ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಮನೆಗೆ ಕೆಲ ದಿನಗಳ ಹಿಂದೆ ಹೊಸ ಅತಿಥಿ ಬಂದಿದ್ದಾನೆ. ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಪುಟಾಣಿ ಐರಾ ಅಕ್ಕ ಆಗಿದ್ದಾಳೆ. 

ಯಶ್- ರಾಧಿಕಾ ಮಗನ ಫೋಟೋವನ್ನು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಮಾಳವಿಕಾ ಅವಿನಾಶ್ ಐರಾ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಮಗನ ಫೋಟೋವೂ ರಿವೀಲಾಗಿದೆ. ಅಕ್ಕ-ತಮ್ಮನನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

ರಾಧಿಕಾ -ಯಶ್ ಮಕ್ಕಳ ಫೋಟೋವನ್ನು ರಿವೀಲ್ ಮಾಡುವುದರಲ್ಲಿ ಬಹಳ ಚ್ಯೂಸಿ. ಮಗಳು ಐರಾ ಫೋಟೋವನ್ನೂ ಬಹಳ ದಿನಗಳ ಬಳಿಕ ರಿವೀಲ್ ಮಾಡಿದ್ದರು. ಮಗನ ಫೋಟೋವನ್ನು ಅದೇ ರೀತಿ ರಿವೀಲ್ ಮಾಡಲಿದ್ದಾರೆ. ಅಷ್ಟೊರೊಳಗೆ ಆಕಸ್ಮಿಕವಾಗಿ ಫೋಟೋ ಹೊರ ಬಿದ್ದಿದೆ.

 

ಯಶ್ ಸದ್ಯ ಕೆಜಿಎಫ್ 2 ನಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷಿತ ಕೆಜಿಎಫ್ 2 ಪೋಸ್ಟರ್ ಕೂಡಾ ರಿಲೀಸಾಗಿದೆ. ಯಶ್ ಲುಕ್‌ಗೆ ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. 

ಡಿಸೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ