇಟಿ ಮಾಡಲು ಪೇಟೆ ಅಶೋಕ್ ಜೋರ್ನಲ್ ಎನ್ನುವ ಫಿಲಿಫೈನ್ಸ್ ಅಭಿಮಾನಿ ಭಾರತಕ್ಕೆ ಬಂದಿದ್ದಾರೆ. ಯಶ್ ನೋಡಬೇಕು ಸಹಾಯ ಮಾಡಿ ಎಂದು ಸಾಮಾಜಿಕ‌ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

ಸದ್ಯ ಬೆಂಗಳೂರಿಗೆ ಬಂದಿರೋ ರಾಕಿಂಗ್ ಸ್ಟಾರ್ ಅಭಿಮಾನಿ ಯಶ್ ಗಾಗಿ ಕನ್ನಡ ಕಲಿಯುತ್ತಿದ್ದಾರೆ. ಕೆಜಿಎಫ್ ಸಿನಿಮಾ‌ದಲ್ಲಿನ‌ ಅಭಿನಯ ಹಾಗೂ ಯಶೋಮಾರ್ಗದ ಕೆಲಸಗಳನ್ನ ಮೆಚ್ಚಿಕೊಂಡಿದ್ದಾರೆ. ಪೇಟೆ ಅಶೋಕ್ ಜೋರ್ನಲ್ ಏರ್ ಫೋರ್ಟ್ ನರ್ಸ್ ಆಗಿ ಕೆಲಸ ಮಾಡ್ತಿದ್ದಾರೆ. ಇದೇ ತಿಂಗಳ 20 ರಂದು ವಾಪಸ್ ಫಿಲಿಪೈನ್ಸ್ ಗೆ ತೆರಳಲಿದ್ದಾರೆ. ಅದಕ್ಕೂ ಮುನ್ನ ಯಶ್ ಅವರನ್ನ ಭೇಟಿ ಮಾಡಿಸಿ ಎಂದು ಮಾಧ್ಯಮ‌‌ ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.