Asianet Suvarna News Asianet Suvarna News

Kantara; ಓಟಿಟಿಯಲ್ಲಿ ಬದಲಾಯ್ತು 'ವರಾಹ ರೂಪಂ..' ಹಾಡು; ಹೊಸ ವರ್ಷನ್ ಹೇಗಿದೆ ನೋಡಿ

ಒಟಿಟಿಯಲ್ಲಿ ರಿಲೀಸ್ ಆದ ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ಬದಲಾಯಿಸಲಾಗಿದೆ. ಹೊಸ ವರ್ಷನ್ ಸಾಂಗ್ ಹೇಗಿದೆ  ನೋಡಿ.

Kantara released in OTT with Varaha Roopam new song sgk
Author
First Published Nov 24, 2022, 1:14 PM IST

ಕಾಂತಾರ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಿದ್ದಂತೆ ವಿವಾದಗಳು ಅಂಟಿ ಕೊಂಡಿತ್ತು. ಕಾಂತಾರ ಸಿನಿಮಾದ ವರಾಹ ರೂಪಮ್ ಹಾಡಿನ ವಿವಾದ ಇನ್ನೂ ಬಗೆಹರಿದಿಲ್ಲ. ಕಾಂತಾರ ತಂಡ ವರಾಹ ರೂಪಮ್ ಹಾಡನ್ನು ಕದಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದೆ. ಕೇರಳ ಮೂಲದ ತೈಕ್ಕುಡಂ ಬ್ರಿಡ್ಜ್ ಎಂಬ ಬ್ಯಾಂಡ್ ಕಾಂತಾರ ನಿರ್ಮಾಪಕರ ವಿರುದ್ಧ 'ನವರಸಂ' ಹಾಡನ್ನು ಕದ್ದಿದ್ದಾರೆ ಎಂದು ಕೃತಿಚೌರ್ಯದ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದರು. ಕೇರಳದ ಸ್ಥಳಿಯ ಕೋರ್ಟ್ ಈ ಹಾಡನ್ನು ಪ್ರಸಾರ ಮಾಡದಂತೆ ಆದೇಶ ಹೊರಡಿಸಿತ್ತು. 

ಕೇರಳ ಕೋರ್ಟ್ ಆದೇಶದ ಮೇರೆಗೆ ವರಾಹ ರೂಪಮ್ ಹಾಡನ್ನು ಎಲ್ಲಾ ಮ್ಯೂಸಿಕ್ ಆಪ್ ಮತ್ತು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿತ್ತು. ವರಾಹ ರೂಪಂ.. ಹಾಡಿಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡನ್ನು ಹೊಂಬಾಳೆ ಫಿಲ್ಮ್ಸ್​ ಯೂಟ್ಯೂಬ್ ಚಾನೆಲ್​ಗಳಲ್ಲಿ ರಿಲೀಸ್ ಮಾಡಲಾಗಿತ್ತು. ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್​ನಿಂದನೂ ಈ ಹಾಡನ್ನು ಡಿಲೀಟ್ ಮಾಡಲಾಗಿದೆ.

ಇದೀಗ ಕಾಂತಾರ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಒಟಿಟಿಯಲ್ಲಿ ವರಾಹ ರೂಪಮ್ ಹಾಡಿನ ಹೊಸ ವರ್ಷನ್ ಬಿಡುಗಡೆ ಮಾಡಲಾಗಿದೆ. ಕಾಂತಾರ ಸಿನಿಮಾದ  ಕ್ಲೈಮ್ಯಾಕ್ಸ್ ನಲ್ಲಿ ವರಾಹ ರೂಪಮ್ ಹಾಡು ಪ್ರಸಾರವಾಗಲಿದೆ. ಕ್ಲೈಮ್ಯಾಕ್ಸ್ ದೃಶ್ಯ ಹಾಗೂ ಹಾಡು ಅದ್ಭುತವಾಗಿ ಮೂಡಿಬಂದಿತ್ತು. ಇದೀಗ ಒಟಿಟಿಗಾಗಿ ವರಾಹ ರೂಪಮ್ ಹಾಡಿನಲ್ಲಿ ಬದಲಾವಣೆ ಮಾಡಿ ಬಿಡುಗಡೆ ಮಾಡಲಾಗಿದೆ. ಸದ್ಯ ಹೊಸ ವರ್ಷನ್ ಹಾಡು ವೈರಲ್ ಆಗುತ್ತಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇಷ್ಟಪಟ್ಟರೆ ಇನ್ನು ಕೆಲವರಿಗೆ ಹೊಸ ವರ್ಷನ್ ಹಾಡು ಇಷ್ಟವಾಗಿಲ್ಲ. 

Kantara ಸಕ್ಸಸ್‌ ಸಂಭ್ರಮದಲ್ಲಿ ಮಲಯಾಳಂ ಸ್ಟಾರ್ ಫಹಾದ್; ಇಲ್ಲಿವೆ ಸುಂದರ ಫೋಟೋಗಳು

ಅಂದಹಾಗೆ ಕಾಂತಾರ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ನವೆಂಬರ್ 24ರಿಂದ ಒಟಿಟಿಯಲ್ಲಿ ರಿಷಬ್ ಶೆಟ್ಟಿ ಸಿನಿಮಾ ಲಭ್ಯವಿದೆ. ಚಿತ್ರಮಂದಿರಗಳಲ್ಲಿ ಹವಾ ಎಬ್ಬಿಸಿದ ಕಾಂತಾರ ಒಟಿಟಿಯಲ್ಲೂ ಅಬ್ಬರ ಶುರುಮಾಡಿಕೊಂಡಿದೆ.

'ಕಾಂತಾರ' ಹಾಡಿನ ವಿವಾದ; ಹೊಂಬಾಳೆಗೆ ಹಿನ್ನಡೆ, ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

ವರಾಹ ರೂಪಂ ಹಾಡಿನ ಬಳಕೆಗೆ ನೀಡಲಾಗಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಬೇಕೆಂದು ಕೋರಿ ಹೊಂಬಾಳೆ ಫಿಲ್ಮ್ಸ್‌ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾಗೊಳಿಸಿದೆ. ಕೇರಳದ ಸ್ಥಳಿಯ ಕೋರ್ಟ್ ಈ ಹಾಡನ್ನು ಪ್ರಸಾರ ಮಾಡದಂತೆ ಆದೇಶ ಹೊರಡಿಸಿತ್ತು. ಬಳಿಕ ಹೊಂಬಾಳೆ ಫಿಲ್ಮ್ಸ್ ಕೇರಳ ಹೈಕೋರ್ಟ್ ಮೊರೆ ಹೋಗಿತ್ತು. ಸ್ಥಳಿಯ ನ್ಯಾಯಾಲದ ತೀರ್ಪಿನ ವಿರುದ್ಧ ಹೊಂಬಾಳೆ ಸಲ್ಲಿಸಿದ್ದ ಅರ್ಜಿಗಳನ್ನು ಸಿಎಸ್ ಡಯಾಸ್ ನೇತೃತ್ವದ ಏಕ ಪೀಠವು ವಜಾಗೊಳಿಸಿದೆ. ಅರ್ಜಿದಾರರಿಗೆ ಇತರ ಕಾನೂನು ಪರಿಹಾರಗಳನ್ನು ಅನುಸರಿಸಲು ಹೈಕೋರ್ಟ್ ಅನುಮತಿ ನೀಡಿದೆ. 

Follow Us:
Download App:
  • android
  • ios