Asianet Suvarna News Asianet Suvarna News

ಎಲ್ಲಾ ದುರಭ್ಯಾಸಗಳಿಂದ ದೂರವಿದ್ದರೂ ಕನ್ನಡ ಖಳನಟ ಸುಧೀರ್ ಸತ್ತಿದ್ದು ಹೇಗೆ?

ಕನ್ನಡದ ನಟ ಸುಧೀರ್ ಅವರು ಅಂದು ಸಾಕಷ್ಟು ಬೇಡಿಕೆಯಿದ್ದ ನಟರಾಗಿದ್ದರು. ಮುಖ್ಯ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಸಿನಿಮಾರಂಗದ ಅವಿಭಾಜ್ಯ ಅಂಗವೇ ಆಗಿಬಿಟ್ಟಿದ್ದರು ಸುಧೀರ್. ಹೆಚ್ಚಾಗಿ ಖಳನಟನ ಪಾತ್ರದಲ್ಲಿಯೇ ಅವರು ಮಿಂಚಿದ್ದರು..

Kannada villain actor Sudheer died from dust allergy happened in shooting srb
Author
First Published Aug 25, 2024, 12:13 PM IST | Last Updated Aug 25, 2024, 12:13 PM IST

ಕನ್ನಡದ ಖ್ಯಾತ ಖಳನಟ ಸುಧೀರ್ (Sudheer) ಅವರು ತಮ್ಮ ವೈಯಕ್ತಿಕ ಹಾಗು ವೃತ್ತಿ ಜೀವನ ಎರಡರಲ್ಲೂ ತುಂಬಾ ಶಿಸ್ತನ್ನು ಕಾಪಾಡಿಕೊಂಡಿದ್ದರು. ಅವರು ಸಿನಿಮಾಗಳಲ್ಲಿ ಹಾಗು ಪರ್ಸನಲ್ ಲೈಫ್‌ನಲ್ಲಿ ಧೂಮಪಾನ, ಮದ್ಯಪಾನ ಮುಂತಾದ ಕೆಟ್ಟ ಚಟಗಳಿಂದ ದೂರವೇ ಉಳಿದಿದ್ದರು. ದೂರ ಉಳಿದಿದ್ದು ಮಾತ್ರವಲ್ಲ, ಅಂತಹ ದೃಶ್ಯಗಳಲ್ಲಿ ನಟರಾಗಿ ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ. ಅದರೂ ಕೂಡ 52 ವರ್ಷಕ್ಕೇ ಕೊನೆ ಉಸಿರೆಳೆದುಬಿಟ್ಟರು. 

ನಟ ಸುಧೀರ್ ಅವರಿಗೆ ಸೀರಿಯಸ್ ಡಸ್ಟ್ ಅಲರ್ಜಿ ಖಾಯಿಲೆ ಇತ್ತು ಎನ್ನಲಾಗಿದೆ. ದಂಡನಾಯಕ ಸಿನಿಮಾದ ಚಿತ್ರೀಕರಣದಲ್ಲಿ ಇದ್ದರು ನಟ ಸುಧೀರ್. ಅವರು ಮೇಲಿನಿಂದ ಜಿಗಿಯಬೇಕಾದ ಸನ್ನಿವೇಶ ಇತ್ತು. ಅದಕ್ಕೆ ಡ್ಯೂಪ್ ಕಲಾವಿದರು ಇದ್ದರು. ಆದರೆ, ಅವರು ಬಂದಿರಲಿಲ್ಲ. ಹೀಗಾಗಿ ಸ್ವತಃ ನಟ ಸುಧೀರ್ ಅವರೇ ಮೇಲಿನಿಂದ ಕೆಳಕ್ಕೆ ಜಿಗಿದುಬಿಟ್ಟರು. ಕಳಗೆ ಹಾಕಿದ್ದ ಬೆಡ್‌ನಲ್ಲಿ ವಿಪರೀತ ಎನ್ನುವಷ್ಟು ಧೂಳು ಇದ್ದು, ಅದು ಒಂದೇ ಬಾರಿ ಮೇಲಕ್ಕೆ ಎದ್ದು ಬಿಡುತ್ತೆ.

ಅಪ್ಪು ಟೈಟಲ್ ಬಿಡುಗಡೆ ಮಾಡಿದ್ದ ಚಿತ್ರದ ಟ್ರೈಲರ್ ಲಾಂಚ್ ಮಾಡಿದ ಚಿನ್ನೇಗೌಡ್ರು & ಪ್ರೇಮಾ

ಹಾಗೆ ಎದ್ದ ಧೂಳು ನಟ ಸುಧೀರ್ ಅವರ ಶ್ವಾಸಕೋಶವನ್ನು ಸೇರಿಕೊಂಡಿದೆ. ಆ ಕಾಲದಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ ಇರಲಿಲ್ಲ. ಹೀಗಾಗಿ ಅವರು ಅನಿವಾರ್ಯವಾಗಿ ಆಕ್ಸಿಜನ್ ಸಿಲೀಂಡರ್ ಹಾಕಿಕೊಂಡೇ ಐದಾರು ತಿಂಗಳು ಕಳೆದರು. ಆದರೆ, ವಿಧಿಯಾಟ ಬೇರೆಯೇ ಇತ್ತು ಎಂಬಂತೆ, ನಟ ಸುಧೀರ್ ಅವರು ಯಾವುದೇ ಚಿಕಿತ್ಸೆಯೂ ಫಲಕಾರಿಯಾಗದೇ ಕೊನೆಯುಸಿರು ಎಳೆದುಬಿಟ್ಟರು. ಕನ್ನಡದ ಖ್ಯಾತ ಕಲಾವಿದರೊಬ್ಬರು ಡಸ್ಟ್‌ ಅಲರ್ಜಿ ರೋಗಕ್ಕೆ ಹೀಗೆ ಬಲಿಯಾದರು. 

ಹೌದು, ಕನ್ನಡದ ನಟ ಸುಧೀರ್ ಅವರು ಅಂದು ಸಾಕಷ್ಟು ಬೇಡಿಕೆಯಿದ್ದ ನಟರಾಗಿದ್ದರು. ಮುಖ್ಯ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಸಿನಿಮಾರಂಗದ ಅವಿಭಾಜ್ಯ ಅಂಗವೇ ಆಗಿಬಿಟ್ಟಿದ್ದರು ಸುಧೀರ್. ಹೆಚ್ಚಾಗಿ ಖಳನಟನ ಪಾತ್ರದಲ್ಲಿಯೇ ಅವರು ಮಿಂಚಿದ್ದರು. ಆಗೊಮ್ಮೆ ಈಗೊಮ್ಮೆ ಅವರು ಹಾಸ್ಯ ನಟರಾಗಿ ಕೂಡ ನಟಿಸಿದ್ದರೂ ಜನರು ಅವರನ್ನು ಹೆಚ್ಚಾಗಿ ವಿಲನ್ ರೋಲ್‌ನಲ್ಲೇ ಕಾಣಿಸಿಕೊಂಡು ಖ್ಯಾತರಾಗಿದ್ದರು. 

ಇದೇನು ಅನುಶ್ರೀ.. ಪ್ರೇಮ ಪುರಾಣ ಹೇಳೋಕೆ ಇಷ್ಟೊಂದು ಬಿಲ್ಡಪ್ಪು..? ನಿಮ್ದೆನಾ ಅಂತಿದಾರೆ!

ನಟ ಸುಧೀರ್ ಸಾವಿನಿಂದ ಕನ್ನಡದಲ್ಲಿ ವಿಲನ್ ಪಾತ್ರಕ್ಕೆ ಅಂದು ಸೂಕ್ತ ನಟರ ಕೊರತೆ ಎದ್ದು ಕಾಣುತ್ತಿತ್ತು ಎನ್ನಲಾಗಿದೆ. ಆದರೆ, ವಿಧಿಯಾಟದ ಮುಂದೆ ಎಲ್ಲರೂ ಅಸಹಾಯಕರು ಎಂಬಂತೆ, ನಟ ಸುಧೀರ್ ಅರವರಾಗಲೀ ಕನ್ನಡ ಚಿತ್ರರಂಗವಾಗಲೀ ಏನೂ ಮಾಡಲು ಸಾಧ್ಯವಾಗಲಿಲ್ಲ. ಇಂದು ನಟ ಸುಧೀರ್ ಅವರ ಪುತ್ರರಾದ ನಂದ ಕಿಶೋರ್ ಹಾಗೂ ತರುಣ್ ಸುಧೀರ್ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 
 

Latest Videos
Follow Us:
Download App:
  • android
  • ios