ಚಿತ್ರರಂಗದಲ್ಲಿ ಹಿರಿಯ ನಿರ್ದೇಶಕರ ಜೊತೆ ನಿರ್ದೇಶನದಲ್ಲಿ ಪಳಗಿ ಸ್ವತಂತ್ರ ನಿರ್ದೇಶಕನಾಗಿ ಹೊರಹೊಮ್ಮಿರುವ ವಿಕ್ರಮ್ ಪ್ರಭು ಚೊಚ್ಚಲ ಚಿತ್ರ ‘ವೆಡ್ಡಿಂಗ್ ಗಿಫ್ಟ್’.
ಚಿತ್ರರಂಗದಲ್ಲಿ ಹಿರಿಯ ನಿರ್ದೇಶಕರ ಜೊತೆ ನಿರ್ದೇಶನದಲ್ಲಿ ಪಳಗಿ ಸ್ವತಂತ್ರ ನಿರ್ದೇಶಕನಾಗಿ ಹೊರಹೊಮ್ಮಿರುವ ವಿಕ್ರಮ್ ಪ್ರಭು ಚೊಚ್ಚಲ ಚಿತ್ರ ‘ವೆಡ್ಡಿಂಗ್ ಗಿಫ್ಟ್’. ನಿರ್ದೇಶನದ ಜೊತೆ ಮೊದಲ ಸಿನಿಮಾದಲ್ಲೇ ಸ್ವಂತ ಬ್ಯಾನರ್ ಮೂಲಕ ನಿರ್ಮಾಣಕ್ಕೂ ಕೈ ಹಾಕಿರುವ ವಿಕ್ರಮ್ ಪ್ರಭು ತಾವು ಕೈಗೆತ್ತಿಕೊಂಡಿರೋ ಕಂಟೆಂಟ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಂತೆಯೇ ಅಷ್ಟೇ ಕಲರ್ ಫುಲ್ ಆಗಿಯೂ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಹಾಡುಗಳ ಮೂಲಕ ಸುದ್ದಿಯಲ್ಲಿರುವ ಈ ಚಿತ್ರ ಇಂದು ಮತ್ತೊಂದು ಸುಂದರ ಹಾಡುನ್ನು ಬಿಡುಗಡೆ ಮಾಡಿದೆ.
ಜಯಂತ್ ಕಾಯ್ಕಿಣಿ ಪೋಣಿಸಿರುವ ಸಾಹಿತ್ಯದ ಸವಿ ಇರುವ ರೋಮಾಂಚಕ ಸಾಂಗ್ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು ಚೆಂದದ ಮ್ಯೂಸಿಕ್ ಕಂಪೋಸ್ ಮಾಡೋದ್ರ ಜೊತೆಗೆ ಹಾಡಿಗೆ ದನಿಯಾಗಿದ್ದಾರೆ. ಹೈಟ್ ಮಂಜು ಕೋರಿಯೋಗ್ರಫಿ ಕೂಡ ಗಮನ ಸೆಳೆಯುತ್ತದೆ. ಹಿತವಾದ ಫೀಲ್ ಕೊಡೋ ಸಾಂಗ್ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಮಲೆಯಾಳಂ ಸೇರಿ ಹಲವು ಭಾಷೆಗಳಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ನಿಶಾನ್ ನಾಣ್ಯಯ್ಯ ಚಿತ್ರದ ನಾಯಕ. ಕನ್ನಡದಲ್ಲಿ ಇದು ಇವರ ಮೊದಲ ಸಿನಿಮಾ. ಸೋನು ಗೌಡ ನಿಶಾನ್ ನಾಣಯ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಸಾರದಲ್ಲಿ ನಾನು ಎಂಬುದು ಯಾವಾಗ ಬರುತ್ತೋ ಆಗ ಇಬ್ಬರ ನಡುವಿನ ಸಂಬಂಧ ಬೇರೆ ತಿರುವು ಪಡೆಯುತ್ತೆ ಅಂತಹದ್ದೊಂದು ಸುಂದರ ಹಾಗೂ ಮನರಂಜನಾತ್ಮಕ ಕಥೆ ವೆಡ್ಡಿಂಗ್ ಗಿಫ್ಟ್ ನಲ್ಲಿದೆ.
ವೆಡ್ಡಿಂಗ್ ಗಿಫ್ಟ್ ಆಡಿಯೋ ರಿಲೀಸ್; ಜೂನ್ ತಿಂಗಳಲ್ಲಿ ಸಿನಿಮಾ ರಿಲೀಸ್
ಉದಯ್ ಲೀಲಾ ಕ್ಯಾಮೆರಾ ನಿರ್ದೇಶನ, ಬಾಲಚಂದ್ರ ಪ್ರಭು ಸಂಗೀತ, ವಿಜೇತ ಚಂದ್ರ ಸಂಕಲನ ವೆಡ್ಡಿಂಗ್ ಗಿಫ್ಟ್ ಚಿತ್ರಕ್ಕಿದೆ. ಸ್ಯಾಂಡಲ್ ವುಡ್ ಎವರ್ ಗ್ರೀನ್ ನಟಿ ಪ್ರೇಮ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್ ಮಾಡಿರೋದು ಈ ಚಿತ್ರದ ಸ್ಪೆಷಲ್ ಸಂಗತಿಗಳಲ್ಲೊಂದು. ವಿಕ್ರಮ್ ಪ್ರಭು ಫಿಲಂಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದು ಸದ್ಯದಲ್ಲೇ ಚಿತ್ರಮಂದಿರಕ್ಕೆ ಬರಲಿದೆ.

