ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್‌ ಬೆನ್ನು ನೋವಿಗೆ ಬೆಂಗಳೂರಲ್ಲಿ ಸರ್ಜರಿ!?

ಶುಕ್ರವಾರ ಸಂಜೆಯಿಂದಲೇ ವಿಮ್ಸ್ ಆಸ್ಪತ್ರೆ ವೈದ್ಯರಿಂದ ಫಿಜಿಯೋಥೆರೆಪಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜೈಲಿನ ಹೈ ಸೆಕ್ಯೂರಿಟಿ ಸೆಲ್​ನಲ್ಲೇ ವಿಮ್ಸ್ ವೈದ್ಯರು ಒಂದು ಗಂಟೆ ಫಿಜಿಯೋಥೆರೆಪಿ ಮಾಡಿದ್ದಾರೆ. ಇದರಿಂದ ದರ್ಶನ್ ಕೊಂಚ ರಿಲೀಫ್ ಆಗಿದ್ದಾರೆ. ದರ್ಶನ್​ ಬೆನ್ನಿನ ಭಾಗದಲ್ಲಿ ಊತ..

Physiotherapy treatment is going on for darshan in Bellary jail srb

ಕನ್ನಡದ ಸ್ಟಾರ್ ನಟ ದರ್ಶನ್ (Darshan) ಕೊಲೆ ಕೇಸ್ ಅರೋಪಿಯಾಗಿ ಬಳ್ಳಾರಿ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಇರುವುದು ಬಹುತೇಕರಿಗೆ ಗೊತ್ತೇ ಇದೆ. ಹಲವು ದಿನಗಳಿಂದ ನಟ ದರ್ಶನ್ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದರು. ಆದರೆ, ಅವರಿಗೆ ಕಾನೂನಿನ ಪರಿಧಿಯಲ್ಲೇ ಟ್ರೀಟ್‌ಮೆಂಟ್ ಸೇರಿದಂತೆ ಎಲ್ಲವೂ ನಡೆಯಬೇಕಾಗಿರುವುದರಿಂದ, ಚಿಕಿತ್ಸೆಗೆ ಸಾಕಷ್ಟು ವಳಂಬ ಆಗಿತ್ತು. ಇದೀಗ, ಅವರ ಕಾಯಿಲೆಗೆ ಚಿಕಿತ್ಸೆ ದೊರೆಯುತ್ತಿದೆಯಂತೆ. 

ಹೌದು, ಶುಕ್ರವಾರ ಸಂಜೆಯಿಂದಲೇ ವಿಮ್ಸ್ ಆಸ್ಪತ್ರೆ ವೈದ್ಯರಿಂದ ಫಿಜಿಯೋಥೆರೆಪಿ (Physiotherapy Treatment) ಚಿಕಿತ್ಸೆ ಕೊಡಿಸಲಾಗುತ್ತಿದೆ. ಜೈಲಿನ ಹೈ ಸೆಕ್ಯೂರಿಟಿ ಸೆಲ್​ನಲ್ಲೇ ವಿಮ್ಸ್ ವೈದ್ಯರು ಒಂದು ಗಂಟೆ ಫಿಜಿಯೋಥೆರೆಪಿ ಮಾಡಿದ್ದಾರೆ. ಇದರಿಂದ ದರ್ಶನ್ ಕೊಂಚ ರಿಲೀಫ್ ಆಗಿದ್ದಾರೆ. ದರ್ಶನ್​ ಬೆನ್ನಿನ ಭಾಗದಲ್ಲಿ ಊತ ಕಾಣಿಸಿಕೊಂಡಿದೆ. ಈಗ ಅವರಿಗೆ ಚಿಕಿತ್ಸೆ ಸಿಗುತ್ತಿರುವ ವಿಚಾರ ಫ್ಯಾನ್ಸ್ ಖುಷಿಗೆ ಕಾರಣ ಆಗಿದೆ.

ಇನ್ನು ಮೂರೇ ದಿನಕ್ಕೆ 'ಡಾರ್ಲಿಂಗ್ ಪ್ರಭಾಸ್' ನೋಡಲು ಮುಗಿಬೀಳ್ತಾರೆ ಫ್ಯಾನ್ಸ್!

ನ್ಯೂರೋ ಹಾಗೂ ಆರ್ಥೋ ಪಿಡಿಷನ್ ವೈದ್ಯರು ದರ್ಶನ್ ಅವರ ದೇಹವನ್ನು ಸ್ಕ್ಯಾನಿಂಗ್ ಮಾಡಿದ್ದರು. ಸರ್ಜರಿ ಹಾಗೂ ಫಿಜಿಯೋಯೊಥೆರಪಿ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಸದ್ಯ ನಟ ದರ್ಶನ್ ಅವರಿಗೆ ಫಿಜಿಯೋಥೆರಪಿ ಟ್ರೀಟ್‌ಮೆಂಟ್ ಶುರು ಮಾಡಲಾಗಿದ್ದು, ಸರ್ಜರಿಯನ್ನು ಬೆಂಗಳೂರಿಗೆ ಬಂದು ಮಾಡಿಸಿಕೊಳ್ಳುವುದಾಗಿ ದರ್ಶನ್ ಹೇಳಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ಅವರಿಗೆ ಈಗ ಕಾನೂನಿನ ಪ್ರಕಾರವೇ ಚಿಕಿತ್ಸೆ ಸಿಗುತ್ತಿರುವುದು ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರ ಖುಷಿಗೆ ಕಾರಣವಾಗಿದೆ. 

ನಟ ದರ್ಶನ್ ಜೊತೆಗೆ ಜೈಲು ಸೇರಿದ್ದ ನಾಲ್ಕು ಮಂದಿಗೆ ಈಗಾಗಲೇ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಆದರೆ, ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನುಳಿದರಿಗೆ ಸದ್ಯಕ್ಕೆ ಜಾಮೀನು ಸಿಗುತ್ತಿಲ್ಲ. ಒಂದು ಕೊಲೆಯ ಆರೋಪಿಗಳಾಗಿ ಜೈಲು ಸೇರಿರುವ ಅವರೆಲ್ಲರೂ ಆದ್ಯಾವಾಗ ಹೊರಗೆ ಬರುತ್ತಾರೋ ಗೊತ್ತಾಗುತ್ತಿಲ್ಲ. ಆದರೆ, ನಟ ದರ್ಶನ್ ಆಪ್ತರು ಹಾಗೂ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದರೆ, ಕಾಯುತ್ತಿರುವವರ ಪಾಲಿಗೆ ಇನ್ನೂ ಒಳ್ಳೇ ಸಮಯ ಬಂದಿಲ್ಲ!

ರೇಣುಕಾಸ್ವಾಮಿ ಕೊಲೆಯಾದಾಗ ಗರ್ಭಿಣಿಯಾಗಿದ್ದ ಪತ್ನಿ ಸಹನಾ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಭೂಮಿಗೆ ಬಂದಿರುವ ಆತನ ಕಂದ ಅಪ್ಪನನ್ನು ಫೋಟೋದಲ್ಲಿ ಮಾತ್ರ ನೋಡಲು ಸಾಧ್ಯ. ಕೊಲೆಗೆ ಕಾರಣವೇನೇ ಇರಲಿ, ಕಾರಣರಾದವರು ಯಾರೇ ಆಗಿರಲಿ, ಆದರೆ, ಹುಟ್ಟುವಾಗಲೇ ತಂದೆಯನ್ನು ಕಳೆದುಕೊಂಡ ತಬ್ಬಲಿಯಾಗಿ ರೇಣುಕಾಸ್ವಾಮಿ ಮಗ ಹುಟ್ಟಿರುವುದಂತೂ ಸತ್ಯ. ಒಟ್ಟಾರೆಯಾಗಿ ಈಗ ಆ ಕೊಲೆಯಲ್ಲಿ ಆರೋಪಿಗಳಾಗಿರುವ ದರ್ಶನ್ & ಟೀಮ್ ಜೈಲು ಸೇರಿದ್ದಾರೆ.

ರಶ್ಮಿಕಾ-ಸುದೀಪ್ ಹುಶಾರ್, ಸೋಷಿಯಲ್ ಮೀಡಿಯಾದಲ್ಲಿ ಜೋರಾಯ್ತು ಫ್ಯಾನ್ಸ್ ಕೂಗು!

ನಟ ದರ್ಶನ್, ಪವಿತ್ರಾ ಗೌಡ ಹಾಗೂ ಉಳಿದ ಆರೋಪಿಗಳಿಗೆ ಯಾವತ್ತೂ ಬೇಲು ಸಿಗುತ್ತೋ ಏನೋ! ಈಗಾಗಲೇ ಬೇಲು ಪಡೆದಿರುವವರೂ ಕೂಡ ಕರೆದಾಗ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಜೈಲಿನಿಂದ ಹೊರಗೆ ಬಂದಿರುವ ಅವರಿಗೂ ಸಂಪೂರ್ಣ ಸ್ವಾತಂತ್ರ್ಯವಿಲ್ಲ, ಕರೆದಾಗ ಹೋಗಬೇಕಾದ ತಲೆನೋವಂತೂ ಇದ್ದೆ ಇದೆ. ಈ ಕೇಸ್‌ ಅದೆಲ್ಲಿಗೂ ಹೋಗಿ ತಲುಪುತ್ತೋ ಏನೋ! ಅವರಲ್ಲಿ ಯಾರು ಅಪರಾಧಿಗಳು, ಯಾರು ನಿರಪರಾಧಿಗಳು ಎಂದು ಸಾಬೀತು ಆಗುತ್ತೋ, ಅದ್ಯಾವಾಗ ಆಗುತ್ತೋ, ಯಾವುದಕ್ಕೂ ಸದ್ಯ ಉತ್ತರವಿಲ್ಲ. 

Latest Videos
Follow Us:
Download App:
  • android
  • ios