ಕುಂಭಮೇಳದಲ್ಲಿ ಮೊನಾಲಿಸಾ ಎಂಬ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾರೆ. ನಿವೇದಿತಾ ಗೌಡರೊಂದಿಗೆ ಹೋಲಿಕೆ ಮಾಡಲಾಗುತ್ತಿದ್ದು, "ಯಾರು ನಿಮ್ಮ ಕ್ರಶ್?" ಎಂಬ ಪ್ರಶ್ನೆ ವೈರಲ್ ಆಗಿದೆ. ಮೊನಾಲಿಸಾರ ಸೌಂದರ್ಯ, ಉಡುಗೆ-ತೊಡುಗೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವರು ಈ ಹೋಲಿಕೆಯನ್ನು ವಿರೋಧಿಸಿದರೆ, ಇನ್ನು ಕೆಲವರು ಸಮರ್ಥಿಸಿದ್ದಾರೆ.

ಸದ್ಯ ಭಾರತದಲ್ಲಿ ಮಹಾಕುಂಭ ಮೇಳದ ಸುಂದರಿ ಮೊನಾಲಿಸಾ (Monalisa) ಅವಳದ್ದೇ ಕಾರುಬಾರು! ಕುಂಭಮೇಳದಲ್ಲಿ ಸಾಧು-ಸಂತರನ್ನು ಬಿಟ್ಟು ಅದ್ಯಾಕೆ ಈ ಜೇನುಬಣ್ಣದ ಕಂಗಳು ಹೊಂದಿರುವ ಈ ಹುಡುಗಿ ಹಿಂದೆ ಸೋಷಿಯಲ್ ಮೀಡಿಯಾ ಜನರು ಬಿದ್ದಿದ್ದಾರೆ ಎಂಬುದು ಯಕ್ಷ ಪ್ರಶ್ನೆ. ಆದರೆ, ಯಾರೇನೇ ಅಂದರೂ, ಈ ಮೊನಾಲಿಸಾ ಸದ್ಯಕ್ಕೆ ತುಂಬಾ ಸೆನ್ಸೇಷನ್ ಸೃಷ್ಟಿ ಮಾಡಿರೋದಂತೂ ನಿಜ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಅವಳ ಬಗ್ಗೆಯೇ ಜಪ-ಧ್ಯಾನ ಮಾಡುತ್ತಿದ್ದಾರೆ. 

ಸದ್ಯ ಫೇಸ್‌ಬುಕ್‌ನಲ್ಲಿ ಮೊನಾಲಿಸಾ ಹಾಗೂ ಕರ್ನಾಟಕದ ಸೋಷಿಯಲ್ ಮೀಡಿಯಾ ಸ್ಟಾರ್ ನಿವೇದಿತಾ ಗೌಡ (Niveditha Gowda) ಈ ಇಬ್ಬರನ್ನೂ ಹೋಲಿಕೆ ಮಾಡಿ ಹಾಕಿರುವ ಪೋಸ್ಟ್‌ ಒಂದು ಭಾರೀ ವೈರಲ್ ಆಗುತ್ತಿದೆ. ಕೇವಲ ಪೋಸ್ಟ್ ಮಾತ್ರವಲ್ಲ, 'ಇವರಿಬ್ಬರಲ್ಲಿ ನಿಮ್ಮ ಕ್ರಶ್ ಯಾರು?' ಎಂಬ ಪ್ರಶ್ನೆಯನ್ನು ಸಹ ಸೇರಿಸಲಾಗಿದೆ. ಅದಕ್ಕೂ ಮೇಲೆ 'ಹೆಣ್ಣಿಗೆ ಅವಳ ನಗುವೇ ಅಲಂಕಾರ ಇದ್ದಹಾಗೆ.. ಅವಳು ಚೆಂದ ಕಾಣಬೇಕಕು ಅಂತ 200 ಜೊತೆ ಬಟ್ಟೆ ಹಾಕಿದರೂ ನಮ್ ಜನಕ್ಕೆ ಇಷ್ಟ ಆಗಲ್ಲ' ಎಂಬ ಬರಹ ಬೇರೆ ಇದೆ.

ಸಹಜ ಸುಂದರಿ ಅಂತ ಹೊಗಳ್ತಾ ಇದ್ರೆ ಆ ಪೆದ್ದು ಹೋಗಿ ಬ್ಯೂಟಿ ಪಾರ್ಲರ್‌ನಲ್ಲಿ ಕುಂತೈತೆ!

ಅದೇನಾದ್ರೂ ಆಗಿರಲಿ, ಸದ್ಯ ಈ ಸೋಷಿಯಲ್ ಮೀಡಿಯಾ ಪ್ರಶ್ನೆಗೆ ಜನರು ವಿಭಿನ್ನವಾಗಿ ಉತ್ತರ ಕೊಡುತ್ತಿದ್ದಾರೆ. ಮೊನಾಲಿಸಾ ಹಾಗೂ ನಿವೇದಿತಾ ಗೌಡ ಇಬ್ಬರಲ್ಲಿ ಜನರು ಯಾರನ್ನು ತನ್ನ ಕ್ರಶ್ ಎಂದು ಹೇಳಿದ್ದಾರೆ ಎಂಬುದನ್ನು ನೀವೇ ನೋಡಿ.. ಜೊತೆಗೆ, ಬೇರೆಬೇರೆ ರೀತಿಯ ಉತ್ತರವನ್ನು ಕೂಡ ನೀವು ಅಲ್ಲಿ ನೋಡಬಹುದು. ಹಾಗೇನೇ ನಿಮ್ಮ ಕ್ರಶ್ ಯಾರು ಅಂತನೂ ನೀವು ಕಾಮೆಂಟ್ ಮಾಡಬಹುದು. ಒಮ್ಮೆ ಕಾಮೆಂಟ್ ಸೆಕ್ಷಕ್‌ನಲ್ಲಿ ಕಣ್ಣಾಡಿಸಿ ಬಿಡಿ.. 

ಕಾಮೆಂಟ್‌ನಲ್ಲಿ ಯಾರೋ ಒಬ್ಬರು ಹೀಗೆ ಬರೆದಿದ್ದಾರೆ 'ನಾನು ಸುಂದರಿ, ನನ್ನ ಕಣ್ಣು ಸುಂದರ, ನಾನು ಹಾಕಿರುವ ನನ್ನ ಮೈಮೇಲಿನ ತರಾವರಿ ಬಟ್ಟೆ, ಮಣಿಸರ, ಅಲಂಕಾರ ಚೆಂದಾಗಿದೆ ಅಂತ ನೋಡಕೆ ಜನ ಜಾಸ್ತಿನೆ ಬರ‌್ತಿದ್ದಾರೆ. ಬರಲಿ ಬೇಡ ಅನ್ನಲ್ಲ. ಬಂದವರು ಒಬ್ಬರಾದರೂ ಒಂದು ರುದ್ರಾಕ್ಷಿ ಮಣಿಯನ್ನಾದರು ಕೊಳ್ಳಬಾರದೇ? ಈ ನೋಡುವ ಜನರಿಂದ ನನ್ನ ರುದ್ರಾಕ್ಷಿ ಮಣಿ ವ್ಯಾಪಾರ ಆಗುತ್ತಿಲ್ಲ. ಹಿಂಗೆ ಆದರೆ ಹೊಟ್ಟೆಗೆ ಏನು ತಿನ್ನೋದು? ಈ ಹಾಳಾದ್ ಇಂಟರ್ ನೆಟ್ ನಿಂದ ನಂಗೆ ಬಾಳ ನಷ್ಟ ಆಗ್ತೈತೆ'.

ಮಹಾಕುಂಭ ಮೇಳದಲ್ಲಿ ಭಾಗಿಯಾದ ಸಾಧುಸಂತರ ಬಗ್ಗೆ 'ಹೀಗೆ' ವೈರಲ್ ಆಗ್ತಿದೆ!

ಇದೊಂದು ಮಾತ್ರವಲ್ಲ, ತುಂಬಾ ವಿಭಿನ್ನವಾಗಿ ಹಲವು ಕಾಮೆಂಟ್‌ಗಳು ಗಮನ ಸೆಳೆಯುತ್ತಿವೆ. ನಿವೇದಿತಾರಿಗೆ ಮೊನಾಲಿಸಾರನ್ನು ಹೋಲಿಕೆ ಮಾಡಿರುವುದನ್ನು ಹಲವರು ವಿರೋಧಿಸಿದ್ದಾರೆ, ಕೆಲವರು ಹೋಲಿಕೆ ಸಹಜ ಎಂದವರೂ ಇದ್ದಾರೆ. ಆದರೆ ಏನೇ ಆಗಲಿ, ಕೋಟ್ಯಾಂತರ ಜನರು ಬಂದು ಹೋಗುವ ಈ ಮಹಾಕುಂಭ ಮೇಳದಲ್ಲಿ ಈ ಹುಡುಗಿ ಮೊನಾಲಿಸಾ ಗಮನ ಸೆಳೆದಿದ್ದು ಮಾತ್ರ ವಿಶಿಷ್ಠ ಹಾಗೂ ವಿಪರ್ಯಾಸ ಎನ್ನಲೇಬೇಕು!