ಕಡತೀರದಲ್ಲಿ ನಿಂತು ಮಾಸ್ಟರ್ ಪ್ಲಾನ್ ಮಾಡುತ್ತಿರುವ ರಾಕಿ ಬಾಯ್. ಇನ್ನು ಮುಂದೆ ಕೆಜಿಎಫ್‌2 ಅಖಾಡದಿಂದ ಓನ್ಲಿ ಗುಡ್ ನ್ಯೂಸ್.... 

ವಾ, ಅಮೇಜಿಂಗ್, ಮಾರ್ವಲೆಸ್‌, ಫೆಂಟಾಸ್ಟಿಕ್ ಎಂದು ಪದಗಳನ್ನು ಇಡೀ ಭಾರತೀಯ ಚಿತ್ರರಂಗ ಹೇಳುವಂತೆ ಮಾಡಿದ್ದು ನಮ್ಮ ಹೆಮ್ಮೆಯ ಕೆಜಿಎಫ್‌ ಚಾಪ್ಟರ್‌ 1. ಪ್ಯಾನ್‌ ಇಂಡಿಯಾ ಸಿನಿಮಾ ಬ್ಲಾಕ್‌ ಬಸ್ಟರ್ ಹಿಟ್ ಆಗುತ್ತಿದ್ದಂತೆ, ನಿರ್ದೇಶಕ ಪ್ರಶಾಂತ್ ನೀಲ್ ಚಾಪ್ಟರ್ 2 ಅನೌನ್ಸ್ ಮಾಡಿದರು. ಕುತೂಹಲ ಹೆಚ್ಚಿಸಿದ್ದು, ಎಂಡಿಂಗ್ ಮಿಸ್ ಮಾಡದೇ ಚಾಪ್ಟರ್ 2 ನೋಡಲು ಯಶ್ ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ಚಿತ್ರ ರಿಲೀಸ್ ಆಗುವುದು ಲೇಟ್ ಆದರೂ, ಪ್ರೇಕ್ಷಕರು ಮಾತ್ರ ಕುತೂಹಲವನ್ನು ಕಡಿಮೆ ಮಾಡಿ ಕೊಂಡಿಲ್ಲ.

"

ಚಾಪ್ಟರ್ 2ರಲ್ಲಿರುವ ತಾರಾ ಬಳಗ, ಪೋಸ್ಟರ್ ಲುಕ್, ಟೀಸರ್‌ ರಿಲೀಸ್‌..ಹೀಗೇ ಚಿತ್ರತಂಡ ಆಗಾಗ ಒಂದೊಂದೇ ಗುಡ್‌ ನ್ಯೂಸ್‌ ರಿವೀಲ್ ಮಾಡುತ್ತಿತ್ತು. ಮುಖ್ಯ ಭಾಗದ ಚಿತ್ರೀಕರಣ ಮಾತ್ರ ಬಾಕಿ ಉಳಿದಿತ್ತು. ಆದರೆ ಕೊರೋನಾ ಲಾಕ್‌ಡೌನ್‌ನಿಂದ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಾದವು. ಸರ್ಕಾರ ಚಿತ್ರಮಂದಿರಗಳನ್ನು ತೆರಯಬೇಕೆಂದು ಘೋಷಿಸುತ್ತಿದ್ದಂತೆ ರಾಕಿ ಚಿತ್ರಕರಣ ಪ್ರಾರಂಭಿಸಿದ್ದಾರೆ. 

ಕೆಜಿಎಫ್-2 ಕ್ಲೈಮ್ಯಾಕ್ಸ್: ಯಶ್‌ ವರ್ಕೌಟ್‌ನಲ್ಲಿ ಬ್ಯುಸಿ 

View post on Instagram

ಸತತ 8 ತಿಂಗಳ ನಂತರ ಕೆಜಿಎಫ್ ಚಿತ್ರತಂಡ ಶೂಟಿಂಗ್ ಪ್ರಾರಂಭಿಸಿದೆ. ಮಂಗಳೂರಿನ ಕಡಲ ತೀರದಲ್ಲಿ ನಡೆಯುವ ಸನ್ನಿವೇವನ್ನು ಚಿತ್ರೀಕರಣ ಮಾಡಿದ್ದಾರೆ. ಈ ಸಮಯದಲ್ಲಿ ಸೆರೆ ಹಿಡಿದ ಫೋಟೋವನ್ನು ಯಶ್ ಶೇರ್ ಮಾಡಿಕೊಂಡಿದ್ದಾರೆ. 'ಅಲೆಗಳನ್ನು ನಿಲ್ಲಿಸಲಾಗುವುದಿಲ್ಲ ಆದರೆ ನೀವು ಅದರ ಜೊತೆ ನೌಕಾಯಾನ ಮಾಡಲು ಕಲಿಯಬಹುದು. ಲಾಂಗ್ ಬ್ರೇಕ್‌ ನಂತರ ರಾಕಿ ಜರ್ನಿ ಆರಂಭಿಸಿದ್ದಾರೆ,' ಎಂದು ಯಶ್ ಬರೆದುಕೊಂಡಿದ್ದಾರೆ.

ನನ್ನ ರಾಜಕುಮಾರನಿಗೆ 11 ತಿಂಗಳು ಎಂದ ರಾಧಿಕಾ..! ಮಮ್ಮ ಫುಲ್ ಹ್ಯಾಪಿ

ಇನ್ನು ನಟಿ ಶ್ರೀನಿಧಿ ಶೆಟ್ಟಿ ಮತ್ತು ಪ್ರಶಾಂತ್ ನೀಲ್ ವಿಮಾನ ನಿಲ್ದಾಣದಲ್ಲಿರುವ ಸೆಲ್ಫಿ ಫೋಟೋ ಶೇರ್ ಮಾಡಿಕೊಂಡಿದ್ದರು. ಫೋಟೋ ಕ್ಲಿಕ್ ಮಾಡುವುದಕ್ಕೆ ಪ್ರಶಾಂತ್‌ ನೀಲ್‌ರನ್ನು ಗೋಳೋಯ್ಕೊಳಕ್ಕೆ ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಎಲ್ಲರಿಗಿಂತ ಅತಿ ಹೆಚ್ಚು ಕುತೂಹಲ ಹೆಚ್ಚಿಸಿರುವ ಅಧೀರನ ಪಾತ್ರಧಾರಿ ಸಂಜಯ್ ದತ್ ಕೆಲವೇ ದಿನಗಳಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.