Asianet Suvarna News Asianet Suvarna News

ಹೊಸಬರ ಸಿನಿಮಾ 'ಖಾಸಗಿ ಪುಟಗಳು';ಮಂಜು, ಸಂತೋಷ್‌ ಶ್ರೀಕಂಠಪ್ಪ ಟೀಮ್‌ನ ಸಾಹಸ!

ಶಾರ್ಟ್‌ಫಿಲಂ ಮಾಡುತ್ತಿದ್ದ ಉತ್ಸಾಹಿಗಳ ತಂಡ ‘ಖಾಸಗಿ ಪುಟಗಳು’ ಅನ್ನೋ ಸಿನಿಮಾ ಮಾಡುವ ಖುಷಿಯಲ್ಲಿದ್ದಾರೆ. ಸದ್ಯ ನಾರ್ವೆಯಲ್ಲಿ ಮೆಕ್ಯಾನಿಕಲ್‌ ಸಿಸ್ಟಂ ಆರ್ಕಿಟೆಕ್ಟ್ ಆಗಿರುವ ಮಂಜು ವಿ ರಾಜ್‌ ಮತ್ತು ಟೀಮ್‌ ಈ ಸಾಹಸಕ್ಕೆ ಮುಂದಾಗಿದೆ. 

Kasagi putagalu by manju santosh and srikantappa vcs
Author
Bangalore, First Published Jan 1, 2021, 3:23 PM IST

ಸಂತೋಷ್‌ ಶ್ರೀಕಂಠಪ್ಪ ನಿರ್ದೇಶಕರು. ಶಾರ್ಟ್‌ಮೂವಿಯಲ್ಲಿ ತೊಡಗಿಸಿಕೊಂಡಿದ್ದ ವಿಶ್ವ ಸಿನಿಮಾದ ನಾಯಕ. ಹಿಂದಿಯಲ್ಲಿ ‘ವೈ’ ಅನ್ನುವ ಸಿನಿಮಾವೊಂದರಲ್ಲಿ ನಟಿಸಿರುವ ಶ್ವೇತಾ ಡಿಸೋಜಾ ನಾಯಕಿ.

ನವಿರಾದ ಕಾಲೇಜು ಪ್ರೇಮಕಥೆಯುಳ್ಳ ಸಿನಿಮಾವಿದು. ಚಿತ್ರೀಕರಣ ಆಲ್‌ಮೋಸ್ಟ್‌ ಮುಗಿದಿದ್ದು, ಹಾಡುಗಳ ಶೂಟಿಂಗ್‌ ಅಷ್ಟೇ ಬಾಕಿ ಇದೆ. ವಾಸುಕಿ ವೈಭವ್‌ ಇದರ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚೇತನ್‌ ದುರ್ಗಾ, ನಂದಕುಮಾರ್‌, ನಿರೀಕ್ಷಾ ಶೆಟ್ಟಿ, ಮೈಸೂರು ದಿನೇಶ್‌ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಉಡುಪಿಯ ಚೆಂದದ ಕರಾವಳಿ ತೀರದಲ್ಲಿ ಹುಟ್ಟುವ ಕಾಲೇಜು ಹುಡುಗರ ಪ್ರೇಮವೇ ಪ್ರಧಾನ ಕಥೆ.

ಹೊಸ ವರ್ಷಕ್ಕೆ ಕಿಕ್, ಚಂದನ್ ಶೆಟ್ಟಿ ಸಖತ್ ಸಾಂಗ್, ಸೂಪರ್ ಡ್ಯಾನ್ಸ್..! 

ನಾನು ಹಿಂದೆ ರಿಷಬ್‌ ಶೆಟ್ಟಿಅವರನ್ನಿಟ್ಟು ಸಿನಿಮಾ ಮಾಡಲು ಮುಂದಾಗಿದ್ದೆ. ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ನಾರ್ವೆಯಲ್ಲಿ ‘ರಂಗಿತರಂಗ’ ತೆರೆ ಕಾಣಲು ಶ್ರಮಿಸಿದ್ದೆ. ಇದೀಗ ಹೊಸ ಸಿನಿಮಾದ ನಿರ್ಮಾಣಕ್ಕಿಳಿದಿದ್ದೇನೆ. ನಮ್ಮ ಕಿರುಚಿತ್ರಗಳಿಗೆ ಅಪಾರ ಬೆಂಬಲ ಸಿಕ್ಕಿತ್ತು. ಸಿನಿಮಾಕ್ಕೆ ಅದಕ್ಕಿಂತ ಹೆಚ್ಚಿನ ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದೇವೆ.- ಮಂಜು ವಿ ರಾಜ್‌

ಪೋಸ್ಟರ್‌ ಹಿನ್ನೆಲೆ

ಈ ಚಿತ್ರದ ಪೋಸ್ಟರ್‌ ಕೆಲವು ದಿನಗಳ ಹಿಂದೆ ರಿಲೀಸ್‌ ಆಗಿದ್ದು, ರಕ್ಷಿತ್‌ ಶೆಟ್ಟಿಸೇರಿದಂತೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಪೋಸ್ಟರ್‌ನಲ್ಲಿ ಕಾಣುವ ಕಡಲು, ಹುಲಿವೇಷ, ದೋಣಿ, ಮೋಟಾರು ಸೈಕಲ್‌, ಓಡುತ್ತಿರುವ ಹುಡುಗ ಇತ್ಯಾದಿ ಡೀಟೇಲಿಂಗ್‌ ಮೂಲಕವೇ ಪ್ರೇಕ್ಷಕರಿಗೆ ಕಥೆಯ ಬಗ್ಗೆ ಕಲ್ಪನೆ ಬೆಳೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಚಿತ್ರತಂಡ.

'ಕನ್ನಡಿಗನ ತೇರು' ಎಳೆದ ಅದಿತಿ ಪ್ರಭುದೇವ ವಿಡಿಯೋ ವೈರಲ್! 

ಶಾರ್ಟ್‌ಮೂವಿಗಳ ಮೂಲಕ ಗಮನಸೆಳೆದಿದ್ದ ಟೀಮ್‌

ಇದೇ ಟೀಮ್‌ನ ಗೆಳೆಯರು ಈ ಹಿಂದೆ ‘ಗೋಣಿಚೀಲ’,‘ಸಂತೆ’ ಇತ್ಯಾದಿ ಶಾರ್ಟ್‌ಫಿಲಂಗಳನ್ನು ಮಾಡಿದ್ದರು. ‘ಸಂತೆ’ ಕಿರುಚಿತ್ರ ಸ್ವೀಡನ್‌, ಜಪಾನ್‌, ಬೆಲ್ಜಿಯಂ ಮೊದಲಾದೆಡೆ ಪ್ರೀಮಿಯರ್‌ನಲ್ಲಿ ತೆರೆಕಂಡು ಮೆಚ್ಚುಗೆ ಗಳಿಸಿತ್ತು. ಇವರ ಶಾರ್ಟ್‌ಮೂವಿಗಳನ್ನು ನೋಡಿದವರೆಲ್ಲ ಫುಲ್‌ ಫೀಚರ್‌ ಫಿಲಂ ಮಾಡುವಂತೆ ಪ್ರೋತ್ಸಾಹಿಸಿದರು. ಹಾಗೆ ಹುಟ್ಟಿಕೊಂಡಿದ್ದೇ ‘ಖಾಸಗಿ ಪುಟಗಳು’.

Follow Us:
Download App:
  • android
  • ios