ಸ್ಯಾಂಡಲ್‌ವುಡ್‌ನಲ್ಲಿ ಶಾನೆ ಟಾಪ್‌ ಆಗಿ ಹೆಸರು ಮಾಡಿರುವ ನಟಿ ಅಧಿತಿ ಪ್ರಭುದೇವ ವಿಭಿನ್ನವಾಗಿ 2020 ವರ್ಷಕ್ಕೆ ವಿದಾಯ ಹೇಳಿದ್ದಾರೆ. ಪಕ್ಕಾ ಕನ್ನಡದ ಹುಡುಗಿ ಆಟೋ ಚಲಾಯಿಸುತ್ತಿರುವ ವಿಡಿಯೋ ನೋಡಲು ಎಷ್ಟು ಖುಷಿಯಾಗುತ್ತದೆ ನೋಡಿ...

ಗುರುದತ್ ಗಾಣಿ ಚಿತ್ರಕ್ಕೆ ಕನ್ನಡದ ನಟಿಯರ ಹುಡುಕಾಟ; ಪ್ರಜ್ವಲ್‌ಗೆ ಜೋಡಿ ಯಾರು? 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಾರಥಿ' ಚಿತ್ರದಲ್ಲಿ ಆಟೋ ಚಾಲಕರಿಗೊಂದು ಹಾಡನ್ನು ಮೀಸಲಿಡಲಾಗಿದೆ. ಅದೇ ಹಾಡನ್ನು ಹಾಕಿಕೊಂಡು ಅದಿತಿ ಆಟೋ ಚಲಾಯಿಸಿದ್ದಾರೆ. ಹಾರ್ಟ್‌ ಸಿಂಬರ್‌ ಮೂಲಕ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.  ಇದಕ್ಕೆ ನಿರೂಪಕಿ ಅನುಶ್ರೀ 'ಸೂಪರ್ ಬೇಬಿ' ಎಂದೂ, ಆರ್‌ಜೆ ನೇತ್ರಾ 'Yeah' ಎಂದು ಕಮೆಂಟ್ ಮಾಡಿದ್ದಾರೆ.

ಇನ್ನು ಸೋಷಿಯಲ್ ಮೀಡಿಯಾದಲ್ಲಿ  ಆ್ಯಕ್ಟಿವ್ ಇರುವ ಅದಿತಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. 'ಪಕ್ಕ ಕನ್ನಡತಿ' ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಡಿ-ಬಾಸ್ ಚಿತ್ರದ ಹಾಡನ್ನು ಆಯ್ಕೆ ಮಾಡಿರುವುದಕ್ಕೆ ಮೆಚ್ಚಿಕೊಂಡಿದ್ದಾರೆ.

ಏನ್ ಸಂದಾಕೆ ರೊಟ್ಟಿ ತಟ್ತೌವ್ಳೆ 'ಶಾನೆ ಟಾಪಾಗವ್ಳೆ ಹುಡುಗಿ' ನೋಡಿ..! 

ಸದ್ಯ ಅದಿತಿ 'ಗಜಾನನ ಗ್ಯಾಂಗ್', 'ಭಗವಾನ್‌ ಶ್ರೀ ಕೃಷ್ಣ ಪರಮಾತ್ಮ', 'ತ್ರಿಬಲ್ ರೈಡಿಂಗ್' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್‌ ಮುಂದಿನ ಸ್ವಮೇಕ್ ಪ್ರಾಜೆಕ್ಟ್‌ಗೆ ನಾಯಕಿಯರ ಹುಡುಕಾಟ ಶುರುವಾಗಿದ್ದು, ತಂಡದ ಗಮನ ಅದಿತಿ ಕಡೆ ವಾಲಿದೆ ಎನ್ನಲಾಗಿದೆ.