ಕೆಜಿಎಫ್-2 ನಟ ಹರೀಶ್ ರೈಗೆ ಕ್ಯಾನ್ಸರ್; ಸಹಾಯಕ್ಕೆ ಮನವಿ
ಸ್ಯಾಂಡಲ್ ವುಡ್‌ನ ಖ್ಯಾತ ನಟ, ಕೆಜಿಎಫ್-2 ಸಿನಿಮಾದಲ್ಲಿ ನಟಿಸಿದ್ದಿದ್ದ ಹರೀಶ್ ರೈ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇತ್ತೀಚಿಗೆ ಪರೀಕ್ಷೆ ಮಾಡಿಸಿದ ಹರೀಶ್ ರೈ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ.
ಸ್ಯಾಂಡಲ್ ವುಡ್‌ನ ಖ್ಯಾತ ನಟ, ಕೆಜಿಎಫ್-2 ಸಿನಿಮಾದಲ್ಲಿ ನಟಿಸಿದ್ದಿದ್ದ ಹರೀಶ್ ರೈ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇತ್ತೀಚಿಗೆ ಪರೀಕ್ಷೆ ಮಾಡಿಸಿದ ಹರೀಶ್ ರೈ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಸುಮಾರು ಮೂರು ವರ್ಷದಿಂದ ಅವರು ಅನಾರೋಗ್ಯದಿಂದ ನರಳಾಡುತ್ತಿದ್ದರು. ಆದರೆ ಮಕ್ಕಳು ಚಿಕ್ಕವರು ಹಾಗೂ 'ಕೆಜಿಎಫ್ 2' ಚಿತ್ರದ ಶೂಟಿಂಗ್ ನಲ್ಲಿದ್ದಕಾರಣ ಚಿಕಿತ್ಸೆ ಪಡೆಯಲು ತಡ ಮಾಡಿದ್ದರಂತೆ. ಹಣದ ಕೊರತೆ ಕೂಡ ಇದ್ದಿದ್ದರಿಂದ ಹರೀಶ್ ರೈ ತೀರ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಳಿಕ ವೈದ್ಯರ ಬಳಿ ಹೋಗಿದ ಹರೀಶ್ ರೈ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಕೂಡಲೇ ಆಪರೇಷನ್ ಸಹ ಮಾಡಿದರು. ಆದರೆ ಆಪರೇಷನ್ ನಂತರ ಕೂಡ ಒಂದಿಷ್ಟು ಸಮಸ್ಯೆಗಳು ಎದುರಾಗಿದ್ದು ತೀರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಅನೇಕರು ಮಾತನಾಡಿ ಹಣದ ಸಹಾಯ ಮಾಡುವಂತೆ ಹೇಳಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರೀಶ್ ರಾಯ್ ಅವರಿಗೆ ಹೆಲ್ಪ್ ಮಾಡಿ ಮೊಬೈಲ್ ನಂಬರ್ ಸಹ ಹಾಕಿದ್ದರು. ಇದೀಗ ಹರೀಶ್ ರೈ ಅವರೇ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ್ದಾರೆ.
ಅನಾರೋಗ್ಯದ ಬಗ್ಗೆ ಮಾತನಾಡಿದ ಹರೀಶ್ ರೈ ‘ವೈದ್ಯರು ನಾಲ್ಕನೇ ಸ್ಟೇಜ್ ಎಂದರು. ಇನ್ನು ನನಗೆ ಎಷ್ಟು ಟೈಮ್ ಉಳಿದಿದೆ ಅಂತ ಕೇಳಿದೆ. ಮೂರು ವರ್ಷ ಹೆದರಬೇಡಿ ಅಂತ ಡಾಕ್ಟರ್ ಹೇಳಿದ್ರು. ರೇಡಿಯೋ ಥೆರಪಿ ವರ್ಕ್ ಆಗದ ಕಾರಣ ಬೇರೆ ಮಾತ್ರೆ ನೀಡುತ್ತಿದ್ದಾರೆ. ಆ ಮಾತ್ರೆಗಳಿಗೆ ಖರ್ಚು ಜಾಸ್ತಿ. ತಿಂಗಳಿಗೆ 3.5 ಲಕ್ಷ ಖರ್ಚಾಗಬಹುದು. 8-10 ತಿಂಗಳು ಮಾತ್ರೆ ತೆಗೆದುಕೊಳ್ಳಬೇಕು ಅಂತ ವೈದ್ಯರು ಹೇಳಿದ್ದಾರೆ’ ಎಂದು ಹರೀಶ್ ರೈ ಕಷ್ಟದ ಸ್ಥಿತಿ ಬಿಚ್ಚಿಟ್ಟಿದ್ದಾರೆ.
ಹಣದ ಅವಶ್ಯಕತೆ ತುಂಬಾ ಇದೆ ಎಂದು ಹರೀಶ್ ರೈ ಹೇಳಿದ್ದಾರೆ. ಫ್ಯಾಮಿಲಿ ಯಾರೂ ಬರಲ್ಲ. ಕಷ್ಟದಲ್ಲಿ ಅವರು ಸಹಾಯಕೂಡ ಮಾಡಲ್ಲ. ಜನರು ಬರುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ಸದ್ಯ ಹರೀಶ್ ರೈ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ‘ಕೆಜಿಎಫ್ 2 ಸಿನಿಮಾ ಶೂಟಿಂಗ್ ಸಂದರ್ಭದಲ್ಲೂ ನನಗೆ ಗಂಟಲಲ್ಲಿ ಗಡ್ಡೆ ಇತ್ತು. ಆದರೂ ಕೂಡ ನಾನು ಶೂಟಿಂಗ್ ಮಾಡಿದೆ. ಫೈಟಿಂಗ್ ಸೀನ್ ಸಹ ಮಾಡಿದೆ. ಗಡ್ಡೆ ಯಾರಿಗೂ ಕಾಣಿಸುತ್ತಿರಲಿಲ್ಲ. ನಾನು ಯಾರಿಗೂ ಹೇಳಲಿಲ್ಲ. ನಾನೇ ಮುಚ್ಚುಮರೆ ಮಾಡಿದೆ’ ಎಂದು ಹರೀಶ್ ರೈ ಹೇಳಿದ್ದಾರೆ. ಒಂದು ವೇಳೆ ಈ ಸಮಸ್ಯೆ ಗೊತ್ತಾದರೆ ಆಫರ್ ಬರುವುದಿಲ್ಲ ಅಂತ ಭಯ ಆಯ್ತು. ಹಾಗಾಗಿ ಕೆಜಿಎಫ್-2 ಚಿತ್ರ ರಿಲೀಸ್ ಆದ ಬಳಿಕ ನಾನು ಸಂದರ್ಶನ ಕೂಡ ಕೊಟ್ಟಿಲ್ಲ. ಅವರೆಲ್ಲಾ ತಪ್ಪು ತಿಳಿದುಕಂಡಿದ್ದಾರಾ ಏನೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ಸಹಾಯ ಮಾಡಿದ್ದಾರೆ ಅಂತ ಬಹಿರಂಗ ಪಡಿಸಿದ್ದಾರೆ.
ಈಗ ಕನ್ನಡ ಚಿತ್ರರಂಗದ ಕೆಲವು ಸ್ಟಾರ್ ಕಲಾವಿದರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಹೆಸರು ಹೇಳಲು ಇಷ್ಟಪದೆ ಚಿಕಿತ್ಸೆಗೆ ಬೇಕಾಗುವ ಹಣವನ್ನು ನೀಡಲು ಕನ್ನಡದ ಹೀರೋ ಒಬ್ಬರು ಮುಂದೆ ಬಂದಿದ್ದಾರೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹರೀಶ್ ರೈ ಅವರು ಮಾಹಿತಿ ನೀಡಿದ್ದಾರೆ.