Asianet Suvarna News Asianet Suvarna News

ನಟ ದರ್ಶನ್ ಪ್ಯಾಲೆಸ್ ಗ್ರೌಂಡ್‌ನಿಂದ ಅಳುತ್ತಾ ಬಂದಿದ್ದೇಕೆ? ಜಿರಾಫೆ ತರ ಇದೀಯ ಅಂದಿದ್ಯಾರು?

ಶೂಟಿಂಗ್ ಪ್ಯಾಲೇಸ್ ಗ್ರೌಂಡ್‌ನಲ್ಲಿ ಇತ್ತು. ನಟ ದರ್ಶನ್ ಆಗಿನ್ನೂ ನಟರಾಗಿ ಶೈನ್ ಆಗಿರಲಿಲ್ಲ. ದರ್ಶನ್‌ಗೆ ಲವರ್ ಬಾಯ್ ಪಾತ್ರ ಕೊಡಲಾಗಿತ್ತು. ಆದರೆ, ಆಕ್ಷನ್ -ಕಟ್  ಹೇಳುತ್ತಿದ್ದ ನಿರ್ದೇಶಕರು ಪದೇಪದೇ ಸ್ಟಾಪ್ ಎನ್ನುತ್ತಿದ್ದರಂತೆ. 

Challenging Star Darshan rejected from movie amma which is directed by D Rajendrasingh Babu srb
Author
First Published Jun 7, 2024, 11:33 AM IST

ಅಂದಿನ ಖ್ಯಾತ ನಿರ್ದೇಶಕ ಡಿ ರಾಜೇಂದ್ರಸಿಂಗ್ ಬಾಬು ಅವರು 'ಅಮ್ಮ' ಎನ್ನುವ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಅದರ ಶೂಟಿಂಗ್ ಪ್ಯಾಲೇಸ್ ಗ್ರೌಂಡ್‌ನಲ್ಲಿ ಇತ್ತು. ನಟ ದರ್ಶನ್ ಆಗಿನ್ನೂ ನಟರಾಗಿ ಶೈನ್ ಆಗಿರಲಿಲ್ಲ. ದರ್ಶನ್‌ಗೆ (Challenging Star Darshan) ಲವರ್ ಬಾಯ್ ಪಾತ್ರ ಕೊಡಲಾಗಿತ್ತು. ಆದರೆ, ಆಕ್ಷನ್ -ಕಟ್  ಹೇಳುತ್ತಿದ್ದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಪದೇಪದೇ ಸ್ಟಾಪ್ ಎನ್ನುತ್ತಿದ್ದರಂತೆ. ಕಾರಣ, ದರ್ಶನ್ ಹೈಟು. ಬಹಳಷ್ಟು ಎತ್ತರವಿದ್ದ ನಟ ದರ್ಶನ್ ಅವರಿಗೆ ಕ್ಯಾಮೆರಾ ಸೆಟ್ ಮಾಡಿದರೆ ಬೇರೆಯವರು ಕ್ಲೋಸ್‌ಅಪ್‌ನಲ್ಲಿ ಬರುತ್ತಿರಲಿಲ್ಲ. 

ಜಿರಾಫೆ ತರ ಬೆಳೆದುಬಿಟ್ಟಿದೀಯಲ್ಲೋ! ಎಂದು ತಮಾಷೆ ಮಾಡುತ್ತ ಹೇಗೋ ಅಡ್ಜೆಸ್ಟ್ ಮಾಡುತ್ತಿದ್ದರಂತೆ ಬಾಬು ಅವರು. ಆದರೆ, ಪದೇ ಪದೇ ಕಟ್ ಹೇಳುತ್ತಿದ್ದ ರಾಜೇಂದ್ರ ಸಿಂಗ್ ಬಾಬು ಅವರು, ಹೈಟ್ ಜಾಸ್ತಿ, ಜತೆಗೆ ದರ್ಶನ್ ಮೀಸೆ ಬೇರೆ ತೆಗೆದುಬಿಟ್ಟಿದ್ದರಿಂದ ಸೀನ್‌ಗೆ ಮ್ಯಾಚ್ ಆಗುತ್ತಿಲ್ಲವೆಂದು ಅಂದಿನ ಶೂಟಿಂಗ್ ಪ್ಯಾಕಪ್ ಮಾಡಿಬಿಟ್ಟರು. ಅದನ್ನು ತಿಳಿದ ನಟ ದರ್ಶನ್‌ ಅವರಿಗೆ ತುಂಬಾನೇ ಬೇಸರವಾಗಿಬಿಟ್ಟಿತು. ಯಾಕೆ ಹೀಗಾಯ್ತು ಎಂಬ ಯೋಚನೆಯಲ್ಲಿ ಅಳುತ್ತಾ ಕಾರ್ ಹತ್ರ ಬಂದುಬಿಟ್ಟರಂತೆ ನಟ ದರ್ಶನ್. 

ಈ ನಟಿ ಆ ನಟನ ಜೊತೆ ಏನ್ನು ಮಾಡ್ತಿದಾರೆ? ಯಾಕೆ ಅವರಿಬ್ರೂ ಒಟ್ಟಿಗಿದಾರೆ?

ಅಲ್ಲಿದ್ದವರು ದರ್ಶನ್ ಅಳುತ್ತಿರುವುದನ್ನು ನೋಡಿ, ಏನಾಯ್ತು ಎಂದು ಕೇಳಲು, ನಂಗೆ ಕ್ಯಾರೆಕ್ಟರ್ ಇಲ್ಲಾ ಅಂತಿದಾರೆ ಎಂದು ಹೇಳುತ್ತ ದರ್ಶನ್ ಮತ್ತೆ ಮತ್ತೆ ಅಳಲು ಶುರು ಮಾಡಿದ್ದರಂತೆ. ಅದನ್ನು ಕಂಡು ಅಲ್ಲಿದ್ದವರು ಸಮಾಧಾನ ಮಾಡಿ, ಸಿಗುತ್ತೆ ಬಿಡು ಎಂದಿದ್ದರಂತೆ. ಅಳುವನ್ನು ಕಡಿಮೆ ಮಾಡಿಕೊಂಡ ದರ್ಶನ್, ಒಂದ್ ಇನ್ನೂರು ರೂಪಾಯಿ ಇದ್ರೆ ಕೊಡ್ತೀರಾ ಎಂದು ಅಲ್ಲಿದ್ದವರನ್ನು ಕೇಳಲು, ಎಲ್ಲಾ ಸೇರಿ 200 ರೂಪಾಯಿ ಒಟ್ಟುಗೂಡಿಸಿ ನಟ ದರ್ಶನ್‌ ಅವರಿಗೆ ಕೊಟ್ಟು ಕಳಿಸಿದ್ದರಂತೆ. ಬೇಸರದಲ್ಲೇ ನಟ ದರ್ಶನ್ ಮನೆಗೆ ಹೋಗಿದ್ದರಂತೆ. 

ಎತ್ತಿನಬಂಡಿಯಿಂದ ಬಿದ್ದು ಸಾಯುತ್ತಿದ್ದರು ಡಾ ರಾಜ್‌ಕುಮಾರ್; ಬದುಕಿಸಿದ ಪುಣ್ಯಾತ್ಮ ಯಾರು?

ಆದರೆ ಇಂದು ನಟ ದರ್ಶನ್‌, ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್  ಆಗಿ ಬೆಳೆದಿದ್ದಾರೆ. ಸಿನಿಮಾವೊಂದಕ್ಕೆ ಕೋಟಿಯಲ್ಲೇ ಹಣ ಪಡೆಯುವ ದರ್ಶನ್, ಅಂದು ಚಿಕ್ಕ ಪಾತ್ರ ಸಿಗದೇ ಕಂಗಾಲಾಗಿದ್ದರು. ಕಾಲವೇ ಹಾಗೆ, ಯಾವತ್ತು ಯಾರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೋ ಹೇಳಲಾಗದು. ಇಂದು ನಟ ದರ್ಶನ್ ಬೆಳೆದು ನಿಂತಿರುವ ಪರಿ ಎಂಥವರಿಗೂ ಅಚ್ಚರಿ ಹುಟ್ಟಿಸುವಂಥದ್ದು. ಅಂದಹಾಗೆ, ನಟ ದರ್ಶನ್‌ ಹಾಗೂ ಕನಸಿನ ರಾಣಿ ಮಾಲಾಶ್ರೀ ಮಗಳು ಆರಾಧನಾ ರಾಮ್ ಅ ಅಭಿನಯದ ಕಾಟೇರ ಸಿನಿಮಾ ಸೂಪರ್ ಹಿಟ್ ಆಗುವ ಮೂಲಕ ನಟ ದರ್ಶನ್‌ ಅಭಿನಯದ ಮುಂದಿನ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. 

ಸಿನಿಮಾ ಫೀಲ್ಡ್‌ಗೆ ಬರುವ ಮೊದಲು ರಕ್ಷಿತ್ ಶೆಟ್ಟಿ ಸಿಮೆಂಟ್, ಇಟ್ಟಿಗೆ ಹೊತ್ತಿದ್ದು ನಿಜವೇ?


 

Latest Videos
Follow Us:
Download App:
  • android
  • ios