Asianet Suvarna News Asianet Suvarna News

Rishab shetty ಸಂಕ್ರಾಂತಿ ಹಬ್ಬ ಆಚರಿಸಿದ ಶಿವ; ಮಗಳೇ ನೆಕ್ಸ್ಟ್‌ ಹೀರೋಯಿನ್ ಎಂದ ನೆಟ್ಟಿಗರು

ಅದ್ಧೂರಿಯಾಗಿ ಮಕರ ಸಂಕ್ರಾಂತಿ ಹಬ್ಬ ಆಚರಿಸಿದ ರಿಷಬ್ ಶೆಟ್ಟಿ. ಮಗಳು ಕೂಡ ಸಿನಿಮಾ ಮಾಡಲಿ ಎಂದು ವಿಶ್ ಮಾಡಿದ ಫ್ಯಾನ್ಸ್‌....

Kantara Rishab shetty celebrates Makar Sankranti with family vcs
Author
First Published Jan 16, 2023, 3:32 PM IST

ಸ್ಯಾಂಡಲ್‌ವುಡ್‌ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ವರ್ಷದ ಪ್ರತಿಯೊಂದು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಮಕರ ಸಂಕ್ರಾಂತಿ ಹಬ್ಬವನ್ನು ಈ ವರ್ಷ ಫ್ಯಾಮಿಲಿ ಜೊತೆ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ರಣ್ವಿತ್ ಮತ್ತು ರಾಧ್ಯಾ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. 

ರಿಷಬ್ ಪೋಸ್ಟ್‌:

'ಎಳ್ಳು-ಬೆಲ್ಲ ಬೀರುತ..ಸರ್ವರಿಗೂ ಖುಷಿಯ ಹಂಚೋಣ..ಎಲ್ಲರಿಗೂ ಮಕರ ಸಂಕ್ರಾತಿ ಹಬ್ಬದ ಹಾರ್ದಿಕ ಶುಭಾಶಯಗಳು.' ಎಂದು ಬರೆದುಕೊಂಡಿದ್ದಾರೆ. ವೈಟ್ ಬಣ್ಣದ ಟೀ-ಸರ್ಶ್‌ನಲ್ಲಿ ರಿಷಬ್, ನೀಲಿ ಬಣ್ಣದ ಡ್ರೆಸ್‌ನಲ್ಲಿ ಪ್ರಗತಿ, ವೈಟ್ ಆಂಡ್ ಬ್ಲ್ಯಾಕ್ ಶೆರ್ವಾನಿಯಲ್ಲಿ ರಣ್ವಿತ್ ಮತ್ತು ಪಿಂಕ್ ಫ್ರಾಕ್‌ನಲ್ಲಿ ರಾಧ್ಯಾ ಮಿಂಚುತ್ತಿದ್ದಾರೆ. 

2022ರ ವಿಜಯದಶಮಿ ದಿನ ಮಗಳ ಹೆಸರು ಮತ್ತು ಫೋಟೋ ರಿವೀಲ್ ಮಾಡಿದ್ದರು. ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಮಾರ್ಚ್ 4ರಂದು ಹೆಣ್ಣು ಮಗುವನ್ನು ಬರ ಮಾಡಿಕೊಂಡರು. 'ಎಲ್ಲರಿಗೂ ನವರಾತ್ರಿಯ ಶುಭಾಶಯಗಳು. ನಾಡಹಬ್ಬಕ್ಕೆ ಕಾಂತಾರದ ಯಶಸ್ಸು, ನಾಡಿನ ಜನರ ಪ್ರೀತಿ ಮತ್ತಷ್ಟು ಸಂಭ್ರಮವನ್ನು ತಂದಿವೆ. ಇದಕ್ಕೆ ಕಲಶಪ್ರಾಯವಾಗಿ, ಮಗಳು ರಾಧ್ಯಾಳ ಮುಗ್ಧ ನಗುವೂ ಜೊತೆಯಾಗಿದೆ.. ನಿಮ್ಮೆಲ್ಲರ ಹಾರೈಕೆಗಳಿರಲಿ' ಎಂದು ಬರೆದುಕೊಂಡಿದ್ದಾರೆ. 

ಮುದ್ದು ಮಕ್ಕಳ ಜೊತೆ ಪ್ರಗತಿ ಶೆಟ್ಟಿ; 'ಕಾಂತಾರ' ಹೀರೋನ ಸುಂದರ ಕುಟುಂಬ ಹೇಗಿದೆ ನೋಡಿ

ಮಗಳಿಗೆ ರಾಧ್ಯಾ ಎಂದು ಹೆಸರಿಟ್ಟಿದ್ದಾರೆ. Meaning of Radhya is worshipped. ಚಂದ್ರನ ಚಿಹ್ನೆ ಆಧಾರಿತ ವೈದಿಕ ಜ್ಯೋತಿಷ್ಯದಲ್ಲಿ ರಾಧುವಾ ಎಂಬ ಹೆಸರಿನ ವ್ಯಕ್ತಿಯು ಎಲ್ಲವನ್ನೂ ಸುಲಭವಾಗಿ ತೆಗೆದುಕೊಳ್ಳುವ ಅಂತರ್ಗತ ಗುಣವನ್ನು ಹೊಂದಿರುತ್ತಾನೆ.ಈ ಜನರು ಸುಲಭವಾಗಿ ಪ್ರೀತಿಸುತ್ತಾರೆ ಮತ್ತು ಇತರ ಜನರಿಂದ ಆದ್ಯತೆ ಪಡೆಯುತ್ತಾರೆ. ಈ ನಿರ್ದಿಷ್ಟ ಜನರು ತಮ್ಮ ಗುರಿಯಿಂದ ದೂರ ಸರಿಯಲು ಇಷ್ಟಪಡುವುದಿಲ್ಲ.

ಪುತ್ರ ಕೂಡ ಸ್ಟಾರ್:
 
ಏಪ್ರಿಲ್ 7, 2019ರಲ್ಲಿ ರಿಷಬ್ ಮತ್ತು ಪ್ರಗತಿ ಪುತ್ರ ರಣ್ವಿತ್ ಶೆಟ್ಟಿನ ಬರ ಮಾಡಿಕೊಂಡರು. ಮಕ್ಕಳ ದಿನಾಚರಣೆಯಂದು ಮಗನ ಹೆಸರು ಮತ್ತು ಫೋಟೋ ರಿವೀಲ್ ಮಾಡಿದ್ದರು. ಪ್ರತಿ ವರ್ಷವೂ ರಣ್ವಿತ್ ಹುಟ್ಟುಹಬ್ಬವನ್ನು ಡಿಫರೆಂಟ್ ಆಗಿ ಆಚರಿಸಲಾಗುತ್ತದೆ. ರಣ್ವಿತ್ ಮೊದಲ ಹುಟ್ಟುಹಬ್ಬದ ದಿನ ವಿಶ್ವ ಪರಿಸರ ದಿನವಿತ್ತು ಹೀಗಾಗಿ ರಿಷಬ್ ತಮ್ಮ ಹುಟ್ಟೂರಿನಲ್ಲಿ ಪರಿಸರ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಬರ್ತಡೇ ಥೀಮ್ ಸಖತ್ ವೈರಲ್ ಅಗಿತ್ತು.

Kantara ಹೆಂಡ್ತಿ ಕಾಲೆಳೆಯುತ್ತಾಳೆ ಆದ್ರೂ ರೊಮ್ಯಾಂಟಿಕ್‌ ಸೀನ್‌ ಮಾಡೋಕೆ ಕಷ್ಟ ಆಗುತ್ತೆ: ರಿಷಬ್ ಶೆಟ್ಟಿ

ರಣ್ವಿತ್ ಎರಡನೇ ಹುಟ್ಟುಹಬ್ಬವನ್ನು ಇನ್ನಷ್ಟು ಜೋರಾಗಿ ಆಚರಿಸಿದ್ದರು. 'ನಮ್ಮನ್ನು ನಿಮ್ಮ ಪೋಷಕರಾಗಿ ಆಯ್ಕೆ ಮಾಡಿರುವುದಕ್ಕೆ ನಾವು ಗ್ರೇಟ್. ನೀನು ಕೊಟ್ಟಿರುವ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಅಗುವುದಿಲ್ಲ. ನೀನು ಬರುವ ಮುಂಚೆ ನನ್ನ ಜೀವನ ಹೇಗಿತ್ತು ಈಗ ಹೇಗಿದೆ ಎಂದು ಕಲ್ಪನೆ ಮಾಡಿಕೊಳ್ಳಲು ಆಗುತ್ತಿಲ್ಲ' ಎಂದು ಪ್ರಗತಿ ಬರೆದುಕೊಂಡಿದ್ದರು. 

 

Follow Us:
Download App:
  • android
  • ios