ಬಾಹುಬಲಿ ನಟ ಪ್ರಭಾಸ್ ರಾಧೇ ಶ್ಯಾಮ್ ನಂತರ ಆದಿಪುರುಷ್‌ನಲ್ಲಿ ಬ್ಯುಸಿ ಇದ್ರೆ ಈ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ಅವರ ಜೊತೆಗೂ ಕೈ ಜೋಡಿಸಿದ್ದಾರೆ. ಸಿನಿಪ್ರಿಯರಿಗೆ ಸರ್ಪೈಸ್ ಕೊಟ್ಟಿದೆ ಈ ಜೋಡಿ.

ಕೆಜಿಎಫ್ ಚಾಪ್ಟರ್ 2 ಸಿನಿಮಾ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿರೋ ಮಧ್ಯೆಯೇ ನಿರ್ದೇಶಕ ಪ್ರಶಾಂತ್ ನೀಲ್ ನಟ ಪ್ರಭಾಸ್ ಅವರನ್ನು ಭೇಟಿ ಮಾಡಿದ್ದು ಕುತೂಹಲ ಮೂಡಿಸಿತ್ತು. ಇದೀಗ ಈ ಎಲ್ಲ ಕುತೂಹಲಕ್ಕೂ ತೆರೆ ಬಿದ್ದಿದೆ

ಬಾಹುಬಲಿ ನಟನ ಭೇಟಿಯಾದ KGF ನಿರ್ದೇಶಕ: ಪ್ರಭಾಸ್‌ ಜೊತೆ ಪ್ರಶಾಂತ್ ನೀಲ್ ಸಿನಿಮಾ..?

ಮತ್ತೊಂದು ದೊಡ್ಡ ಸುದ್ದಿ ಕಡೆಗೇ ಹೊರಬಿದ್ದಿದೆ. ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟಿಸುತ್ತಿರುವುದು ಪಕ್ಕಾ ಆಗಿದೆ. ಚಿತ್ರಕ್ಕೆ ಸಲಾರ್‌ ಎಂದು ಹೆಸರಿಡಲಾಗಿದೆ. ಸಲಾರ್‌ ಸಿನಿಮಾ ನಿರ್ಮಿಸುತ್ತಿರುವುದು ಹೊಂಬಾಳೆ ಫಿಲ್ಮ್‌$್ಸನ ವಿಜಯ್‌ ಕಿರಗಂದೂರು. ಈ ಮೂಲಕ ಕನ್ನಡದ ನಿರ್ಮಾಪಕ, ನಿರ್ದೇಶಕರಿಬ್ಬರು ಭಾರತೀಯ ಸಿನಿಮಾ ರೂಪಿಸುವ ಹೆಮ್ಮೆಗೆ ಪಾತ್ರರಾಗಿದ್ದರೆ.

‘ಸಲಾರ್‌’ ಎಂದರೆ ಲೀಡರ್‌ ಎಂದರ್ಥ. ಉರ್ದು ಭಾಷೆಯಲ್ಲಿ ಲೀಡರ್‌ಗೆ ಸಲಾರ್‌ ಎನ್ನುತ್ತಾರೆ. ಪ್ರಭಾಸ್‌ ತೆಲುಗು ಹೀರೋ ಆಗಿರುವ ಕಾರಣಕ್ಕೆ ಹಾಗೂ ಎಲ್ಲಾ ಭಾಷೆಗಳಿಗೂ ತಲುಪುವ ದೃಷ್ಟಿಯಿಂದ ‘ಸಲಾರ್‌’ ಎಂದು ಹೆಸರಿಡಲಾಗಿದೆ. ಬಂದೂಕು ಹಿಡಿದು ಕೂತಿರುವ ಪ್ರಭಾಸ್‌ ಫಸ್ಟ್‌ ಲುಕ್‌ ವೈರಲ್‌ ಆಗಿದೆ. ಮುಂದಿನ ವರ್ಷ ಜನವರಿ ತಿಂಗಳ ಕೊನೆಯಿಂದ ಚಿತ್ರೀಕರಣ ಆರಂಭವಾಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲ ಭಾಷೆಗಳಲ್ಲೂ ಮೂಡಿ ಬರಲಿದೆ.

 

ತಾನು ಬಹಳ ಹಿಂದಿನಿಂದಲೂ ಪ್ರಭಾಸ್‌ ಜತೆ ಮಾತುಕತೆ ಮಾಡುತ್ತಿದ್ದುದಾಗಿ ಪ್ರಶಾಂತ್‌ ನೀಲ್‌ ಈ ಸಂದರ್ಭದಲ್ಲಿ ಹೇಳಿದ್ದಾರೆ. ಸದ್ಯದ ಜಗತ್ತಿನ ಆ್ಯಕ್ಷನ್‌ ಸಿನಿಮಾ ಇದಾಗಿದ್ದು, ಈ ಹಿಂದೆ ಕಾಣಿಸಿರದ ಅವತಾರದಲ್ಲಿ ಪ್ರಭಾಸ್‌ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳು ಖುಷಿ ಪಡುವ ವಿಶ್ವಾಸ ನನಗಿದೆ ಎಂದಿದ್ದಾರೆ ಪ್ರಶಾಂತ್‌ ನೀಲ್‌. ಈ ಹಿಂದೆ ‘ಉಗ್ರಂ’ ಚಿತ್ರವನ್ನು ಪ್ರಶಾಂತ್‌ ನೀಲ್‌ ತೆಲುಗಿನಲ್ಲಿ ರೀಮೇಕ್‌ ಮಾಡಲಿದ್ದು, ಈ ಚಿತ್ರದಲ್ಲಿ ಪ್ರಭಾಸ್‌ ನಾಯಕನಾಗಿ ನಟಿಸುತ್ತಾರೆ ಎಂದು ಸುದ್ದಿಯಾಗಿದ್ದನು ಈಗ ಸ್ಮರಿಸಿಕೊಳ್ಳಬಹುದು.

ಫಸ್ಟ್‌ ಲುಕ್‌ ಹೊರಬೀಳುತ್ತಿದ್ದಂತೆ ನಟ ಪ್ರಭಾಸ್‌ ಅವರಿಗೆ ನಟ ಪುನೀತ್‌ ರಾಜ್‌ಕುಮಾರ್‌ ಸ್ವಾಗತ ಕೋರಿ ಟ್ವೀಟ್‌ ಮಾಡಿದ್ದಾರೆ. ಕನ್ನಡನಾಡಿಗೆ ಸ್ವಾಗತ ಎಂದಿದ್ದಾರೆ.

ಸದ್ಯ ಪ್ರಭಾಸ್‌ ‘ರಾಧೆ ಶ್ಯಾಮ್‌’, ದೀಪಿಕಾ ಪಡುಕೋಣೆ ಜತೆಗಿನ ಸಿನಿಮಾ ಹಾಗೂ ‘ಆದಿಪುರುಷ’ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈ ಎರಡೂ ಚಿತ್ರಗಳಲ್ಲಿ ಹೇಳಿಕೊಳ್ಳುವಂತಹ ಆ್ಯಕ್ಷನ್‌ ದೃಶ್ಯಗಳು ಇಲ್ಲ. ಎರಡೂ ಚಿತ್ರಗಳು ಸಾಫ್ಟ್‌ ಆಗಿವೆ. ಈ ಚಿತ್ರಗಳ ಆ್ಯಕ್ಷನ್‌ ಕೊರತೆಯನ್ನು ‘ಸಲಾರ್‌’ ತುಂಬಿಸಲಿದೆ ಎಂಬುದು ಚಿತ್ರರಂಗದ ಮಂದಿಯ ಅಭಿಪ್ರಾಯ.

ಪ್ರಭಾಸ್‌ಗೆ ಆಕ್ಷನ್‌ ಕಟ್ ಹೇಳುತ್ತಿರುವ ಪ್ರಶಾಂತ್‌ ನೀಲ್; ಇದು 'ಹೊಂಬಾಳೆ' ನಿರ್ಮಾಣ!

ಭಾರಿ ವೈಲೆಂಟ್‌ ಪಾತ್ರ ನನ್ನದು. ಇಂಥ ಪಾತ್ರ ನಾನು ಈ ಮೊದಲು ಮಾಡಿಲ್ಲ. ಶೂಟಿಂಗ್‌ ಸೆಟ್‌ಗೆ ಹೋಗುವ ಕಾತರದಲ್ಲಿದ್ದೇನೆ ಎಂದಿದ್ದಾರೆ ನಟ ಪ್ರಭಾಸ್. ಲಾರ್ಜರ್‌ ದ್ಯಾನ್‌ ಲೈಫ್‌ ಸಿನಿಮಾಗಳನ್ನು ನಿರ್ಮಿಸುವುದರಲ್ಲಿ ನನಗೆ ಆಸಕ್ತಿ. ಸಲಾರ್‌ ಆ ಆಸೆಯನ್ನು ಪೂರೈಸುತ್ತದೆ. ಪ್ರಭಾಸ್‌ ಮತ್ತು ಪ್ರಶಾಂತ್‌ ಇಬ್ಬರೂ ಪ್ರತಿಭಾವಂತರು. ಅವರ ಜತೆ ಸಿನಿಮಾ ಮಾಡಲು ಖುಷಿ ಇದೆ ಎಂದಿದ್ದಾರೆ ವಿಜಯ್‌ ಕಿರಗಂದೂರು.