Asianet Suvarna News Asianet Suvarna News

'ಕಡ್ಚ' ಪೋಸ್ಟರ್‌ ಬಿಡುಗಡೆ ಮಾಡಿದ ಸಂಸದೆ ಸುಮಲತಾ ಅಂಬರೀಷ್‌

ಹೊಸಬರ ಚಿತ್ರ ಕಡ್ಚ ಚಿತ್ರದ ಮೋಷನ್‌ ಪೋಸ್ಟರ್‌ನ್ನು ಸಂಸದೆ ಸುಮಲತಾ ಅಂಬರೀಷ್‌ ಮತ್ತು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಚಿತ್ರದ ಟ್ಯಾಗ್‌ಲೈನ್ ದೆವ್ವದ ಮರವೆಂದು ಇದೆ. 
 

Kartik Charan Starrer Kadcha movie poster launch by Sumalatha Ambarish gvd
Author
Bangalore, First Published Nov 26, 2021, 4:20 PM IST
  • Facebook
  • Twitter
  • Whatsapp

ಹೊಸಬರ ಚಿತ್ರ 'ಕಡ್ಚ' ಚಿತ್ರದ (Kadcha) ಮೋಷನ್‌ ಪೋಸ್ಟರ್‌ನ್ನು (Motion Poster) ಸಂಸದೆ ಸುಮಲತಾ ಅಂಬರೀಷ್‌ (Sumalatha Ambareesh) ಮತ್ತು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ (Rockline Venkatesh) ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಸಮಾಧಿ ಬಳಿ ಈ ಪೋಸ್ಟರ್‌ ಬಿಡುಗಡೆ ನಡೆಯಿತು. ಚಿತ್ರದ ಟ್ಯಾಗ್‌ಲೈನ್ 'ದೆವ್ವದ ಮರವೆಂದು' ಇದೆ. ಸಂಸ್ಕ್ರತ ಶೀರ್ಷಿಕೆಯಾಗಿದ್ದು, ಟೈಟಲ್‌ಗೆ ಮರ ಅರ್ಥಕೊಡುತ್ತದೆ. ಸೆಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಕತೆಯಾಗಿದೆ. ಪಟ್ಟುಕೊಟೈ ಶಿವ  (Pattukotai Shiva) ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್‌ ಚರಣ್ (Kartik Charan) ನಾಯಕ. ಮಹನಾ (Mahana) ನಾಯಕಿ. 

ಇನ್ನುಳಿದಂತೆ ತಮಿಳು ನಟ, ನಿರ್ದೇಶಕ ಭಾಗ್ಯರಾಜ್, ನಿಜಲ್‌ಗಲ್ ರವಿ, ಗಂಜಕರುಪು, ನಲ್ಲೈಸಿವ, ಬೆಂಜಮಿನ್, ರತ್ಚಸನ್‌ಯಸರ್, ಅಬ್ದುಲ್‌ಕಲಾಂ, ಸ್ಟೆಲ್ಲಾ, ಸತ್ಯ, ವಿಶ್ವ, ಮೈತ್ರಿಯಾ, ಸಾಯಿಮಧು, ಮುಕಿಲನ್, ವಿಕ್ರಂ, ಸಾರಥಿ, ಹರಿ, ಪ್ರಿಯಾ ಮುಂತಾದವರು ನಟಿಸಿದ್ದಾರೆ. ಶ್ರೀ ಶಿವಶಕ್ತಿ ಮುನಿಶ್ವರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಶ್ಯಾಮಲ ರಮೇಶ್ ನಿರ್ಮಾಣ ಮಾಡಿರುವುದು ನೂತನ ಅನುಭವ. ಉನ್ನಿಮೆನನ್ ಕಾರ್ತಿಕ್ ಕಾರ್ತಿಕ ಕಂಠದಲ್ಲಿ ಮೂಡಿಬಂದಿರುವ ಹಾಡುಗಳಿಗೆ ವರನ್‌ ವಿಜೆ ಚಾರ್ಲಿ (Varan VJ Charlie) ಸಂಗೀತ ಸಂಯೋಜಿಸಿದ್ದಾರೆ.

ಅಕ್ಷಿ ಸಿನಿಮಾ ನೋಡಿ ನನ್ನ ಮಗ ನೇತ್ರದಾನಕ್ಕೆ ಮುಂದಾದ: ಜಾಕ್‌ ಮಂಜುನಾಥ್‌

ಕೆ.ಎಸ್‌.ಪಳನಿ ಛಾಯಾಗ್ರಹಣ, ಅನೋ ಅವರ ಸಂಕಲನ, ಸೆಲ್ವಿ ಅವರ ನೃತ್ಯ ಚಿತ್ರಕ್ಕಿದೆ. ಕರ್ನಾಟಕ ಮತ್ತು ತಮಿಳುನಾಡು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲೆ ಕನ್ನಡ ಸೇರಿದಂತೆ ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿಕೊಂಡಿದ್ದಾರೆ. ಶಿವಶಕ್ತಿ ಮುನಿಶ್ವರ್ ಫಿಲಂಸ್ (ShivaShakti Munishvar Films) ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ಶ್ಯಾಮಲ ರಮೇಶ್ (Shyamala Ramesh) ನಿರ್ಮಾಣ ಮಾಡಿದ್ದಾರೆ. 

ಇನ್ನು, ಅಂಬರೀಶ್ (Ambareesh) ಅವರ ಮೂರನೇ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ (Abhishek Ambareesh) ಸೇರಿದಂತೆ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ (Kanteerava Studio) ಬಂದು ಅಂಬಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ, ಅಂಬರೀಶ್ ಅವರು ಸಿನಿಮಾ, ರಾಜಕಾರಣಿಯಲ್ಲ. ಅವರು ಸಮಾಜಮುಖಿ ಕೆಲಸಗಳನ್ನು ತೋರಿಕೆಗಾಗಿ ಮಾಡಿಲ್ಲ. ಕಷ್ಟದಲ್ಲಿ ಇದ್ದವರಿಗೆ ಸ್ಪಂದಿಸಿದವರು. ಅವರ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಲು ಡಾ.ಅಂಬರೀಶ್ ಚಾರಿಟೇಬಲ್ ಟ್ರಸ್ಟ್ (Dr.Ambareesh Charitable Trust) ಮಾಡಿದ್ದೇವೆ. ಈ ಮೂಲಕ ಅವರ ಕನಸುಗಳನ್ನು ಮುಂದುವರೆಸುತ್ತಿದ್ದೇವೆ. 

Golden Star Ganesh: ನಾನು ಎಸ್.ಪಿ.ಬಾಲು ಆಗಬೇಕು, ಇಳಯರಾಜ ಆಗಬೇಕು ಎಂದ 'ಸಖತ್ ಬಾಲು'

ಗ್ರಾಮೀಣ ಪ್ರತಿಭೆಗಳನ್ನು ಹೊರ ತರುವ ಕೆಲಸ ಮಾಡುತ್ತೇವೆ. ಕೋವಿಡ್ (Covid) ಸಂದರ್ಭದಲ್ಲಿ ಏನು ಮಾಡೋಕೆ ಆಗಿಲ್ಲ. ಈ ಫೌಂಡೇಶನ್ ಮೂಲಕ ಅಂಬರೀಶ್ ಮಾಡುವ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ. ಜೊತೆಗೆ ಕ್ರೀಡಾಪಟುಗಳು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುತ್ತೇವೆ. ನಮಗೆ ಶಕ್ತಿಯಿದ್ದಷ್ಟು ಕೆಲಸ ಮಾಡುತ್ತೇವೆ. ಇವತ್ತು ಅಂಬರೀಶ್ ಮೂರನೇ ಪುಣ್ಯ ಸ್ಮರಣೆ. ಅವರು ಇಲ್ಲ ಎಂಬ ನೋವು ಶಾಶ್ವತ. ಅವರು ಜೀವನದಲ್ಲಿ ನಡೆದುಕೊಂಡು ಬಂದಿರೋ ಹಾದಿ ನಮಗೆ ಶಕ್ತಿ. ಅಂಥವರನ್ನು ಕಳೆದುಕೊಂಡ ಮೇಲೆ ಧೈರ್ಯ ಬೇಕು. ಅವರ ಜೊತೆ ಕಳೆದ ಸಮಯ ನೆನಪಿಸಿಕೊಂಡರೆ ಧೈರ್ಯ ಬರುತ್ತದೆ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

Follow Us:
Download App:
  • android
  • ios