ಕೆಜಿಎಫ್‌ 2 ಚಿತ್ರಕ್ಕೆ UA ಸರ್ಟಿಫಿಕೇಟ್, 168 ನಿಮಿಷ ಸಿನಿಮಾ ಇದು. 

1. ಕೆಜಿಎಫ್‌ 2 ಸಿನಿಮಾದ ಅವಧಿ 2 ಗಂಟೆ 48 ನಿಮಿಷ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್‌ ಸಿಕ್ಕಿದ್ದು, 12 ವರ್ಷ ಕೆಳಗಿನ ಮಕ್ಕಳು ಮಾತ್ರ ಪೋಷಕರ ಜೊತೆಗೆ ಈ ಸಿನಿಮಾ ನೋಡಬಹುದಾಗಿದೆ. ಏ.14ರಂದು ಐದು ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ.

2. ಕೆಜಿಎಫ್‌ 2 ಚಿತ್ರದ ಪ್ರಮೋಷನಲ್‌ ಕಾರ್ಯಕ್ರಮಗಳು ಶುರುವಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ವಿಮಾನದಲ್ಲಿ ಚಿತ್ರತಂಡ ಪ್ರವಾಸ ಹೊರಟಿದೆ. ಯಶ್‌, ಶ್ರೀನಿಧಿ ಶೆಟ್ಟಿವಿಮಾನದಲ್ಲಿ ಕುಳಿತಿರುವ ಫೋಟೋಗಳನ್ನು ಚಿತ್ರತಂಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

3. ಯಶ್‌ ನಟನೆಯ ‘ಕೆಜಿಎಫ್‌ 1’ ಚಿತ್ರವನ್ನು ಏ. 8ರಿಂದ ಏ.13ರವರೆಗೆ ದೇಶಾದ್ಯಂತ ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಚಿತ್ರವನ್ನು ವಿನಾಯಿತಿ ದರದಲ್ಲಿ ಈ ಪ್ರದರ್ಶನ ಮಾಡಲಾಗುವುದು ಎಂದು ಚಿತ್ರತಂಡ ಪ್ರಕಟಿಸಿದೆ.

ಸೆನ್ಸಾರ್ ಮಂಡಳಿಯು ನೀಡಿರುವ ಪ್ರಮಾಣ ಪತ್ರದಲ್ಲಿ ನಮೂದಾಗಿರುವಂತೆ ಮೊದಲ ಭಾಗ 'ಕೆಜಿಎಫ್' ಚಿತ್ರಗಿಂತಲೂ ಚಾಪ್ಟರ್ 2 ಸಿನಿಮಾ ಹದಿಮೂರು ನಿಮಿಷಗಳ ಕಾಲ ಹೆಚ್ಚಿದೆ. 'ಕೆಜಿಎಫ್' ಮೊದಲ ಭಾಗ 2 ಗಂಟೆ 35 ನಿಮಿಷಗಳ ಕಾಲಾವಧಿಯಲ್ಲಿತ್ತು. ಆದರೆ ಚಾಪ್ಟರ್ 2 ಸಿನಿಮಾ 2 ಗಂಟೆ 48 ನಿಮಿಷದ್ದಾಗಿದೆ. ಸದ್ಯ ಯಶ್ ನಟನೆಯ 'ಕೆಜಿಎಫ್ 2' ರಿಲೀಸ್‌ಗೆ ಭರದಿಂದ ಸಿದ್ಧತೆ ನಡೆದಿದೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಆಯಾ ಭಾಷೆಯ ಅಭಿಮಾನಿಗಳು ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದೆ.

'ಕೆಜಿಎಫ್​: ಚಾಪ್ಟರ್​ 2' ಪ್ರಚಾರ ಶುರು: 'ಕೆಜಿಎಫ್ 2' ಚಿತ್ರ ಪ್ಯಾನ್​ ಇಂಡಿಯಾ (Pan India) ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಯಶ್​ ನಟನೆಯ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ (Fans) ಸಖತ್​ ನಿರೀಕ್ಷೆ ಇದೆ. ನಿರೀಕ್ಷೆಗೆ ತಕ್ಕ ರೀತಿಯಲ್ಲೇ ಸಿನಿಮಾದ ಪ್ರಮೋಷನ್ (Promotion)​ ಮಾಡಲಾಗುತ್ತಿದೆ. ಇಡೀ ಚಿತ್ರತಂಡ ಈಗ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಪ್ರಚಾರ ಮಾಡಲು ಸಜ್ಜಾಗಿದೆ. ಈ ಮಧ್ಯೆ ಯಶ್ ಸಿನಿಮಾದ ಪ್ರಮೋಷನ್‌ಗಾಗಿ ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ (Viral) ಆಗುತ್ತಿದೆ. 

"

ಇನ್ನು 'ಕೆಜಿಎಫ್ 2' ಸಿನಿಮಾ ಕನ್ನಡ, ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದ್ದು ವಿಶ್ವದಾದ್ಯಂತ ಏಳು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು (Vijay Kiragandur) ತಿಳಿಸಿದ್ದಾರೆ. ಕರ್ನಾಟಕದಲ್ಲೇ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದ್ದು, ತಮಿಳಿನಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ಪ್ರದರ್ಶನ ಕಾಣಲಿದೆ. ಹಾಗೆಯೇ ವಿವಿಧ ಭಾಷೆಯ ಚಿತ್ರಮಂದಿರಗಳ ಸಾವಿರಾರು ಚಿತ್ರಮಂದಿರಗಳಲ್ಲಿ 'ಕೆಜಿಎಫ್​: ಚಾಪ್ಟರ್​ 2' ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ. ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರದಲ್ಲಿ ಸಂಜಯ್‌ ದತ್, ರವೀನಾ ಟಂಡನ್‌, ಶ್ರೀನಿಧಿ ಶೆಟ್ಟಿ ಮತ್ತಿತರರ ತಾರಾಗಣವಿದೆ.