Asianet Suvarna News Asianet Suvarna News

ನಟ ದರ್ಶನ್ ತ್ವರಿತವಾಗಿ ಬೇಲ್ ಅರ್ಜಿ ವಿಚಾರಣೆಗೆ ಹೈ ಕೋರ್ಟ್ ಗ್ರೀನ್ ಸಿಗ್ನಲ್!

ಬಹುದಿನಗಳ ನಂತರ ದರ್ಶನ್​ಗೆ ಕೊಂಚ ರಿಲೀಫ್ ಆಗುಬಹುದಾದಂಥಾ ಗುಡ್​ನ್ಯೂಸ್ ಸಿಕ್ಕಿದೆ. ಸೆಷೆನ್ಸ್ ಕೋರ್ಟ್​​ ಬೇಲ್ ನಿರಾಕರಿಸಿದ ಮೇಲೆ ಹೈಕೋರ್ಟ್​​ಗೆ ಬೇಲ್ ಅರ್ಜಿ ಸಲ್ಲಿಸಿರೋ ದರ್ಶನ್ ಪರ ವಕೀಲರು, ದರ್ಶನ್ ಅನಾರೋಗ್ಯ ಸ್ಥಿತಿ ಗಮನಿಸಿ..

Karnataka High Court gives green signal to darshan bail urgent enquiry srb
Author
First Published Oct 19, 2024, 8:14 PM IST | Last Updated Oct 19, 2024, 8:19 PM IST

ಬೇಲ್​ಗಾಗಿ ಪರಿತಪಿಸ್ತಾ ದರ್ಶನ್​ ಪಾಲಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ದರ್ಶನ್ ಆರೋಗ್ಯ ಸ್ಥಿತಿಯನ್ನ ಪರಿಗಣಿಸಿ ಹೈಕೋರ್ಟ್ ತ್ವರಿತವಾಗಿ ಬೇಲ್ ಅರ್ಜಿ ವಿಚಾರಣೆ ಮಾಡೋದಕ್ಕೆ ಯೆಸ್ ಎಂದಿದೆ. ಹಾಗಾದ್ರೆ ದೀಪಾವಳಿ ಹೊತ್ತಿಗೆ ದರ್ಶನ್ ಅಚೆ ಬರ್ತಾರಾ..? ಸದ್ಯ ದರ್ಶನ್​ಗೆ ಕಾಡ್ತಾ ಇರೋ ಆರೋಗ್ಯ ಸಮಸ್ಯೆಯಾದ್ರೂ ಏನು..? ಅ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ದಾಸನಿಗೆ ಗುಡ್​ನ್ಯೂಸ್.. ದೀಪಾವಳಿಗೆ ಸಿಗುತ್ತಾ ಬೇಲ್..?
ಯೆಸ್ ಬಹುದಿನಗಳ ನಂತರ ದರ್ಶನ್​ಗೆ ಕೊಂಚ ರಿಲೀಫ್ ಆಗುಬಹುದಾದಂಥಾ ಗುಡ್​ನ್ಯೂಸ್ ಸಿಕ್ಕಿದೆ. ಸೆಷೆನ್ಸ್ ಕೋರ್ಟ್​​ ಬೇಲ್ ನಿರಾಕರಿಸಿದ ಮೇಲೆ ಹೈಕೋರ್ಟ್​​ಗೆ ಬೇಲ್ ಅರ್ಜಿ ಸಲ್ಲಿಸಿರೋ ದರ್ಶನ್ ಪರ ವಕೀಲರು, ದರ್ಶನ್ ಅನಾರೋಗ್ಯ ಸ್ಥಿತಿ ಗಮನಿಸಿ ಬೇಗ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಬೇಕು ಅಂತ ಮನವಿ ಸಲ್ಲಿಸಿದ್ರು. ಈ ಮನವಿಯನ್ನ ಪುರಸ್ಕರಿಸಿರೋ ಕೋರ್ಟ್ ತ್ವರಿತ ವಿಚಾರಣೆಗೆ ಯೆಸ್ ಅಂದಿದೆ.

ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್‌ ಬೆನ್ನು ನೋವಿಗೆ ಬೆಂಗಳೂರಲ್ಲಿ ಸರ್ಜರಿ!?

ಇದೇ ಅಕ್ಟೋಬರ್ 22ನೇ ತಾರೀಖು ಹೈಕೋರ್ಟ್​​ನಲ್ಲಿ ದರ್ಶನ್ ಬೇಲ್ ಅರ್ಜಿಯ ವಿಚಾರಣೆ ನಡೆಯಲಿದೆ. ರೇಣುಕಾಸ್ವಾಮಿ ಕೊಲೆ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ಹೆಚ್ಚಿನ ತನಿಖೆ ಅಗತ್ಯ ಇಲ್ಲ. ಹಾಗೆಯೇ, ತಾನು ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ಅಗತ್ಯ ಚಿಕಿತ್ಸೆ ಪಡೆಯಲು ಜಾಮೀನು ಮಂಜೂರು ಮಾಡಬೇಕು ಅಂತ ದರ್ಶನ್‌ ಕೋರಿಕೊಂಡಿದ್ದಾರೆ.

ಬೆನ್ನುನೋವಿನಿಂದ ಬಳಲಿ ಬೆಂಡಾಗಿರೋ ದರ್ಶನ್..!
ಹೌದು ತೀವ್ರ ಬೆನ್ನು ನೋವಿನಿಂದ ಬಳಲ್ತಾ ಇರೋ ದರ್ಶನ್​ಗೆ ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸೋದಕ್ಕೆ ಜೈಲು ಅಧಿಕಾರಿಗಳು ಮುಂದಾಗಿದ್ರು. ಆದ್ರೆ ದರ್ಶನ್ ಅದಕ್ಕೆ ಸಿದ್ದವಿಲ್ಲ ತನಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲೇ ಟ್ರೀಟ್​​ಮೆಂಟ್ ಆಗಬೇಕು ಅಂತ ಪಟ್ಟು ಹಿಡಿದಿದ್ದಾರೆ. ಬೇಲ್ ಸಿಕ್ಕ ಮೇಲೆಯೇ ಟ್ರೀಟ್​​ಮೆಂಟ್ ತಗೋತಿನಿ ಅಂತ ಹಠ ಹಿಡಿದಿದ್ದಾರೆ. 

ವೈದ್ಯರಿಂದ ಫಿಸಿಯೋಥೆರಪಿ.. ತಾತ್ಕಾಲಿಕ ರಿಲೀಫ್!
ಸ್ಕಾನಿಂಗ್, ಸರ್ಜರಿಗೆ ಒಪ್ಪದೇ ತೀವ್ರ ಬೆನ್ನು ನೋವಿನಿಂದ ಬಳಲಿದ್ದ   ದರ್ಶನ್ ಗೆ L1, L5 ನಲ್ಲಿ ಊತ ಕಾಣಿಸಿಕೊಂಡಿತ್ತು, ಸೋ, ವೈದ್ಯರ ಸಲಹೆ ಮೇರೆಗೆ ಮೆಡಿಕಲ್ ಬೆಡ್, ದಿಂಬು, ಮತ್ತು ಚೇರ್ ಕೊಡಲಾಗಿದೆ. ಜೊತೆಗೆ ನ್ಯೂರೋ ಹಾಗೂ ಆರ್ಥೋಪಿಡಿಷನ್ ವೈದ್ಯರು ಸ್ಕ್ಯಾನಿಂಗ್, ಸರ್ಜರಿ  ವಿಳಂಬವಾದ್ರೇ,..ಕನಿಷ್ಠ ಫಿಜಿಯೋಥೆರಪಿ ಮಾಡಿಸುವಂತೆ ಸಲಹೆ ನೀಡಿದ್ರು. ಸೋ ಶುಕ್ರವಾರ ಸಂಜೆ ದರ್ಶನ್​ಗೆ ವಿಮ್ಸ್ ಆಸ್ಪತ್ರೆ ವೈದ್ಯರಿಂದ ಫಿಸಿಯೋಥೆರಪಿ ಕೊಡಿಸಲಾಗಿದೆ.

ಖ್ಯಾತ ನಿರ್ಮಾಪಕ ಕೆ ಮಂಜು ಆಸ್ಪತ್ರೆಗೆ ದಾಖಲು; ಹೃದಯ ತಪಾಸಣೆ ಮಾಡಿದ ವೈದ್ಯರು!

ಅಲ್ಲಿಗೆ ದರ್ಶನ್​ಗೆ ಆರೋಗ್ಯ ಸಮಸ್ಯೆಗಳಿರೋದು ಪ್ರೂವ್ ಆಗಿದೆ. ಹೈಕೋರ್ಟ್​​ ಕೂಡ ಇದನ್ನ ಪರಿಗಣಿಸಿ ಬೇಗ ಜಾಮೀನು ಅರ್ಜಿ ವಿಚಾರಣೆ ನಡೆಸೋದಕ್ಕೆ ಯೆಸ್ ಅಂದಿದೆ. ಜೊತೆಗೆ ದರ್ಶನ್ ಪರ ಖಡಕ್ ಆಗಿ ವಾದ ಮಂಡಿಸೋದಕ್ಕೆ ದಿ ಬೆಸ್ಟ್ ಲಾಯರ್ಸ್  ರೆಡಿ ಇದ್ದಾರೆ. ಸೋ ದರ್ಶನ್​ಗೆ ಆದಷ್ಟು ಬೇಗ ಬೇಲ್ ಸಿಕ್ಕರೂ ಅಚ್ಚರಿ ಏನೂ ಇಲ್ಲ. ಸೋ ದೀಪಾವಳಿ ಹೊತ್ತಿಗೆ ಹೊರಬಂದೇ ಬರ್ತೀನಿ ಅನ್ನೋ ನಂಬಿಕೆಯಲ್ಲಿದ್ದಾರೆ ದರ್ಶನ್.

Latest Videos
Follow Us:
Download App:
  • android
  • ios