ಯಶ್, ಸಾರ್ಥಕ ಬದುಕಿಗಾಗಿ ಸಕಾಲದಲ್ಲಿ ಕಾರ್ಯಗಳನ್ನು ಮಾಡಿ ಆನಂದಿಸಬೇಕೆಂದು ಪ್ರೇರೇಪಿಸಿದ್ದಾರೆ. "ಬದುಕನ್ನು ಬದುಕುವುದೇ ಬದುಕು" ಎಂದಿರುವ ಅವರು, ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಮತ್ತು ಹಿಂದಿಯ 'ರಾಮಾಯಣ' ಚಿತ್ರಗಳ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ. 'ರಾಮಾಯಣ'ದಲ್ಲಿ ರಾವಣನ ಪಾತ್ರ ನಿರ್ವಹಿಸುತ್ತಿರುವ ಯಶ್, ನಿರ್ಮಾಪಕರೂ ಹೌದು.
ಕೆಜಿಎಫ್ ಸಿನಿಮಾ ಮೂಲಕ ಜಗದ್ವಿಖ್ಯಾತಿ ಪಡೆದ ನಟ ಯಶ್ (Rocking Star Yash) ಅವರು ಆಗಾಗ ಕೆಲವು ಮೋಟಿವೇಶನ್ ಮಾತುಗಳನ್ನು ಹೇಳುತ್ತಾ ಇರುತ್ತಾರೆ. ಅದು ಶಾರ್ಟ್ಸ್ ಹೆಸರಿನಲ್ಲಿ ಜಗತ್ತಿನ ತುಂಬಾ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತ ಇರುತ್ತದೆ. ಇದೀಗ ಅಂತಹುದೇ ಒಂದು ಮಾತು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗ್ತಿದೆ. ಅದು ಅಂತಿಂಥ ಮಾತಲ್ಲ, ಕೆಲವರ ಪಾಲಿಗೆ ಕಾಮಧೇನು, ಕಲ್ಪವೃಕ್ಷ ಆಗಬಹುದು. ಜೀವನದಲ್ಲಿ ಏನೋ ಸಾಧಿಸಬೇಕು ಎಂದು ಮಿಕ್ಕ ಎಲ್ಲವನ್ನೂ ತ್ಯಾಗಮಾಡಲು ಹೊರಟ ಕೆಲವರಿಹೆ ಇದು ಕಣ್ತೆರೆಸುವ ಸಂಜೀವಿನಿ ಕೂಡ ಆಗಬಹುದು.
ಹಾಗಿದ್ದರೆ ನಟ ಯಶ್ ಅದೇನು ಹೇಳಿದ್ದಾರೆ? ಕುತೂಹಲಕ್ಕೆ ಇಲ್ಲಿದೆ ಉತ್ತರ.. 'ಯಾವ್ಯಾವಾಗ ಏನೇನ್ ಮಾಡ್ಬೇಕೋ ಆಗ ಮಾಡಿ ಲೈಫ್ ಎಂಜಾಯ್ ಮಾಡ್ಬೇಕು.. ಆ ಟೈಮ್‌ನಲ್ಲಿ ಮಾಡ್ಲಿಲ್ಲ ಅಂದ್ರೆ ಅದ್ನ ಕಳ್ಕೊಂಡಂಗೆ.. ಯಾವಾಗ ಏನೇನ್ ಮಾಡ್ಬೇಕು ಅಂತ ಮಾಡಿದ್ರೆ ತಾನೇ ಅದು ಬ್ಯೂಟಿಫುಲ್ ಲೈಫ್, ಕಂಪ್ಲೀಟ್ ಲೈಫ್ ಅಂತ ಹೇಳ್ಬಹುದು.. ಅದೇ ಎಕ್ಸ್‌ಪೀರಿಯನ್ಸ್.. ಬದುಕನ್ನ ಬದುಕೋದೇ ಬದುಕಂತೆ.. 'ಎಂದಿದ್ದಾರೆ ಕನ್ನಡದ ರಾಕಿಂಗ್ ಸ್ಟಾರ್, ಪ್ಯಾನ್ ಇಂಡಿಯಾ ನಟ ಯಶ್.
ಯಾಕೋ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸದ ಯಶ್ ಅವ್ರಿಗೆ ಏನೋ ಗಿಫ್ಟ್ ಕೊಟ್ಟಿದ್ದಾರೆ!
ಸದ್ಯ ನಟ ಯಶ್ ಅವರು ಪ್ಯಾನ್ಸ್ ವರ್ಲ್ಡ ಸಿನಿಮಾ ಟಾಕ್ಸಿಕ್ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಬಿಇಎಲ್ ಬಳಿ ಬೃಹತ್
ಸೆಟ್ ಒಂದನ್ನು ಈ ಸಿನಿಮಾ ಶೂಟಿಂಗ್‌ಗಾಗಿ ನಿರ್ಮಿಸಲಾಗಿದೆ. ಸದ್ಯ ಭರದಿಂದ ಶೂಟಿಂಗ್ ಸಾಗಿದ್ದು, ಮುಂದಿನ ವರ್ಷದ ಹೊತ್ತಿಗೆ ಈ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ನಟ ಯಶ್ ಅವರು ಹಿಂದಿಯಲ್ಲಿ 'ರಾಮಾಯಣ' ಹೆಸರಿನ ಮತ್ತೊಂದು ಬಿಗ್ ಬಜೆಟ್ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ.
ಬಾಲಿವುಡ್‌ನ ರಾಮಾಯಣ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ರಾಮನ ಪಾತ್ರದಲ್ಲಿ ಮಿಂಚುತ್ತಿದ್ದು, ಸೀತೆಯಾಗಿ ಸ್ಟಾರ್ ನಟಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ರಾವಣನ ಪಾತ್ರದಲ್ಲಿ ನಟ ಯಶ್ ಅಬ್ಬರಿಸಲಿದ್ದು, ಈ ಚಿತ್ರಕ್ಕೆ ಯಶ್ ಅವರು ನಿರ್ಮಾಪಕರಲ್ಲಿ ಕೂಡ ಒಬ್ಬರಾಗಿದ್ದಾರೆ. ಸದ್ಯ ಈ ಸಿನಿಮಾ ಕೂಡ ಶೂಟಿಂಗ್ ಹಂತದಲ್ಲಿದ್ದು, ಈ ಎರಡೂ ಚಿತ್ರಗಳಿಗೆ ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ ಎನ್ನಬಹುದು. ಒಟ್ಟಿನಲ್ಲಿ, ಸದ್ಯ ಯಶ್ ಹವಾ ಜಗತ್ತಿನ ತುಂಬೆಲ್ಲಾ ವ್ಯಾಪಿಸಿದ್ದು, ಕನ್ನಡದ ನಟರೊಬ್ಬರು ಹೊಸ ಇತಿಹಾಸ ಬರೆದಂತಾಗಿದೆ.
ಕನ್ನಡದ 'ಪಲ್ಲವಿ ಅನುಪಲ್ಲವಿ'ಗೆ ಹಿಂದಿಯ ಅನಿಲ್ ಕಪೂರ್ ಆಯ್ಕೆಯಾಗಿದ್ದು ಹೇಗೆ?
