ಟೀಸರ್-ಪೋಸ್ಟರ್‌ಗಳನ್ನು ಕೂಡಲೇ ಡಿಲೀಟ್ ಮಾಡಿ; ರಿಷಬ್ ಶೆಟ್ಟಿಗೆ ವಾರ್ನಿಂಗ್!

ರಿಷಬ್ ಶೆಟ್ಟಿ ನಟಿಸುತ್ತಿರುವ ಜೈ ಹನುಮಾನ್ ಸಿನಿಮಾ ಆರಂಭದಲ್ಲೇ ಕಾನೂನು ಸಮಸ್ಯೆಗೆ ಸಿಲುಕಿದೆ. ಆಂಜನೇಯನ ಪಾತ್ರಧಾರಿಯ ಬಿಂಬಣೆ ಆಕ್ಷೇಪಾರ್ಹ ಎಂದು ಹೈಕೋರ್ಟ್ ವಕೀಲರು ಕೇಸ್ ದಾಖಲಿಸಿದ್ದಾರೆ. ರಿಷಬ್ ಶೆಟ್ಟಿ, ನಿರ್ಮಾಪಕರು ಮತ್ತು ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

Kantara fame Divine Star Rishab Shetty is in Jai hanuman movie Controversy

ಪ್ರಶಾಂತ್ ವರ್ಮಾ (Prasanth Varma) ನಿರ್ದೇಶನದಲ್ಲಿ, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಮಹತ್ವಾಕಾಂಕ್ಷೆಯಿಂದ ಸಿದ್ದವಾಗ್ತಾ ಇದ್ದ ಜೈ ಹನುಮಾನ್ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ (Rishab Shetty) ಕೂಡ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ರು. ಆದ್ರೆ ಅರಂಭದಲ್ಲೇ ಸಿನಿಮಾಗೆ ಕಾನೂನು ಕಂಟಕ ಎದುರಾಗಿದೆ. ಇದನ್ನ ಚಿತ್ರ ತಂಡ ಹೇಗೆ ಎದುರಿಸುತ್ತೆ. ಜೈ ಹನುಮಾನ್ (Jai Hanuman) ಭವಿಷ್ಯ ಏನಾಗುತ್ತೆ ಅನ್ನೋ ಕುತೂಹಲ ಈಗ ಮನೆಮಾಡುತ್ತಿದೆ. ಯಾಕೆ ಪದೇಪದೇ ಹಿಂದು ದೇವರ ಸಿನಿಮಾಗಳೇ ವಿವಾದಕ್ಕೆ ಈಡಾಗುತ್ತಿದೆ? ಈ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸತೊಡಗಿದ್ದಾರೆ.

ಕಾಂತಾರ ಗ್ಲೋಬಲ್ ಸಕ್ಸಸ್ ನಂತರ ರಿಷಬ್ ಶೆಟ್ಟಿ ತಮ್ಮ ಪಾಡಿಗೆ ತಾವು ಸೈಲೆಂಟ್ ಆಗಿ ಕೆಲಸ ಮಾಡಿಕೊಂಡು ಹೋಗ್ತಾ ಇದ್ದಾರೆ. ಆದ್ರೂ ಅದ್ಯಾಕೋ ರಿಷಬ್​ಗೆ ವಿವಾದಗಳು ಮೇಲಿಂದ ಮೇಲೆ ಬೆನ್ನು ಬೀಳ್ತಾ ಇವೆ. ಇತ್ತೀಚಿಗೆ ಅನೌನ್ಸ್ ಆದ ಶಿವಾಜಿ ಸಿನಿಮಾ ಬಗ್ಗೆ ಅನೇಕರು ಪ್ರತಿಭಟನೆ ಮಾಡಿದ್ರು. ಮತ್ತೀಗ ರಿಷಬ್ ನಟಿಸ್ತಾ ಇರೋ ಜೈ ಹನುಮಾನ್ ಕೂಡ ವಿವಾದಕ್ಕೆ ಸಿಲುಕಿದ್ದು, ರಿಷಬ್ ಮೇಲೆ ಕೇಸ್ ದಾಖಲಾಗಿದೆ.

ಕನ್ನಡದ ಈ ಐದು ನಕ್ಷತ್ರಗಳು ಯಾರು? AI ಕೊಟ್ಟಿರುವ ಫೋಟೋ ನೋಡಿ ಹೇಳುವಿರಾ?

ಹೌದು, ಅದ್ಯಾಕೋ ರಿಷಬ್ ಶೆಟ್ಟರಿಗೆ ಬೇಡ ಬೇಡ ಅಂದರೂ ವಿವಾದಗಳು ಬೆನ್ನು ಬೀಳ್ತಾ ಇವೆ. ಕಾಂತಾರ ವರ್ಲ್ಡ್ ವೈಡ್ ಸಕ್ಸಸ್ ಕಂಡ ಮೇಲೆ ಕಾಂತಾರ ಚಾಪ್ಟರ್-1 ರೆಡಿ ಮಾಡ್ತಾ ಇರೋ ಶೆಟ್ಟರು ಅದಕ್ಕಾಗಿ ದೊಡ್ಡ ಶ್ರಮ ಹಾಕ್ತಾ ಇದ್ದಾರೆ. ಆದ್ರೆ ಕಾಂತಾರನಲ್ಲಿ ದೈವಕೋಲ ಬಳಸಿಕೊಳ್ಳೋ ಬಗ್ಗೆ ಕೆಲವರು ಆಕ್ಷೇಪ ಎತ್ತಿದ್ರು. ಈ ಸಿನಿಮಾಗೆ ಕರೆಸಿದ ಸಹಕಲಾವಿದರನ್ನ ಸರಿಯಾಗಿ ನೋಡಿಕೊಂಡಿಲ್ಲ ಅನ್ನೋ ಆರೋಪ ಕೂಡ ಕೇಳಿಬಂದಿತ್ತು.

ಇನ್ನೂ ಇತ್ತೀಚಿಗೆ ರಿಷಬ್ ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್​ನಲ್ಲಿ ನಟಿಸೋ ವಿಷಯ ಅನೌನ್ಸ್ ಆಗಿದೆ. ಈ ಸುದ್ದಿ ಬರ್ತಾನೇ ಅನೇಕರು ರಿಷವ್ ವಿರುದ್ದ ಮುಗಿಬಿದ್ದಿದ್ರು. ಶಿವಾಜಿ ಕನ್ನಡ ವಿರೋಧಿ, ರಿಷಬ್ ಯಾಕೆ ಈ ಪಾತ್ರ ಮಾಡಬೇಕು ಅಂತ ಆಕ್ಷೇಪ ಎತ್ತಿದ್ರು. ಮತ್ತೀಗ ಒನ್ಸ್ ಅಗೈನ್ ಜೈ ಹನುಮಾನ್ ಸಿನಿಮಾ ಕೂಡ ವಿವಾದಕ್ಕೆ ಸಿಲುಕಿದೆ.

ವಿಷ್ಣುವರ್ಧನ್-ಪ್ರೇಮಾ ಜೋಡಿಯ ಪರ್ವ ಮುಗ್ಗರಿಸಿತ್ತಾ? ಸೀಕ್ರೆಟ್ ಈಗ ಹೊರಬಿತ್ತು!

ಹೌದು, ರಿಷಬ್ ಶೆಟ್ಟಿ ಅಭಿನಯದ ಜೈ ಹನುಮಾನ್ ಚಿತ್ರದ ವಿರುದ್ಧ ಹೈಕೋರ್ಟ್ ವಕೀಲ ಮಾಮಿದಾಳ್ ತಿರುಮಲ್ ರಾವ್ ಎಂಬುವವರು ಪ್ರಕರಣ ದಾಖಲಿಸಿದ್ದಾರೆ. ಜೈ ಹನುಮಾನ್ ಚಿತ್ರದಲ್ಲಿ ಆಂಜನೇಯನ ಪಾತ್ರ ಪೋಷಣೆ ಆಕ್ಷೇಪಾರ್ಹವಾಗಿದೆ ಅಂತ ವಾದ ಮಾಡಿರುವ ವಕೀಲ ಮಾಮಿದಾಳ್ ತಿರುಮಲ್ ರಾವ್, ರಿಷಬ್ ಶೆಟ್ಟಿ ಅವರ ಮುಖವನ್ನೇ ಹನುಮಂತನ ಮುಖವೆನ್ನುವಂತೆ ಚಿತ್ರದಲ್ಲಿ ಬಿಂಬಿಸುವ ಪ್ರಯತ್ನವನ್ನ ಮಾಡಲಾಗುತ್ತಿದೆ ಅಂತ ಆರೋಪಿಸಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಹನುಮಂತನ ಮುಖ ವಾನರ ಮುಖವನ್ನ ಹೋಲುತ್ತದೆ ಆದರೆ ಜೈ ಹನುಮಾನ್ ಚಿತ್ರದಲ್ಲಿ ರಿಷಬ್ ಶೆಟ್ಟಿಯ ಮುಖವನ್ನ ಸಾಮಾನ್ಯ ಮನುಷ್ಯನ ಮುಖದಂತೆ ತೋರಿಸಲಾಗಿದೆ ಎಂದಿರುವ ತಿರುಮಲ್ ರಾವ್ ಈ ಮೂಲಕ ಮುಂಬರುವ ಪೀಳಿಗೆಯ ದಾರಿಯನ್ನು ತಪ್ಪಿಸುವ ಕೆಲಸವನ್ನು ರಿಷಬ್ ಶೆಟ್ಟಿ ಮತ್ತು ತಂಡದವರು ಮಾಡುತ್ತಿದ್ದಾರೆ ಅಂತ ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ಈ ವಿಚಾರವಾಗಿ ನಟ ರಿಷಬ್ ಶೆಟ್ಟಿ, ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ಮೇಲೆ ಕೇಸ್ ದಾಖಲಾಗಿದೆ. 
ಅರ್ಧ ದೇಹ ಬಿಟ್ಕುಕೊಳ್ಳುವ ಹುಡ್ಗೀರಿಗೆ ಅಣ್ಣಾವ್ರು ಹೇಳಿದ ಕಿವಿ ಮಾತಿದು!

ಸೃಜನಾತ್ಮಕ ಸ್ವಾತಂತ್ರ್ಯದ ಹೆಸರಿನಲ್ಲಿ ಇದೆಲ್ಲದಕ್ಕೆ ಅನುಮತಿಯನ್ನು ನೀಡಿದರೆ ಮುಂಬರುವ ದಿನಗಳಲ್ಲಿ ಗಣೇಶ ಅಥವಾ ವರಾಹ ಸ್ವಾಮಿಯಂತಹ ಪೂಜ್ಯ ದೇವಾನುದೇವತೆಗಳನ್ನು ಕೂಡ ಇವರು ತಮಗೆ ಬೇಕಾದಂತೆ  ಚಿತ್ರೀಕರಿಸುತ್ತಾರೆ.    ಎಲ್ಲ ಪೌರಾಣಿಕ ಚಿತ್ರಗಳಲ್ಲಿ ಈ ಹಿಂದೆ ಭಜರಂಗಿಯ ಪಾತ್ರವನ್ನು ತೋರಿಸಿದ್ದಕ್ಕಿಂತಲೂ ಭಿನ್ನವಾಗಿ ಜೈ ಹನುಮಾನ್ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಹನುಮಂತನ ಪಾತ್ರವನ್ನು ತಿದ್ದುವ ಕೆಲಸ ಮಾಡುವ ಮೂಲಕ ಹಿಂದೂಗಳ ಭಾವನೆಗೆ ಚಿತ್ರತಂಡ ಧಕ್ಕೆಯುಂಟು ಮಾಡಿದೆ. ಬಿಡುಗಡೆ ಮಾಡಲಾದ ಟೀಸರ್ ಮತ್ತು ಪೋಸ್ಟರ್‌ಗಳನ್ನು ಚಿತ್ರತಂಡ ಕೂಡಲೇ ಹಿಂಪಡೆಯಬೇಕು, ಡಿಲೀಟ್ ಮಾಡಬೇಕು..' ಎಂದು ಆ ವಕೀಲರು ಆಗ್ರಹಿಸಿದ್ದಾರೆ. 

Latest Videos
Follow Us:
Download App:
  • android
  • ios