ಸೂಪರ್ ಸ್ಟಾರ್ ಯಶ್ ಅವರಿಂದ ಪೆಪ್ಸಿಯ ನೂತನ 'RISE UP, BABY!’ ಜಾಹೀರಾತು ಅನಾವರಣ 

ಬೆಂಗಳೂರು, ಮಾರ್ಚ್ 23, 2023: ಯುವ ಸಮುದಾಯ ಕೇಂದ್ರಿತ ಬೇವರೀಜ್ ಬ್ರ್ಯಾಂಡ್ ಆಗಿರುವ ಪೆಪ್ಸಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ತನ್ನ 125 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಬಾರಿಯ ಬೇಸಿಗೆಗೆ ಪರಿಚಯಿಸಿರುವ ‘RISE UP, BABY!’ WITH PEPSI® ಎಂಬ ಜಾಹೀರಾತು ಅಭಿಯಾನದಲ್ಲಿ ಕಾಣಿಸಿಕೊಂಡು ಯುವ ಸಮುದಾಯವನ್ನು ಉತ್ತೇಜಿಸಲಿದ್ದಾರೆ.

ಪೆಪ್ಸಿಯ ಆತ್ಮಕ್ಕೆ ಗೌರವದಡಿಯ ಜಾಹೀರಾತು ಅಭಿಯಾನವು ಸಮಾಜದ ಮೂಲಕ ಭಾರತದ ಯುವ ಸಮುದಾಯವನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಈ ತತ್ತ್ವಶಾಸ್ತ್ರ ಮೇಲೆ ತಯಾರಿಸಿರುವ ಈ ಸಾಂಕೇತಿಕ ಟಿವಿಸಿ ವ್ಯಕ್ತಿಗಳಾಗಿ ನಾವು ನಿರಂತರವಾಗಿ ಧ್ವನಿಗಳಿಂದ ರಾರಾಜಿಸಲಿದೆ ಎಂಬುದನ್ನು ತೋರಿಸುತ್ತದೆ. ಈ ಧ್ವನಿಗಳು ಯಾವುದನ್ನು ಇಷ್ಟಪಡಬೇಕು, ಯಾರನ್ನು ಸ್ವೈಪ್ ಮಾಡಬೇಕು ಎಂಬುದನ್ನು ನಿರಂತರವಾಗಿ ಹೇಳುತ್ತವೆ. ನಾವು ಸಾಮಾಜಿಕ
ಧ್ವನಿಗಳನ್ನು ಹೆಚ್ಚು ಆಲಿಸಿದರೆ ಅವರು ನಮ್ಮನ್ನು ನಿರ್ಣಯ ಮಾಡುತ್ತಾರೆ, ನಮ್ಮನ್ನು ನಿಯಂತ್ರಿಸುತ್ತಾರೆ ಮತ್ತು ಶೀಘ್ರದಲ್ಲೇ ನಮ್ಮ ಮೇಲೆ ಹಿಡಿತ ಸಾಧಿಸುತ್ತಾರೆ. ಅದಮ್ಯವಾದ ಪೆಪ್ಸಿ ಹುಡುಗನ ವ್ಯಕ್ತಿತ್ವವನ್ನು ಸಾಕಾರಗೊಳಿಸುತ್ತಾ ಯಶ್ ತಮ್ಮ ಸುತ್ತಲಿನ ಪ್ರತಿಯೊಬ್ಬರನ್ನೂ Rise up Baby ಎಂದು ಹೇಳುವ ಮೂಲಕ ಸವಾಲು ಹಾಕಲು, ಅವರ ಹೃದಯವನ್ನು ಅನುಸರಿಸುವಂತೆ ಮಾಡುವಲ್ಲಿ ಪ್ರೋತ್ಸಾಹಿಸುತ್ತಾರೆ.

ಸಲ್ಮಾನ್‌ನಿಂದ ಯಶ್ ಕೈಗೆ ಬಂದ ಪೆಪ್ಸಿ; ಪ್ರತಿಷ್ಠಿತ ಬ್ರಾಂಡ್‌ಗೆ KGF ಸ್ಟಾರ್ ಅಂಬಾಸಿಡರ್

ಈ ಹೊಸ ಜಾಹೀರಾತು ಅಭಿಯಾನದ ಬಗ್ಗೆ ಮಾತನಾಡಿದ ಪೆಪ್ಸಿಕೊ ಇಂಡಿಯಾದ ಪೆಪ್ಸಿ ಕೋಲಾದ ಕೆಟಗರಿ ವಿಭಾಗದ ಮುಖ್ಯಸ್ಥರಾದ ಸೌಮ್ಯ ರಾಥೋರ್ ಅವರು, ``ಯಶ್ ಅವರೊಂದಿಗೆ ಸಹಭಾಗಿತ್ವ ಮಾಡಿಕೊಂಡ ಅತ್ಯಲ್ಪ ಅವಧಿಯಲ್ಲೇ ಅತ್ಯದ್ಭುತವಾದ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಈ ಒಂದು ವಿನೂತನವಾದ ಸಹಭಾಗಿತ್ವಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಾವು ಭರವಸೆ ನೀಡಿದಂತೆ ನಮ್ಮ ಈ ಹೊಸ ಜಾಹೀರಾತು ಅಭಿಯಾನವನ್ನು ಸಾಕಾರಗೊಳಿಸುವ ಯಶ್ ಒಳಗೊಂಡಿರುವ ಬ್ಲಾಕ್ ಬಸ್ಟರ್ ಚಲನಚಿತ್ರದೊಂದಿಗೆ ನಾವು ಹಿಂದಿರುಗಿದ್ದೇವೆ. ಅವರು ತಮ್ಮ ಅಸಾಧಾರಣ ಶೈಲಿಯಲ್ಲಿ ಯುವ ಸಮುದಾಯವನ್ನು ಹುರಿದುಂಬಿಸುವ, ಸ್ವಯಂ ಅಭಿವ್ಯಕ್ತಿಯನ್ನು ಹೊಂದುವ, ಆತ್ಮವಿಶ್ವಾಸವನ್ನು ತಂದುಕೊಳ್ಳುವುದರ ಬಗ್ಗೆ ಸಶಕ್ತಗೊಳಿಸುತ್ತಾರೆ. ಈ ಪೀಳಿಗೆಯು ನಿಜವಾಗಿಯೂ ಹುಮ್ಮಸ್ಸು ಹೊಂದಿದೆ ಮತ್ತು ಗುರುತ್ವಾಕರ್ಷಣೆಯು ಅವುಗಳ ಮೇಲೆ ಸಂಪೂರ್ಣವಾಗಿ ಏನನ್ನೂ ಹೊಂದಿಲ್ಲ ಎಂಬುದನ್ನು ನಿರಾಕರಿಸಲಾಗದ ಸತ್ಯವನ್ನು ಈ ಟಿವಿಸಿಯಲ್ಲಿ ಚಿತ್ರೀಕರಿಸಲಾಗಿದೆ’’ ಎಂದು ತಿಳಿಸಿದರು.

ಪೆಪ್ಸಿಯ ರಾಯಭಾರಿ ಸೂಪರ್ ಸ್ಟಾರ್ ಯಶ್ ಅವರು ಹೊಸ ಜಾಹೀರಾತು ಅಭಿಯಾನದ ಬಗ್ಗೆ ಮಾತನಾಡಿ, ``ಈ ಜಾಹೀರಾತು ಚಿತ್ರವು ನನಗೆ ತುಂಬಾ ವೈಯಕ್ತಿವಾಗಿದೆ. ಏಕೆಂದರೆ, ಇದು ನಕಾರಾತ್ಮಕ ಅಂಶಗಳನ್ನು ಇನ್ನಿಲ್ಲದಂತೆ ಮಾಡಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಇದರ ಜೊತೆಗೆ ಅಭಿವೃದ್ಧಿಶೀಲ ಮತ್ತು ಉತ್ಸಾಹಭರಿತವಾಗಿರುವಂತೆ ಉತ್ತೇಜಿಸುತ್ತದೆ. ಇದು ಇಂದಿನ ಯುವ ಪೀಳಿಗೆಯ ಧ್ವನಿ ಮತ್ತು ಉದ್ದೇಶವನ್ನು ಪ್ರತಿಬಿಂಬಿಸುವಂತಿದೆ. ನಾನು ಈ ಚಿತ್ರದ
ಚಿತ್ರೀಕರಣದಲ್ಲಿ ಉತ್ತಮ ಸಮಯವನ್ನು ಹೊಂದಿದ್ದೇನೆ ಮತ್ತು ನಾನು ಮಾಡಿದ ರೀತಿಯನ್ನು ಕಂಡು ಪ್ರೇಕ್ಷಕರು ಆನಂದಿಸುವ ವಿಶ್ವಾಸ ನನಗಿದೆ’’ ಎಂದರು.

ಇನ್ ಸ್ಟಾಗ್ರಾಂನಲ್ಲಿ ಲಕ್ಷಾಂತರ ಅಭಿಮಾನಿಗಳೊಂದಿಗೆ ಯಶ್ ಅವರು ‘Rise up Baby!’ ಜಾಹೀರಾತು ಟಿವಿಸಿಯನ್ನು ಬಿಡುಗಡೆ ಮಾಡಿದರು. ದೇಶಾದ್ಯಂತ ಸಾಂಪ್ರದಾಯಿಕ ಮತ್ತು ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಈ ಜಾಹೀರಾತನ್ನು ಪ್ರಸಾರ ಮಾಡಲಾಗುತ್ತದೆ.

YouTube video player