‘ಕೆಜಿಎಫ್​ 2’, ‘ಕಾಂತಾರ’ ಮುಂತಾದ ಸಿನಿಮಾಗಳ ನಿರ್ಮಾಪಕ ವಿಜಯ್​ ಕಿರಗಂದೂರು ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದೇ ವೇಳೆ ಅವರು ‘ಕೆಜಿಎಫ್​ 3’ ಹಾಗೂ ಕಾಂತಾರ ಪ್ರೀಕ್ವೆಲ್‌ ಚಿತ್ರದ ಬಿಡುಗಡೆ ಬಗ್ಗೆ ಮಾತನಾಡಿದ್ದಾರೆ.

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಂಗಳವಾರ ನವದೆಹಲಿಯಲ್ಲಿ ನಡೆಯಿತು. ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ನಿರ್ಮಾಣ ಮಾಡಿದ ಸಿನಿಮಾಗಳಿಗೆ ಒಟ್ಟು 4 ಪ್ರಶಸ್ತಿಗಳು ಸಿಕ್ಕಿದೆ. ‘ಕೆಜಿಎಫ್​ 2’, ‘ಕಾಂತಾರ’ ಮುಂತಾದ ಸಿನಿಮಾಗಳ ನಿರ್ಮಾಪಕ ವಿಜಯ್​ ಕಿರಗಂದೂರು ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದೇ ವೇಳೆ ಅವರು ‘ಕೆಜಿಎಫ್​ 3’ ಹಾಗೂ ಕಾಂತಾರ ಪ್ರೀಕ್ವೆಲ್‌ ಚಿತ್ರದ ಬಿಡುಗಡೆ ಬಗ್ಗೆ ಮಾತನಾಡಿದ್ದಾರೆ. ಹೌದು! ಪ್ರಶಸ್ತಿ ಸಿಕ್ಕ ಖುಷಿಗೆ ಕೆಜಿಎಫ್‌ 3 ಬಗ್ಗೆ ಏನಾದರೂ ಅಪ್‌ಡೇಟ್‌ ಇದ್ಯಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ವಿಜಯ್‌ ಕಿರಗಂದೂರು ಉತ್ತರಿಸಿದ್ದಾರೆ.

ಕಳೆದ ಬಾರಿಯೇ ಹೇಳಿದ್ದೆ, ಕೆಜಿಎಫ್‌ 3 ಚಿತ್ರದ ಬಗ್ಗೆ ಇನ್ನು 4-5 ತಿಂಗಳಲ್ಲಿ ಖಂಡಿತ ಅಪ್‌ಡೇಟ್‌ ಕೊಡುತ್ತೇವೆ, ಚಿತ್ರದ ಬಗ್ಗೆ ನಾವು ಚರ್ಚೆ ಮಾಡುತ್ತಲೇ ಇದ್ದೇವೆ ಎಂದಿದ್ದಾರೆ. ಜೊತೆಗೆ ಕಾಂತಾರ ಪ್ರೀಕ್ವೆಲ್‌ ಬಗ್ಗೆಯೂ ಮಾತನಾಡಿದ ಅವರು, ಸಿನಿಮಾ ಚಿತ್ರೀಕರಣ ಬಹಳ ಚೆನ್ನಾಗಿ ನಡೆಯುತ್ತಿದೆ. ರಿಷಬ್‌ ಶೆಟ್ಟಿ ಹಾಗೂ ತಂಡ ಕುಂದಾಪುರದಲ್ಲಿದ್ದುಕೊಂಡು ಬಹಳ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾರೆ. ಮುಂದಿನ ಆಗಸ್ಟ್‌ನಲ್ಲಿ ನೀವು ಕಾಂತಾರ 2 ನಿರೀಕ್ಷೆ ಮಾಡಬಹುದು ಎಂದು ಹೇಳಿದ್ದಾರೆ. ಇನ್ನು ಕೆಜಿಎಫ್​ 3 ವಿಚಾರದ ಬಗ್ಗೆ ತಿಳಿಯುತ್ತಿದ್ದಂತೆ ಯಶ್‌ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.

ಯಶ್‌ ಫ್ಯಾನ್ಸ್‌ಗೆ ಬ್ಯಾಡ್‌ ನ್ಯೂಸ್, ಕೆಜಿಎಫ್ 3 ಚಿತ್ರದಲ್ಲಿ ಪ್ರಭಾಸ್: ಪ್ರಶಾಂತ್ ನೀಲ್ ಹೊಸ ಪ್ಲಾನ್ ಏನು?

ಕೆಜಿಎಫ್‌, ಕಾಂತಾರಗೆ ತಲಾ 2 ಅವಾರ್ಡ್‌: ರಾಷ್ಟ್ರಪತಿ ದ್ರೌಪದಿ ಮುರ್ಮು, ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಟ ರಿಷಬ್‌ ಶೆಟ್ಟಿ ಕಾಂತಾರಾ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರೆ, ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿ ಕಾಂತಾರ ಪ್ರಶಸ್ತಿ ಪಡೆದುಕೊಂಡಿತು. ಕಳೆದ ಆಗಸ್ಟ್‌ನಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಲಾಗಿದ್ದು, ಕನ್ನಡಕ್ಕೆ ಈ ವರ್ಷ ಒಟ್ಟು 7 ಪ್ರಶಸ್ತಿಗಳು ಲಭಿಸಿವೆ. ಯಶ್‌ ಅಭಿಯನಯದ ಕೆಜಿಎಫ್‌ -2, ಅತ್ಯುತ್ತಮ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ, ಅದೇ ಸಿನಿಮಾದ ಸಾಹಸ ನಿರ್ದೇಶನಕ್ಕಾಗಿ ಅನ್ಬರಿವ್‌ ಅತ್ಯುತ್ತಮ ಸಾಹಸ ನಿರ್ದೇಶಕ ಪ್ರಶಸ್ತಿ ಸ್ವೀಕರಿಸಿದರು. ನಾನ್‌ ಫೀಚರ್‌ ಫಿಲಂ ವಿಭಾಗದಲ್ಲಿ ಬಸ್ತಿ ದಿನೇಶ್‌ ಶೆಣೈ ‘ಮಧ್ಯಂತರ’ ಚಿತ್ರಕ್ಕಾಗಿ ಚೊಚ್ಚಲ ನಿರ್ದೇಶನ, ಸುನೀಲ್‌ ಪುರಾಣಿಕ್‌ ‘ರಂಗ ವೈಭೋಗ’ ಚಿತ್ರಕ್ಕಾಗಿ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಹಾಗೂ ಸುರೇಶ್‌ ಅರಸ್‌ ‘ಮಧ್ಯಂತರ’ ಚಿತ್ರಕ್ಕಾಗಿ ಸಂಕಲನ ಪ್ರಶಸ್ತಿ ಸ್ವೀಕರಿಸಿದರು.