ದರ್ಶನ್‌ಗೆ ಇದೆಲ್ಲಾ ಬೇಕಿತ್ತಾ? ಪ್ರಪಂಚದಲ್ಲಿ ಮಾಡೋಕೆ ಸಾಕಷ್ಟು ಕೆಲಸಗಳು ಇದೆ: 'ಕರಿಯಾ' ನಟಿ ಟಾಂಗ್

ಕಂಬಿ ಹಿಂದೆ ಇರುವ ದರ್ಶನ್ ಮಾಡಿದ್ದು ಎಷ್ಟು ಸರಿ? ಮೊದಲ ಚಿತ್ರದಲ್ಲಿ ಒಟ್ಟಿಗೆ ನಟಿಸಿದ ಅಭಿನಯಶ್ರೀ ಮಾತುಗಳು ವೈರಲ್....

Kariya film actress Abhinayashree talks about Darshan Renukaswamy murder case vcs

ಆ ಕಡೆ ಬೇಲ್​​ಗಾಗಿ ದರ್ಶನ್ ಒದ್ದಾಟ. ಇನ್ನೇನು ಬೇಲ್ ಸಿಕ್ಕೇ ಬಿಡ್ತು ಅಂತ ಕಂಬಿ ನಿಂತು ದಿನ ಎಣಿಸುತ್ತಿರೋ ದಾಸ. ಆದರೆ ಈ ದಾಸನ ಬಗ್ಗೆ ಯಾರೇ ಮಾತಾಡಿದರೂ  ಒಂದು ಹೆಣ್ಣಿನ ಸಹವಾಸ ದರ್ಶನ್​ ಸಿನಿ ಜೀವನಕ್ಕೆ ಕಪ್ಪು ಚುಕ್ಕೆ ಆಯ್ತು ಅಂತಾನೇ ಹೇಳ್ತಾರೆ. ಈಗ ದರ್ಶನ್​​ಗೆ ಲೈಫ್​​ ಕೊಟ್ಟ ಕರಿಯಾ ಸಿನಿಮಾದ ನಟಿ ಅಭಿನಯಶ್ರೀ ಮೌನ ಮುರಿದಿದ್ದಾರೆ. ವಿಜಯಲಕ್ಷ್ಮಿ ಪ್ರೀತಿ, ಪವಿತ್ರಾ ಗೌಡ ಜೊತೆಗಿನ ಸಂಬಂಧ ದರ್ಶನ್​​ನ ಎಲ್ಲಿಗೆ ತಂದು ನಿಲ್ಲಿಸಿದೆ ನೋಡಿ ಎಂದಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ನಟ ದರ್ಶನ್ ಜೈಲು ಸೇರಿದ್ದಾಗಿದೆ. ಈಗ ಜಾಮೀನು ಕೋರಿ ಅರ್ಜಿ ಸಲ್ಲಿಸಿರೋ ದರ್ಶನ್​​ಗೆ ಸವಾಲುಗಳು ಎದುರಾಗ್ತಾನೆ ಇದೆ. ಇವತ್ತಿಗೂ ದರ್ಶನ್ ಮಾಡಿದ್ದು ಸರೀನಾ..? ತಪ್ಪಾ..? ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಕೆಲ ಅಂದಾಭಿಮಾನಿಗಳು ಈ ಕ್ಷಣಕ್ಕೂ ನಮ್ಮ ಬಾಸ್ ಮಾಡಿದ್ದು ಸರಿ ಅಂತಾರೆ. ಈ ಬಗ್ಗೆ ಕೆಲ ಸ್ಟಾರ್ಸ್​​​ಗಳು ಪ್ರತಿಕ್ರಿಯೆ ಕೊಟ್ಟಿದ್ದು, ಇದೀಗ ದರ್ಶನ್ ಸಿನಿಮಾದ ನಟಿ ಅಭಿನಯಶ್ರೀ ದರ್ಶನ್​​ ಕೆಲಸದ ಬಗ್ಗೆ ಮೌನ ಮುರಿದಿದ್ದಾರೆ. 

ತಿನ್ಬೇಕಾದ್ರೂ ನೆಟ್ಟಗೆ ಕೂರಮ್ಮ; ಜೈ ಜಗದೀಶ್ ಪುತ್ರಿ ಮತ್ತೆ ಟ್ರೋಲ್!

ಕರಿಯ ಸಿನಿಮಾ:

ಚಾಲೆಂಜಿಂಗ್ ಸ್ಟಾರ್ ದರ್ಶನ್​​ಗೆ ಕರಿಯರ್​ ಕೊಟ್ಟ ಸಿನಿಮಾ. ಜೋಗಿ ಪ್ರೇಮ್‌ಗೂ ಲೈಪ್​ ಕೊಟ್ಟ ಸಿನಿಮಾ. ಅಷ್ಟೆ ಅಲ್ಲ ಕನ್ನಡಕ್ಕೆ ತಮಿಳು ನಟಿ ಅಭಿನಯಶ್ರೀಯನ್ನು ಪರಿಚಯಿಸಿದ ಸಿನಿಮಾ ಕೂಡ ಇದು. ಕರಿಯಾ ಸಿನಿಮಾದಲ್ಲಿ ದರ್ಶನ್​ ಹಾಗು ಅಭಿನಯಶ್ರೀ ಕಾಂಬಿನೇಷನ್​ ಇಂದಿಗೂ ಟ್ರೆಂಡ್​​. ಈ ಜೋಡಿಯಾ ಕರಿಯಾ ಹಾಡುಗಳು ಇಂದಿಗೂ ಎವರ್​​ಗ್ರೀನ್. ಕೊಲೆ ಪ್ರಕರಣದಲ್ಲಿ ದರ್ಶನ್ ಸಿಕ್ಕಿಬೀಳುತ್ತಿದ್ದಂತೆ ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಸುದ್ದಿ ಆಗಿದೆ. ಈಗ ದರ್ಶನ್ ಜೊತೆ ಕರಿಯಾ ಸಿನಿಮಾ ಮಾಡಿದ್ದ ತಮಿಳು ನಟಿ ಅಭಿನಯಶ್ರೀ ಕೂಡ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿರೋ ಅಭಿನಯಶ್ರೀ ದರ್ಶನ್‌ಗೆ ಇದೆಲ್ಲಾ ಬೇಕಿರಲಿಲ್ಲ ಎಂದಿದ್ದಾರೆ.

ಚಿತ್ರರಂಗಕ್ಕೆ ಗುಡ್‌ ಬೈ ಹೇಳುತ್ತೇನೆ, ಇದು ನನ್ನ ಕೊನೆ ಸಿನಿಮಾ: ಕಣ್ಣೀರಿಟ್ಟ ರಾಧಿಕಾ ಕುಮಾರಸ್ವಾಮಿ

ಅಭಿನಯಶ್ರೀ ಮಾತು:

ದರ್ಶನ್ ಬಂಧನ ವಿಚಾರ ನನಗೂ ಗೊತ್ತಾಯಿತು. ಇದೆಲ್ಲಾ ಆತನಿಗೆ ಬೇಡವಾಗಿತ್ತು. ಕರಿಯ ಚಿತ್ರ ಮಾಡುವಾಗ ಆತನಿಗೆ ಇನ್ನು ಮದುವೆ ಆಗಿರಲಿಲ್ಲ. ವಿಜಯಲಕ್ಷ್ಮಿ ಆತನ ಮಾವನ ಮಗಳು ಅನಿಸುತ್ತದೆ. ಆಕೆ ಸೋದರಿ ಸಂಬಂಧಿಯೇ. ಆಕೆ ಜೊತೆಗೆ ದರ್ಶನ್ ಚೆನ್ನಾಗಿಯೇ ಇದ್ದರು. ಬಳಿಕ ಎಲ್ಲಿ ಏನು ಆಕರ್ಷಣೆ ಬರುತ್ತೆ ಏನು ಎಂದು ಹೇಳಲು ಸಾಧ್ಯವಿಲ್ಲ. ಕರಿಯ ಸಿನಿಮಾ ಬಳಿಕ ನಾನು ದರ್ಶನ್ ಅವರನ್ನು ನೋಡಿಲ್ಲ, ಒಬ್ಬ ಹುಡುಗಿಗಾಗಿ ಸಮಸ್ಯೆ ಮಾಡಿಕೊಳ್ಳೋದು ಬೇಕಿತ್ತಾ..? ರೇಣುಕಾಸ್ವಾಮಿಯಿಂದ ಕೆಟ್ಟ ಮೆಸೇಜ್ ಬಂದಿರಬಹುದು. ಆಗ ಪೊಲೀಸರಿಗೆ ದೂರು ನೀಡಿದ್ದರೆ ಬಗೆಹರಿಯುತ್ತಿತ್ತು. ಅದು ಬಿಟ್ಟು ತನ್ನ ಸಹಚರರನ್ನು ಬಿಟ್ಟು ಅಪಹರಣ ಮಾಡಿಸಿ, ಥಳಿಸಿ ಪಾಪ ರೇಣುಕಾಸ್ವಾಮಿ ಸತ್ತೇಹೋದ. ಅದರಿಂದ ದರ್ಶನ್ ಹೆಸರು ಹಾಳಾಯ್ತು ಪ್ರಪಂಚದಲ್ಲಿ ಮಾಡಲು ಸಾಕಷ್ಟು ಒಳ್ಳೆಯ ಕೆಲಸಗಳಿವೆ. ಅದೆಲ್ಲಾ ಬಿಟ್ಟು ಇದ್ದಕ್ಕಾಗಿ ಸುಮ್ಮನೆ ಸಮಯ ವ್ಯರ್ಥ ಮಾಡಲು ಹೋಗಿದ್ದಾರೆ. ಈಗ ಹತ್ಯೆ ನಡೆದು ಜೈಲಿನಲ್ಲಿ ಇದ್ದಾರೆ. ಸಂಪಾದಿಸಿದ್ದ ಒಳ್ಳೆ ಹೆಸರು ಹೋಯ್ತು. ತೆಲುಗು ಹೀರೊಗಳು ಈ ವಿಚಾರದಲ್ಲಿ ಸೂಪರ್. ಅವರು ಬಹಳ ಗತ್ತಿನಿಂದ ಎಲ್ಲಾ ವಿಚಾರಗಳನ್ನು ಹ್ಯಾಂಡಲ್ ಮಾಡ್ತಾರೆ. ಅನಾವಶ್ಯಕವಾಗಿ ತಪ್ಪು ಮಾಡಲ್ಲ' ಎಂದಿದ್ದಾರೆ. 

Latest Videos
Follow Us:
Download App:
  • android
  • ios