ಚಿತ್ರ ನಟ ಗಣೇಶ್‌ಗೆ ಬಿಗ್ ಶಾಕ್! ಸರಕಾರ ಕೊಟ್ಟ ಜಮೀನು ವಾಪಸ್
ಚಿತ್ರ ನಟ ಗಣೇಶ್ ಗೆ ಅರಣ್ಯ ಇಲಾಖೆಯ ಮಾಹಿತಿ ಇಲ್ಲದೇ ಜಮೀನು ನೀಡಿದ್ರು. ಅದನ್ನ ವಾಪಸು ಪಡೆಯಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಚಿತ್ರ ನಟ ಗಣೇಶ್ ಗೆ ಅರಣ್ಯ ಇಲಾಖೆಯ ಮಾಹಿತಿ ಇಲ್ಲದೇ ಜಮೀನು ನೀಡಿದ್ರು. ಅದನ್ನ ವಾಪಸು ಪಡೆಯುವ ಕೆಲಸ ಆಗಿದೆ. ಪ್ರಕರಣ ಈಗ ಕೋರ್ಟ್ ನಲ್ಲಿ ಇದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ಬರುವ ಕುಂದುಕರೆ ವ್ಯಾಪ್ತಿಯ ಜಕ್ಕಳಿ ಗ್ರಾಮದಲ್ಲಿ ತಮಗೆ ಸೇರಿದ 1.24 ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ನಟ ಗಣೇಶ್‌ಗೆ ಹೈಕೋರ್ಟ್ ಅನುಮತಿ ನೀಡಿತ್ತು.
ಬಂಡೀಪುರದಲ್ಲಿ ಮನೆ ಕಟ್ಟಲು ನಟ ಗಣೇಶ್‌ಗೆ ಹೈಕೋರ್ಟ್ ಒಪ್ಪಿಗೆ!
ಪ್ರಕರಣ ಸಂಬಂಧ ನಟ ಗಣೇಶ್ ಅವರು ಸಲ್ಲಿಸಿದ್ದ ಮೆಮೊ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ, ಅರ್ಜಿದಾರರು ಕಟ್ಟಡ ನಿರ್ಮಾಣ ಮಾಡಬಹುದು. ಆದರೆ, ಅದು ಪ್ರಕರಣ ಸಂಬಂಧ ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆದೇಶಿಸಿತ್ತು.
ವಿಚಾರಣೆ ವೇಳೆ ಗಣೇಶ್ ಪರ ವಕೀಲ ಶ್ರೀಧರ್ ಪ್ರಭು, 2023ರಲ್ಲಿ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಚ್ ನೀಡಿರುವ ಆದೇಶದಂತೆ ಅರ್ಜಿದಾರರು ವಿವಾದಿತ ಜಾಗದಲ್ಲಿ ಕಟ್ಟಡ ನಿರ್ಮಿಸಲು ಯಾವುದೇ ನಿರ್ಬಂಧವಿಲ್ಲ. ಕಟ್ಟಡ ನಿರ್ಮಾಣ ನಿಯಂತ್ರಣ ಅಥವಾ ನಿಷೇಧಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಯಾವುದೇ ಅಧಿಕಾರವಿಲ್ಲ. ಬೇರೆಯವರಿಗೆ ಮನೆ ನಿರ್ಮಾಣ ಮಾಡಲು ಅರಣ್ಯ ಇಲಾಖೆ ನೀಡಿದೆ. ಆದರೆ, ಅರ್ಜಿದಾರರಿಗೆ ಮಾತ್ರ ನಿರ್ಬಂಧಿಸಿದೆ. ಒಂದೊಮ್ಮೆ ಅರ್ಜಿದಾರರ ತಪ್ಪು ಕಂಡು ಬಂದರೆ ಕಟ್ಟಡ ತೆರವು ಮಾಡಲಾಗುವುದು ಎಂದು ಭರವಸೆ ನೀಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಗಣೇಶ್‌ಗೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿತು. ಜತೆಗೆ, ಪ್ರಕರಣ ಸಂಬಂಧ ಹಿಂದಿನ ಸೂಚನೆಯಂತೆ ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಗೆ ನೀಡಬೇಕಾದ ಮನವಿಯನ್ನು ಅಡ್ವೊಕೇಟ್ ಜನರಲ್ ಅವರ ಮೂಲಕ ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿತ್ತು.
20 ವಿಶ್ವವಿದ್ಯಾನಿಲಯ ಪದವಿ, ದೇಶದ ಅತ್ಯಂತ ವಿದ್ಯಾವಂತ, ರಾಜಕಾರಣಿ 49 ನೇ ವಯಸ್ಸಿನಲ್ಲಿ
ಇದೀಗ ಮುಂದಿನ ವಿಚಾರಣೆಗೆ ಮುನ್ನವೇ ಅರಣ್ಯ ಇಲಾಖೆಯ ಮಾಹಿತಿ ಇಲ್ಲದೇ ಜಮೀನು ನೀಡಿದ ಹಿನ್ನೆಲೆ ಜಾಗವನ್ನು ಸರಕಾರ ವಾಪಸ್ ಪಡೆಯಲು ತೀರ್ಮಾನಿಸಿದೆ. ಕಟ್ಟಡ ಕಟ್ಟಲು ಅನುಮತಿ ಇದ್ದರೂ ಜಾಗ ವಾಪಸ್ ಕೊಡಬೇಕಾಗಿದ್ದು, ನಟ ಗಣೇಶ್ ಅವರ ಮುಂದಿನ ನಡೆಯೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ವನ್ಯ ಪ್ರಾಣಿಗಳಿಂದ ಈ ವರ್ಷ 28 ಜನ ಮೃತ ಪಟ್ಟಿದ್ದಾರೆ. 640 ಕಿ.ಮೀ ರೈಲ್ವೆ ಬ್ಯಾರಿಕೇಡ್ ಹಾಕಬೇಕಿದೆ . ಜನವಸತಿ ಪ್ರದೇಶಕ್ಕೆ ಆನೆ ಬರದಂತೆ ತಡೆಯಲು ಬ್ಯಾರಿಕೇಡ್ ಹಾಕುವ ಅವಕಾಶ ಇದೆ. ಇಂದು ಸಿಎಂ ಜತೆ ಚರ್ಚೆ ಮಾಡಿ ಹೆಚ್ಚುವರಿ 300 ಕೀಮೀ ರೈಲ್ವೆ ಬ್ಯಾರಿಕೇಡ್ ಹಾಕಲು ಸಿಎಂ ಗೆ ಮನವಿ ಮಾಡಲಿದ್ದೇನೆ. 1000 ಕಿ.ಮೀ ಸೋಲಾರ್ ತಂತಿ ಅಳವಡಿಸಲಾಗಿದೆ. 7 ಎಲಿಫೆಂಟ್ ಟಾಸ್ಕ್ ಫೋರ್ಸ್ ಗಳನ್ನ ಮಾಡಿದ್ದೇವೆ. 38 ಜನ ನುರಿತವರು ಇರ್ತಾರೆ. ಹೊರ ಗುತ್ತಿಗೆಯ ಇಬ್ಬರು ನೌಕರರು ಮೃತ ಪಟ್ಟಿದ್ದಾರೆ. ಮುಂದೆ ಸಮಸ್ಯೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ . ಅರಣ್ಯ ಸಮೀಪ ಇರುವ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡ್ತೀವಿ. ವನ್ಯ ಜೀವಿಗಳ ದಾಳಿಯಿಂದ ಮೃತಪಟ್ಟವರಿಗೆ ಪರಿಹಾರ ನೀಡಿದ್ದೇವೆ. ಗಣಿಗಾರಿಕೆಯಿಂದಲೂ ವನ್ಯ ಜೀವಿಗಳು ಕಾಡಿಗೆ ಬರ್ತಿವೆ. ಕಾಡಂಚಿನಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲ. ನಮ್ಮ ಬಳಿ ವಿಜಿಲೆನ್ಸ್ ಸಹ ಇದೆ.