Asianet Suvarna News Asianet Suvarna News

ಉತ್ತರಾಖಂಡ ಸಿಎಂ ಭೇಟಿಯಾದ 'ಕಾಂತಾರ' ಸ್ಟಾರ್ ರಿಷಬ್ ಶೆಟ್ಟಿ; ಇಲ್ಲಿದೆ ಫೋಟೋ

ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 

Kantara star rishab shetty meets Uttarakhand CM  pushkardhami sgk
Author
First Published Dec 11, 2022, 5:38 PM IST


ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಕಾಂತಾರ ಸೂಪರ್ ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಕಾಂತಾರ ಯಶಸ್ವಿನ  ನಂತರ ಭಾರತೀಯ ಸಿನಿಮಾರಂಗದಲ್ಲಿ ರಿಷಬ್ ಶೆಟ್ಟಿ ಹವಾ ಜೋರಾಗಿದೆ. ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ರಿಷಬ್ ಶೆಟ್ಟಿ ಸದ್ಯ ಕಾಂತಾರ-2 ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಕಾಂತಾರ2 ಬಗ್ಗೆ ಎಲ್ಲಾ ರೀತಿಯ ಪ್ಲಾನ್ ಮಾಡಿದ್ದು ದೈವದ ಅನುಮತಿಯನ್ನು ಕೋರಿದ್ದಾರೆ. ಹೌದು ಇತ್ತೀಚಿಗಷ್ಟೆ ಕಾಂತಾರ-2 ಮಾಡುವ ಬಗ್ಗೆ ಪಂಜುರ್ಲಿ ಕಡೆಯಿಂದ ಅನುಮತಿ ಪಡೆದ ರಿಷಬ್ ಶೆಟ್ಟಿ ಪಾರ್ಟ್-2 ಕಡೆ ಗಮನ ಹರಿಸಿದ್ದರು. ಈ ನಡುವೆ ಶೆಟ್ರು ಉತ್ತರಾಖಂಡ ಮುಖ್ಯಮಂತ್ರಿಯನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಹೌದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರನ್ನು ಭೇಟಿಯಾಗಿರುವ ರಿಷಬ್ ಶೆಟ್ಟಿ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ.   

ರಿಷಬ್ ಶೆಟ್ಟಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆ ಮಾತನಾಡುತ್ತಿರುವ ಫೋಟೋವನ್ನು ಕೆಆರ್‌ಜಿ ಸ್ಟೋಡಿಯೋ ಹಂಚಿಕೊಂಡಿದೆ. ಸಿಎಂ ಪಕ್ಕದಲ್ಲಿ ಕುಳಿತು ರಿಷಬ್ ಶೆಟ್ಟಿ ಮಾತನಾಡುತ್ತಿದ್ದಾರೆ. ಅಂದಹಾಗೆ ಇಬ್ಬರೂ ಕಾಂತಾರ ಸಿನಿಮಾದ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಬಗ್ಗೆ ಕೆಆರ್‌ಜಿ ಸ್ಟುಡಿಯೋ ಬಹಿರಂಗ ಪಡಿಸಿದೆ. 'ಕಾಂತಾರ ಸಿನಿಮಾದ ಬಗ್ಗೆ ರಿಷಬ್ ಶೆಟ್ಟಿ ಮತ್ತು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಮತನಾಡಿದ್ದಾರೆ' ಎಂದು ಬಹಿರಂಗ ಪಡಿಸಿದೆ. ಜೊತೆಗೆ ಫೋಟೋಗಳನ್ನು ಶೇರ್ ಮಾಡಿದ್ದಾರೆ. ರಿಷಬ್ ಶೆಟ್ಟಿ  ಉತ್ತರಾಖಂಡ ಸಿಎಂ ಅವರನ್ನು ಭೇಟಿಯಾಗಿದ್ದೇಕೆ ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. 

ಅಂದಹಾಗೆ ಕಾಂತಾರ ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಲ್ಲೂ ಗೆದ್ದು ಬೀಗಿದೆ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ನಂತರ ಕಾಂತಾರ ಒಟಿಟಿಯಲ್ಲಿ ರಿಲೀಸ್ ಆಗಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲಾಯಳಂ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿದೆ. ಹಿಂದಿ ವರ್ಸನ್ ಕಾಂತಾರ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ.  ಒಟಿಟಿಯಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

'ಕಾಂತಾರ-2' ಮಾಡಲು ಪಂಜುರ್ಲಿ ಅನುಮತಿ ಕೋರಿದ ರಿಷಬ್ ಶೆಟ್ಟಿ; ದೈವ ಹೇಳಿದ್ದೇನು?

ಕಾಂತಾರ-2 ಮಾಡಲು ಪಂಜುರ್ಲಿ ಹೇಳಿದ್ದೇನು?

ಮೊದಲ ಭಾಗದ ದೊಡ್ಡ ಮಟ್ಟದ ಸಕ್ಸಸ್ ನಂತರ ರಿಷಬ್ ಶೆಟ್ಟಿ ಸದ್ಯ ಕಾಂತಾರ-2 ಕಡೆ ಗಮನ ಹರಿಸಿದ್ದಾರೆ. ಈಗಾಗಲೇ ಪಂಜುರ್ಲಿ ಅನುಮತಿ ಕೂಡ ಕೇಳಿದ್ದಾರೆ. 'ಕಾಂತಾರ' ಭಾಗ 2 ಸಿನಿಮಾ ಮಾಡಲು ದೈವ ಅನುಮತಿಯನ್ನು ನೀಡಿದೆ. ಆದರೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ ಎನ್ನಲಾಗಿದೆ. 'ಕಾಂತಾರ' ಚಿತ್ರತಂಡಕ್ಕೆ ಅಭಯ ನೀಡಿರುವ ಅಣ್ಣಪ್ಪ ಪಂಜುರ್ಲಿ 'ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ. ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ. ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ' ಎಂದು ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ ಎನ್ನಲಾಗಿದೆ. 

Kantara 2 ರಿಲೀಸ್ ಡೇಟ್ ಬಹಿರಂಗ; ರಿಷಬ್ ಶೆಟ್ಟಿ ಸಿನಿಮಾದ ಎಕ್ಸ್‌ಕ್ಲ್ಯೂಸಿವ್ ಮಾಹಿತಿ

2024ಕ್ಕೆ ಕಾಂತಾರ-2 ರಿಲೀಸ್ 

ಇನ್ನೂ ಮೂಲಗಳ ಪ್ರಕಾರ ಕಾಂತಾರ-2 ಮುಂದಿನ ವರ್ಷಾರಂಭದಲ್ಲಿ ಮುಹೂರ್ತ ನಡೆಯಲಿದೆ. 2023ರ ಕೊನೆಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ 2024 ಫೆಬ್ರವರಿಯಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ. ಈ ಬಗ್ಗೆ ರಿಷಬ್ ಶೆಟ್ಟಿ ತಂಡದ ಕಡೆಯಿಂದ ಅಧಿಕೃತ ಮಾಹಿತಿ ಘೋಷಣೆಯಾಗಬೇಕಿದೆ. ಸದ್ಯ ಅಭಿಮಾನಿಗಳು ಕಾಂತಾರ-2ಗಾಗ ಕಾತರದಿಂದ ಕಾಯುತ್ತಿದ್ದಾರೆ. 

Follow Us:
Download App:
  • android
  • ios